twitter
    For Quick Alerts
    ALLOW NOTIFICATIONS  
    For Daily Alerts

    ಮೃತ ಚಿರಂಜೀವಿ ಸರ್ಜಾ ಕೊರೊನಾ ವೈರಸ್ ವರದಿ

    |

    ಇಂದು ವಿಧಿವಶರಾದ ಚಿರಂಜೀವಿ ಸರ್ಜಾ ಅವರಿಗೆ ಸರ್ಕಾರಿ ನಿಯಮದಂತೆ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದೆ.

    Recommended Video

    ಚಿರು ಸರ್ಜಾ ಅಂತಿಮ ಯಾತ್ರೆ ಹೇಗಿತ್ತು ನೋಡಿ | Chiranjeevi Sarja | FILMIBEAT KANNADA

    ಪ್ರಸ್ತುತ ಕೊರೊನಾ ವೈರಸ್ ಎಲ್ಲೆಡೆ ಅದರಲ್ಲಿಯೂ ಬೆಂಗಳೂರಿನಲ್ಲಿ ತುಸು ಹೆಚ್ಚೆ ಹಬ್ಬಿರುವ ಕಾರಣ, ಅಪಘಾತಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸಾವುಗಳಿಗೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ.

    ಅಂತೆಯೇ ಚಿರಂಜೀವಿ ಸರ್ಜಾ ಅವರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ.

    ಮಗುವಿನ ಮುಖ ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾಮಗುವಿನ ಮುಖ ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ

    ಅವರಿಗೆ ಉಸಿರಾಟದ ಸಮಸ್ಯೆ ಆಗಿತ್ತು ಎನ್ನಲಾಗಿತ್ತು, ಹಾಗಾಗಿ ಅನುಮಾನದ ಮೇಲೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಆದರೆ ವರದಿ ನೆಗೆಟಿವ್ ಬಂದಿದೆ.

    ಮೂರು ಗಂಟೆಯಲ್ಲಿ ಪರೀಕ್ಷಾ ವರದಿ

    ಮೂರು ಗಂಟೆಯಲ್ಲಿ ಪರೀಕ್ಷಾ ವರದಿ

    ಚಿರಂಜೀವಿ ಸರ್ಜಾ ಅವರು 2:40 ಸಮೀಪದಲ್ಲಿ ಸಾವನ್ನಪ್ಪಿದ್ದರು. ಹಾಗಾಗಿ ಕೂಡಲೇ ಅವರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಮೂರು ಗಂಟೆ ನಂತರ ವರದಿ ಬಂದಿದೆ.

    ಐಸಿಯುಗೆ ಶಿಫ್ಟ್‌ ಮಾಡಿ ಚಿಕಿತ್ಸೆ

    ಐಸಿಯುಗೆ ಶಿಫ್ಟ್‌ ಮಾಡಿ ಚಿಕಿತ್ಸೆ

    ಅಪೊಲೋ ಆಸ್ಪತ್ರೆ ಸಹ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಚಿರಂಜಿವಿ ಸರ್ಜಾ 2:30 ರ ವೇಳೆಗೆ ಆಸ್ಪತ್ರೆಗೆ ಬಂದಾಗ ಅವರಲ್ಲಿ ಹೃದಯ ಬಡಿತ ಇರಲಿಲ್ಲ. ಕೂಡಲೇ ಐಸಿಯು ಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಿದೆವು ಆದರೆ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ.

    ನಾಳೆ ಅಂತಿಮ ದರ್ಶನಕ್ಕೆ ಅವಕಾಶ

    ನಾಳೆ ಅಂತಿಮ ದರ್ಶನಕ್ಕೆ ಅವಕಾಶ

    ಚಿರಂಜೀವಿ ಸರ್ಜಾ ಪಾರ್ಥೀವಶರೀರ ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿದೆ. ನಾಳೆ ಬೆಳಗ್ಗೆ 9 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.

    ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ?

    ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ?

    ತುಮಕೂರಿನ ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆ ವೇಳೆಗೆ ಅಂತಿಮ ಸಂಸ್ಕಾರ ಮಾಡಲಾಗುತ್ತದೆ. ಇದು ಅವರ ತಾತ ಶಕ್ತಿಪ್ರಸಾದ್ ಊರು. ಆದರೆ ಚಿರಂಜೀವಿ ಸರ್ಜಾ ಸಹೋದರ ಧ್ರುವ ಸರ್ಜಾ, ರಾಮನಗರದ ನೆಲಗೆದರನಹಳ್ಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಡೆಯಲಿ ಎಂದು ಬಯಸಿದ್ದಾರಂತೆ.

    English summary
    Chiranjeevi Sarja died today. Doctors did coronavirus test to him, report came negative.
    Monday, June 8, 2020, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X