ದರ್ಶನ್ ತೆಗೆದುಕೊಂಡಿದ್ದ 'ಚಾಲೆಂಜ್' ಈಗ ಚಿರಂಜೀವಿ ಸರ್ಜಾ ಮುಂದಿದೆ!
Recommended Video

ಒಬ್ಬ ಒಳ್ಳೆಯ ನಟ ವಿಭಿನ್ನ ಪಾತ್ರಗಳನ್ನು ಮಾಡಬೇಕು. ಅದೇ ಹಾಡು.. ಡ್ಯಾನ್ಸ್.. ಅದೇ ಫೈಟ್.. ಎಲ್ಲ ಇದಿದ್ದೇ. ಪ್ರತಿ ನಟ ಕೂಡ ತನ್ನ ಕೆರಿಯರ್ ನಲ್ಲಿ ಒಂದು ಚಾಲೆಂಜಿಂಗ್ ಪಾತ್ರಕ್ಕಾಗಿ ಎದುರು ನೋಡುತ್ತಿರುತ್ತಾರೆ. ಈಗ ಆ ಅವಕಾಶ ಚಿರಂಜೀವಿ ಸರ್ಜಾಗೆ ಸಿಕ್ಕಿದೆ.
'ಸಂಹಾರ' ಸಿನಿಮಾದಲ್ಲಿ ಚಿರು ಪಾತ್ರದ ಬಗ್ಗೆ ಇದೀಗ ಸುದ್ದಿಯೊಂದು ಬಂದಿದೆ. ಈ ಚಿತ್ರದಲ್ಲಿ ಅವರು ಕುರುಡನ ಪಾತ್ರವನ್ನು ಮಾಡುತ್ತಿದ್ದಾರಂತೆ. ಅಂಧನೊಬ್ಬನ ಸೇಡಿನ ಕಥೆಯ ಸಿನಿಮಾ ಇದಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ಕನ್ನಡದಲ್ಲಿ ದರ್ಶನ್ ಇದೇ ರೀತಿಯ ಚಾಲೆಂಜ್ ತೆಗೆದುಕೊಂಡಿದ್ದರು. 'ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ದರ್ಶನ್ ಕುರುಡನ ಪಾತ್ರವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಜೊತೆಗೆ ಕೆಲ ತಿಂಗಳ ಹಿಂದೆ ಬಂದ 'ರಾಗ' ಸಿನಿಮಾ ಕೂಡ ಅಂಧರ ಬಗ್ಗೆಯ ಕಥೆ ಹೊಂದಿತ್ತು.

ಅಂದಹಾಗೆ, 'ಸಂಹಾರ' ಸಿನಿಮಾಕ್ಕೆ ನಟಿ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವಿಭಿನ್ನ ಪಾತ್ರಕ್ಕೆ ಕೈ ಹಾಕಿರುವ ಚಿರು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಆಗಿದೆ.


Click it and Unblock the Notifications











