'ಮಾರ್ಟಿನ್‌'ಗೂ ಮುನ್ನ 'ರಾಜ ಮಾರ್ತಾಂಡ' ಆರ್ಭಟ: ಧ್ರುವನ ಬಲದೊಂದಿಗೆ ತೆರೆಮೇಲೆ ಚಿರು ಸರ್ಜಾ ಕೊನೆ ಆಟ

By ಫಿಲ್ಮಿಬೀಟ್ ಡೆಸ್ಕ್

ತಮ್ಮ ವಿಭಿನ್ನ ನಟನೆದಿಂದ ಅಭಿಮಾನಿಗಳ ಮನ ಗೆದ್ದಿದ ನಟ ಚಿರಂಜೀವಿ ಸರ್ಜಾ, ಚಿಕ್ಕ ವಯಸ್ಸಿನಲ್ಲೇ ವಿಧಿವಶರಾಗಿದ್ದು ನೋವಿನ ಸಂಗತಿ. 'ರಾಜಮಾರ್ತಾಂಡ' ಚಿತ್ರದಲ್ಲಿ ಚಿರು ಹೀರೊ ಆಗಿ ಅಬ್ಬರಿಸಿದ್ದರು. ಸಿನಿಮಾ ಶೂಟಿಂಗ್‌ ಕೂಡ ಕಂಪ್ಲೀಟ್ ಆಗಿತ್ತು. ಡಬ್ಬಿಂಗ್ ಮುಗಿಸಿ, ಸಿನಿಮಾ ರಿಲೀಸ್ ಮಾಡುವ ವೇಳೆಗೆ ಚಿರು ಕಾಲನ ಕರೆಗೆ ಓಗೊಟ್ಟು ಹೊರಟುಬಿಟ್ಟರು. ಇದೀಗ ಚಿರು ಕೊನೆ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.

ಚಿರು ಅನುಪಸ್ಥಿತಿಯಲ್ಲಿ ಧ್ರುವ ಸರ್ಜಾ 'ರಾಜಮಾರ್ತಾಂಡ' ಚಿತ್ತತಂಡದ ಬೆಂಬಲಕ್ಕೆ ನಿಂತರು. ಅಣ್ಣನ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ್ದರು. ಡಬ್ಬಿಂಗ್ ವೇಳೆ ಅಣ್ಣನ ನೆನೆದು ಧ್ರುವ ಸರ್ಜಾ ಭಾವುಕರಾಗುತ್ತಿದ್ದರು. ಇನ್ನು ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಕೂಡ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಸದ್ಯ ಚಿತ್ರಕ್ಕೆ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ‌. ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನು 'ರಾಜಾಮಾರ್ತಾಂಡ' ಚಿತ್ರ ಬಿಡುಗಡೆ ವೇಳೆ ಮೇಘನಾ ರಾಜ್, ಧ್ರುವ ಸರ್ಜಾ, ಸುಂದರರಾಜ್ ಹಾಗೂ ಕನ್ನಡದ ಅನೇಕ ಹೆಸರಾಂತ ನಟರು ಚಿತ್ರತಂಡದೊಂದಿಗೆ ಇರುವುದಾಗಿ ಹೇಳಿದ್ದಾರೆ.

Chiranjeevi Sarjas last film Raja Marthanda Releasing in April 2023

ವೆಂಕಟೇಶ್ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ 'ರಾಜಮಾರ್ತಾಂಡ' ಚಿಸತ್ರಕ್ಕಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೋಡಿಯಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಸೇರಿದಂತೆ ಹಲವು ಚಿತ್ರದ ತಾರಾಗಣದಲ್ಲಿದ್ದಾರೆ.

ಈ ಹಿಂದೆ ಶಂಕರ್ ನಾಗ್ ದಿಢೀರನೇ ನಿಧನರಾದಾಗ ಅವರು ನಟಿಸಿದ್ದ ಒಂದೆರಡು ಚಿತ್ರಗಳಿಗೆ ಅವರ ಸಹೋದರ ಅನಂತನಾಗ್ ವಾಯ್ಸ್ ಡಬ್ ಮಾಡಿದ್ದರು. ಇನ್ನು ಕಳೆದ ವರ್ಷ ಪುನೀತ್ ರಾಜಕುಮಾರ್ ನಟಿಸಿದ್ದ 'ಜೇಮ್ಸ್' ಶಿವರಾಜ್‌ಕುಮಾರ್ ಡಬ್ ಮಾಡುವಂತಾಯಿತು. ಈಗ 'ರಾಜಮಾರ್ತಾಂಡ' ಚಿತ್ರದಲ್ಲಿ ಚಿರು ಸರ್ಜಾ ಅವರ ಪಾತ್ರಕ್ಕೆ ಧ್ರುವ ಧ್ವನಿ ನೀಡಿದ್ದಾರೆ. ಈ ಸಹೋದರರ ಪ್ರೀತಿಯ ಬಗ್ಗೆ ಚಿತ್ರದ ನಿರ್ಮಾಪಕ ಶಿವಕುಮಾರ್ ಹಾಗೂ ನಿರ್ದೇಶಕ ಕೆ. ರಾಮನಾರಾಯಣ್ ಎಷ್ಟು ಹೇಳಿದರು ಕಡಿಮೆ ಎಂದು ಹೇಳಿದ್ದಾರೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣವಿದೆ.

Chiranjeevi Sarjas last film Raja Marthanda Releasing in April 2023

'ರಾಜಮಾರ್ತಾಂಡ' ಜೊತೆಗೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಕೂಡ ರಿಲೀಸ್‌ಗೆ ರೆಡಿ ಆಗ್ತಿದೆ. ಚಿತ್ರದ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಧ್ರುವ ನಟನೆಯ 5ನೇ ಸಿನಿಮಾ ಇದು. ಟೀಸರ್‌ನಿಂದಲೇ ಸಿನಿಮಾ ಬೇಜಾನ್ ಸೌಂಡ್ ಮಾಡ್ತಿದೆ. ಪರಭಾಷಿಕರು ಕೂಡ ಸಿನಿಮಾ ನೋಡಲು ಕಾತರರಾಗಿದ್ದಾರೆ. ಚುನಾವಣೆ ಮುಗಿದ ಮೇಲೆ ಜೂನ್‌ ವೇಳೆಗೆ 'ಮಾರ್ಟಿನ್' ರಿಲೀಸ್ ಪ್ಲ್ಯಾನ್ ನಡೀತಿದೆ.

'ಮಾರ್ಟಿನ್‌' ರಿಲೀಸ್‌ಗೂ ಮುನ್ನ 'ರಾಜಮಾರ್ತಾಂಡ' ಸಿನಿಮಾ ಪ್ರಚಾರದಲ್ಲಿ ಧ್ರುವ ಸರ್ಜಾ ಭಾಗಿ ಆಗಲಿದ್ದಾರೆ. ಚಿರು ಕೊನೆಯ ಸಿನಿಮಾವನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸ್ತಿದೆ.

More from Filmibeat

English summary
Chiranjeevi Sarja's last film Raja Marthanda Releasing in April 2023. Brother Dhruva Sarja completes dubbing for Chiranjeevi Sarja in Rajamarthanda. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X