ಶ್ರುತಿ-ಸರ್ಜಾ 'ಮೀಟೂ' ಕದನಕ್ಕೆ ಕಾಲಿಟ್ಟ ಚಿರು ಸರ್ಜಾ ಏನಂದ್ರು.?
Recommended Video

ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದಾಗ ಇಡೀ ಇಂಡಸ್ಟ್ರಿ ಒಂದು ಕ್ಷಣ ಅಚ್ಚರಿಯಾಗಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸರ್ಜಾ ಕುಟುಂಬಸ್ಥರು, ಶ್ರುತಿ ವಿರುದ್ಧ ಸಿಡಿದೆದ್ದರು.
ಅರ್ಜುನ್ ಸರ್ಜಾ ಅವರ ತಾಯಿ, ಮಾವ ರಾಜೇಶ್, ಅತ್ತೆ, ಮಗಳು, ಪತ್ನಿ, ಅಳಿಯ ಧ್ರುವ ಸರ್ಜಾ, ಪವನ್ ತೇಜ್ ಹೀಗೆ ಎಲ್ಲರೂ ಪ್ರತಿಕ್ರಿಯೆ ನೀಡಿದರು. ಆದ್ರೆ, ಚಿರಂಜೀವಿ ಸರ್ಜಾ ಎಲ್ಲಿಯೂ ಮಾತನಾಡಿರಲಿಲ್ಲ. ಅವರು ಎಲ್ಲಿದ್ದಾರೆ ಎಂಬುದು ಕೂಡ ಗೊತ್ತಾಗಲಿಲ್ಲ.
ಚಿರು ಸರ್ಜಾ ಎಲ್ಲಿ, ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬಂದವು. ಆದ್ರೀಗ, ಚಿರಂಜೀವಿ ಸರ್ಜಾ ಕೂಡ ಈ ಪ್ರಕರಣದ ಕುರಿತು ಮಾತನಾಡಿದ್ದಾರೆ. ತಾನು ಯಾಕೆ ಇಷ್ಟು ದಿನ ಸೈಲೆಂಟ್ ಆಗಿದ್ದೆ, ಎಲ್ಲಿದ್ದೆ ಎಂಬುದನ್ನ ತಿಳಿಸಿದ್ದಾರೆ. ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪದ ಬಗ್ಗೆ ಚಿರು ಸರ್ಜಾ ಏನಂದ್ರು.? ಮುಂದೆ ಓದಿ.....

ಸ್ವಲ್ಪ ಹೊತ್ತು ತಬ್ಬಿಬ್ಬಾದೆ
ಅರ್ಜುನ್ ಅವರ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ಚಿರು ಸರ್ಜಾಗೆ ಅವರಿಗೆ ಅಚ್ಚರಿಯಾಗಿತ್ತಂತೆ. ''ಮೊದಲು ಈ ವಿಷ್ಯ ಕೇಳಿ ನನಗೆ ಶಾಕ್ ಆಯ್ತು. ನಮ್ಮ ಮಾವನ ಮೇಲೆ ಮೀಟೂ ಆರೋಪನಾ ಅಂತ ಸ್ವಲ್ಪ ಹೊತ್ತು ತಬ್ಬಿಬ್ಬಾದೆ'' ಎಂದು ಹೇಳಿಕೊಂಡರು.

