ಮಗುವಿನ ಮುಖ ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ ಮದುವೆಯಾಗಿ ಎರಡು ವರ್ಷವಷ್ಟೆ ಆಗಿತ್ತು. ನಟಿ ಮೇಘನಾ ರಾಜ್ ಅವರನ್ನು ಇಷ್ಟಪಟ್ಟು ಅದ್ಧೂರಿಯಾಗಿ ಮದುವೆಯಾಗಿದ್ದರು ಚಿರಂಜೀವಿ ಸರ್ಜಾ.
Recommended Video
ಮೇ 29 2018 ರಂದು ಚಿರಂಜೀವಿ ಸರ್ಜಾ ಮೇಘನಾ ರಾಜ್ ಅನ್ನು ಮದುವೆಯಾಗಿದ್ದರು. ಇಬ್ಬರ ಸಂಸಾರ ಆನಂದ ಸಾಗರವೇ ಆಗಿತ್ತು.
ಇತ್ತೀಚೆಗೆ ತಮ್ಮನ ಮದುವೆಯಲ್ಲಿ ಬಹುವಾಗಿ ಮಿಂಚಿದ್ದರು ಈ ಜೋಡಿ. ಸುಮಲತಾ ಸಹ ಮಾಧ್ಯಮದೊಂದಿಗೆ ಮಾತನಾಡುತ್ತಾ ಪತಿ-ಪತ್ನಿ ಇಬ್ಬರು ಎಷ್ಟು ಸಂತೋಶದಿಂದಿದ್ದರು ಎಂದು ಹೇಳಿದ್ದರು.

ಸಂತಸದ ಮನೆಗೆ ಕಿಚ್ಚು ಹಚ್ಚಿದ ವಿಧಿ
ಆದರೆ ಸಂತಸದ ಮನೆಗೆ ವಿಧಿ ಕಿಚ್ಚು ಹಚ್ಚಿದೆ. ಮೇಘನಾರಾಜ್ ಅವರನ್ನು ಬಿಟ್ಟು ಚಿರಂಜೀವಿ ಸರ್ಜಾ ಹೊರಟುಬಿಟ್ಟಿದ್ದಾರೆ. ಇನ್ನೂ ಮನಕಲಕುವ ವಿಷಯವೆಂದರೆ ಮೇಘನಾರಾಜ್ ತಾಯಿ ಆಗುವವರಿದ್ದಾರೆ.

ನಟಿ ತಾರಾ ಅನುರಾಧ
ಹೌದು, ನಟಿ ತಾರಾ ಅನುರಾಧಾ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ, 'ಮೇಘನಾರಾಜ್ ದುಃಖದಲ್ಲಿ ನಾವು ಜೊತೆಯಾಗಿದ್ದೇವೆ. ಚಿರಂಜೀವಿ ನಮ್ಮನ್ನು ಅಗಲಿದ್ದಾನೆ, ಪುಟ್ಟ ಚಿರಂಜೀವಿ ಬರಲಿದ್ದಾನೆ' ಎಂದಿದ್ದಾರೆ.

ಮಗುವ ನೋಡುವ ಮುನ್ನವೇ ಕಣ್ಣುಮುಚ್ಚಿದ್ದಾರೆ
ಆದರೆ ವಿಧಿಯೆಷ್ಟು ಕ್ರೂರಿ ಎಂದರೆ ಚಿಂರಜೀವಿ ಸರ್ಜಾ ತಮ್ಮ ಮಗುವನ್ನು ನೋಡುವ ಮುನ್ನವೇ ಕಣ್ಣು ಮುಚ್ಚಿದ್ದಾರೆ. ಅಪ್ಪನಾಗುವ ಹಂಬಲ, ಖುಷಿ, ಸಂತೋಶವನ್ನು ಅನುಭವಿಸುತ್ತಿದ್ದ ಚಿರಂಜೀವಿ ಮಗುವಿನ ಮುಖ ನೋಡದೆ ಇಹಲೋಕ ತ್ಯಜಿಸಿದ್ದಾರೆ.

ಹೃದಯಾಘಾತದಿಂದ ಸಾವು
ಚಿರಂಜೀವಿ ಸರ್ಜಾ ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ಜಯನಗರದ ಸಾಗರ್ ಅಪೊಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಕೇವಲ 39 ವರ್ಷವಷ್ಟೆ ವಯಸ್ಸಾಗಿತ್ತು.


Click it and Unblock the Notifications











