ಜೂ.ಚಿರುಗೆ ಪೋಲಿಯೋ ಲಸಿಕೆ ಹಾಕಿಸಿ ಸಂತಸ ವ್ಯಕ್ತ ಪಡಿಸಿದ ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ತೊಟ್ಟಿಲ ಶಾಸ್ತ್ರ ಸಂಭ್ರಮ ಮಾಡಿರುವ ಮೇಘನಾ ಕುಟುಂಬ, ನಾಮಕರಣ ಮಾಡಲು ತಯಾರಿ ನಡೆಯುತ್ತಿದೆ. ಮೇಘನಾ ರಾಜ್ ಮುದ್ದು ಮಗನಿಗೆ ಏನು ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮೇಘನಾ ಆಗಾಗ ಮಗನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹೊಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗನಿಗೆ ಮೊದಲ ಬಾರಿಗೆ ಪೋಲಿಯೋ ಲಸಿಕೆ ಹಾಕಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಗನ ಬೆರಳಿಗೆ ಹಾಕಿರುವ ಇಂಕ್ ನ ಫೋಟೋವನ್ನು ಶೇರ್ ಮಾಡಿ ಮೊದಲ ಬಾರಿಗೆ ಪೋಲಿಯೋ ಹಾಕಿಸಿದ ತಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

ಮಗನಿಗೆ ಲಸಿಕೆ ಹಾಕಿಸಿ ಸಂತಸ ಹಂಚಿಕೊಂಡ ಮೇಘನಾ

ಮಗನಿಗೆ ಲಸಿಕೆ ಹಾಕಿಸಿ ಸಂತಸ ಹಂಚಿಕೊಂಡ ಮೇಘನಾ

ಲಸಿಕೆ ಹಾಕಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮೇಘನಾ, 'ನನ್ನ ಜೂ ಚಿರು ಚಿಕ್ಕ ಬೆರಳುಗಳಿಗೆ ಇಂಕ್ ಸವರಲಾಗಿದೆ. ಮೊದಲ ಬಾರಿಗೆ ಪಲ್ಸ್ ಪೋಲಿಯೋ. ನಮ್ಮ ಮಕ್ಕಳು ಸುರಕ್ಷಿತರಾಗಿರಲು, ತಮ್ಮ ದೇಶ ಪೋಲಿಯೋ ಮುಕ್ತವಾಗಿರಲು ಕೆಲವು ಹನಿಗಳು. ಆರೋಗ್ಯವಾಗಿರಿ, ಚೆನ್ನಾಗಿರಿ' ಎಂದು ಬರೆದುಕೊಂಡಿದ್ದಾರೆ.

ಅಕ್ಟೋಬರ್ ನಲ್ಲಿ ಮಗುವಿಗೆ ಜನನ

ಅಕ್ಟೋಬರ್ ನಲ್ಲಿ ಮಗುವಿಗೆ ಜನನ

ನಟಿ ಮೇಘನಾ ರಾಜ್ 2020 ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ಈಗ ಮೂರು ತಿಂಗಳಾಗಿದೆ. ಪತಿಯನ್ನು ಕಳೆದು ಕೊಂಡು ದುಃಖದಲ್ಲಿದ್ದ ಮೇಘನಾ ಬಾಳಿಗೆ ಮಗ ಸಂತಸವನ್ನು ಹೊತ್ತು ತಂದಿದ್ದಾರೆ.

ಮೇಘನಾ ಮಗನಿಗೆ ಸುಂದರ ಗಿಫ್ಟ್

ಮೇಘನಾ ಮಗನಿಗೆ ಸುಂದರ ಗಿಫ್ಟ್

ಇತ್ತೀಚಿಗೆ ಮೇಘನಾ ಮಗನಿಗೆ ಬಂದಿರುವ ಸುಂದರವಾದ ಗಿಫ್ಟ್ ಫೋಟೋವನ್ನು ಹಂಚಿಕೊಂಡಿದ್ದರು. ಅನಿಲಾ ಇಂಪ್ರೆಷನ್ ಆಂಡ್ ಫ್ರೇಮ್ಸ್

ನೀಡಿರುವ ಪುಟ್ಟ ಜೂ ಚಿರುವಿನ ಪಾದ ಮತ್ತು ಹಸ್ತಕ್ಕೆ ಫ್ರೇಮ್ ಹಾಕಿ ಗಿಫ್ಟ್ ಮಾಡಿದ್ದರು. ಈ ಗಿಫ್ಟ್ ನೋಡಿ ಮೇಘನಾ ಸಖತ್ ಖುಷಿ ಪಟ್ಟಿದ್ದರು.

Recommended Video

ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt
ಗಿಫ್ಟ್ ಬಗ್ಗೆ ಮೇಘನಾ ಮಾತು

ಗಿಫ್ಟ್ ಬಗ್ಗೆ ಮೇಘನಾ ಮಾತು

ಗಿಫ್ಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, 'ನೀವು ಸಂತೋಷವನ್ನು ಫ್ರೇಮ್ ನಲ್ಲಿ ಕಾಪಾಡಿಕೊಳ್ಳಲು ಬಯಸಿದಾಗ. ಈ ಸುಂದರ ಉಡುಗೊರೆಗೆ ಅನಿಲಾ ಇಂಪ್ರೆಷನ್ ಮತ್ತು ಫ್ರೇಮ್ಸ್ ಗೆ ಧನ್ಯವಾದಗಳು. ಪುಟ್ಟ ಪುಟ್ಟ ಕೈ ಪಾದ ಮತ್ತು ಹಸ್ತವನ್ನು ನಿಮ್ಮ ಕೆಲಸದಿಂದ ಅಮರವಾಗಿಸಿದ್ದೀರಿ. ಜೂ.ಚಿರು ಇದನ್ನು ಖಂಡಿತವಾಗಿಯೂ ಕಾಪಾಡಿಕೊಳ್ಳುತ್ತಾನೆ' ಎಂದು ಬರೆದುಕೊಂಡಿದ್ದರು.

More from Filmibeat

English summary
Chiranjeevi Sarja's Son First Pulse Polio, Meghana Raj shared picture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X