ಯಾಕೆ ಇಷ್ಟು ದಿನ ಮಾತನಾಡಿಲ್ಲ
ಅರ್ಜುನ್ ಸರ್ಜಾ ಅವರ ಮೇಲೆ ಬಹಿರಂಗವಾಗಿ ಆರೋಪ ಮಾಡಿದ್ರು ಚಿರು ಯಾಕೆ ಮಾತನಾಡಿಲ್ಲ ಎಂಬ ಕುತೂಹಲಕ್ಕೆ ಸ್ವತಃ ಚಿರು ಉತ್ತರಿಸಿದ್ದಾರೆ. 'ನನಗೆ ಹುಷಾರ್ ಇರಲಿಲ್ಲ. ಹಾಗಾಗಿ ನಾನು ಮಾತನಾಡೋಕೆ ಆಗಿಲ್ಲ. ಈಗ ಆರಾಮಾಗಿದ್ದೇನೆ, ಮಾತನಾಡೋ ಸಮಯ ಬಂದಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಅಂಕಲ್ ಬಗ್ಗೆ ನಮಗೆ ಗೊತ್ತಿದೆ
''ಚಿಕ್ಕ ವಯಸ್ಸಿನಿಂದಲೂ ನಮ್ಮ ಅಂಕಲ್ ಅವರನ್ನ ನೋಡಿಕೊಂಡು ಬಂದಿದ್ದೇನೆ. ಅವರು ಹೇಗೆ ಅಂತ ಎಲ್ಲರಿಗಿಂತ ನಮಗೆ ಚೆನ್ನಾಗಿ ಗೊತ್ತು. ನಮಗೆ ಇದನ್ನ ನಂಬೋಕೆ ಆಗಲಿಲ್ಲ. ಈ ವಿಷ್ಯದಲ್ಲಿ ಅಭಿಮಾನಿಗಳಿಗೆ ಕೋಪ ಬರುವುದು ಸಹಜ. ಇನ್ನು ನಾವು ಫ್ಯಾಮಿಲಿ ಸದಸ್ಯರು ನಮಗೆ ಹೇಗಾಗಿರಬೇಡ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಜುನ್ ಸರ್ಜಾ ಬಗ್ಗೆ ಇಂಡಸ್ಟ್ರಿಗೆ ಗೊತ್ತಿದೆ
ಇನ್ನು ಅರ್ಜುನ್ ಸರ್ಜಾ ಅವರ ಪರವಾಗಿ ಹಿರಿಯ ನಟ, ನಿರ್ದೇಶಕ ಹಾಗೂ ಇಂಡಸ್ಟ್ರಿಯವರು ಬೆಂಬಲ ಸೂಚಿಸಿರುವ ಬಗ್ಗೆ ಮಾತನಾಡಿದ ಚಿರು 'ನಮ್ಮ ಮಾವನ ಬಗ್ಗೆ ನಾವು ಮಾತನಾಡುವುದಕ್ಕಿಂತ, ಅವರ ಒಡನಾಟ ಹೊಂದಿದವರು, ಇಂಡಸ್ಟ್ರಿಯಲ್ಲಿರುವ ಬಲ್ಲವರು ಎಲ್ಲರೂ ಮಾತನಾಡಿದ್ದಾರೆ. ಸುಮಾರು 35 ವರ್ಷದಿಂದ ಅಂತಹ ವ್ಯಕ್ತಿತ್ವನ್ನ ಕಾಪಾಡಿಕೊಂಡು ಬಂದಿದ್ದಾರೆ. ಇದು ಸಾಮಾನ್ಯವಾದ ಸಾಧನೆಯಲ್ಲ' ಎಂದು ಸಮರ್ಥಿಸಿಕೊಂಡರು.

ಮೀಟೂ ಬಗ್ಗೆ ಗೌರವವಿದೆ
'ಮೀಟೂ ಅಭಿಯಾನ ಎನ್ನುವುದು ಒಳ್ಳೆಯ ವೇದಿಕೆ. ನನಗೆ ಅದರ ಬಗ್ಗೆ ಗೌರವ ಇದೆ. ಫೈರ್ ಸಂಸ್ಥೆ ಬಗ್ಗೆಯೂ ನನಗೆ ಅಭಿಮಾನವಿದೆ. ನಾನು ಕೇಳೋದು ಇಷ್ಟೇ. ಏನಾದರೂ ಸಾಕ್ಷಿ ಇದ್ರೆ, ಸಾಬೀತು ಮಾಡಿ ಅಷ್ಟೇ. ಯಾರು ಏನ್ ಬೇಕಾದರೂ ಹೇಳಬಹುದು. ಎಲ್ಲ ನಿಜವಾಗುವುದಿಲ್ಲ. ಶೂಟಿಂಗ್ ನಲ್ಲೇ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಆದ್ರೆ, ಅಂತಹ ಘಟನೆ ಯಾವುದು ನಡೆದಿಲ್ಲ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ರು. ಸಾಕ್ಷಿ, ಆಧಾರ ಕೊಡ್ತೀನಿ ಅಂದ್ರು, ಆಮೇಲೆ ಏನೂ ಕೊಟ್ಟಿಲ್ಲ. ಈಗ ಕೋರ್ಟ್ ನಲ್ಲಿ ಹೇಳ್ತೀವಿ ಅಂದ್ರೆ, ನಾವು ಏನ್ ಹೇಳೋದು'' ಎಂದು ಶ್ರುತಿಗೆ ತಿರುಗೇಟು ನೀಡಿದ್ದಾರೆ.

ಈಗ ಎಲ್ಲಿದ್ದಾರೆ ಚಿರು ಸರ್ಜಾ.?
ಇಂದು ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆಯಲಿದೆ. ರೆಬೆಲ್ ಸ್ಟಾರ್ ಅಂಬರೀಶ್ ಸಾರಥ್ಯದಲ್ಲಿ ಈ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಶ್ರುತಿ, ಅರ್ಜುನ್ ಸರ್ಜಾ ಕೂಡ ಭಾಗಿಯಾಗುವ ಸಾಧ್ಯತೆ ಇದೆ. ಆದ್ರೆ, ಚಿರು ಸರ್ಜಾ ಮಾತ್ರ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿದ್ದಾರೆ. ಒಂದು ವೇಳೆ ಕುಟುಂಬಸ್ಥರು ನಿನ್ನ ಅವಶ್ಯಕತೆ ಇದೆ. ಬನ್ನಿ ಎಂದು ಫೋನ್ ಮಾಡಿದರೇ ತಕ್ಷಣ ಬರ್ತೀನಿ ಎಂದು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











