ಅಂಕಲ್ ಗಾಗಿ ಹೊಸ ಅಭಿಯಾನ ಶುರು ಮಾಡಿದ ಚಿರು
Recommended Video

ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪ ಅಲ್ಲೋಲ ಕಲ್ಲೋಲವನ್ನು ಸೃಷ್ಟಿ ಮಾಡಿದೆ. ಈ ವಿವಾದದಲ್ಲಿ ಕೆಲವರು ಅರ್ಜುನ್ ಸರ್ಜಾ ಪರ ನಿಂತರೇ, ಇನ್ನು ಕೆಲವರು ಶ್ರುತಿಗೆ ಸಪೋರ್ಟ್ ಮಾಡಿದ್ದಾರೆ.
ಈ ವಿವಾದದಲ್ಲಿ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬ ಅವರ ಜೊತೆಗೆ ನಿಂತಿದೆ, ಧೈರ್ಯ ನೀಡಿದೆ. ಇದೀಗ ಅವರ ಅಳಿಯ ಚಿರಂಜೀವಿ ಸರ್ಜಾ ತಮ್ಮ ಮಾವನಿಗಾಗಿ ಹೊಸ ಅಭಿಯಾನ ಶುರು ಮಾಡಿದ್ದಾರೆ.

#istandwithgentlemen (ಐ ಸ್ಡ್ಯಾಂಡ್ ವಿತ್ ಜಂಟಲ್ ಮ್ಯಾನ್) ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಚಿರಂಜೀವಿ ಹೊಸ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸರ್ಜಾ ಅವರ ಹ್ಯಾಶ್ ಟ್ಯಾಗ್ ಬಳಸಿ ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ.
ಅಂದಹಾಗೆ, ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರನ್ನು ಕರೆಸಿ ಮಾತುಕತೆ ಮಾಡಲಾಯಿತು. ನಟ ಅಂಬರೀಶ್ ಅವರ ನೇತೃತ್ವದಲ್ಲಿ ನಡೆದ ಈ ಸಭೆ ವಿಫಲವಾಗಿತ್ತು. ಇಬ್ಬರೂ ಸಂಧಾನಕ್ಕೆ ಒಪ್ಪದ ಕಾರಣ ನಿನ್ನೆ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ.


Click it and Unblock the Notifications











