ಫಸ್ಟ್ ಲುಕ್ ಮೂಲಕ ಬಂದ 'ಆದ್ಯಾ': ಹೊಸ ವರ್ಷಕ್ಕೆ ಚಿರು ಕೊಡುಗೆ
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಭಿನಯದ ಆದ್ಯಾ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ನಿರ್ದೇಶಕ ಕೆ.ಎಂ ಚೈತನ್ಯ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆದ್ಯಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಟ್ರೈಲರ್ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ.
'ಆದ್ಯಾ' ಸಿನಿಮಾದಲ್ಲಿ ಚಿರು ಹೊಸ ನಾಯಕಿಯೊಂದಿಗೆ ಆದ್ಯಾ ತೆರೆ ಮೇಲೆ ಬರ್ತಿದೆ ಎಂದು ಹೇಳಲಾಗುತ್ತಿದೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ತಿರುಗಿ ನಿಂತಿರುವ ಪುಟ್ಟ ಮಗು ಚಿತ್ರವಿದೆ. ಹೊಸ ವರ್ಷದ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಸಧ್ಯದಲ್ಲೇ ಟ್ರೈಲರ್ ಮೂಲಕ ಬರ್ತಿದೆ.

ಆದ್ಯಾ ತಮಿಳಿನ ಕ್ಷಣಂ ಸಿನಿಮಾದ ರಿಮೇಕ್ ಎಂದು ಹೇಳಲಾಗುತ್ತಿದೆ. ಆದ್ಯಾ ಸಿನಿಮಾ ಸೆಟ್ಟೇರಿ ವರ್ಷಗಳೆ ಆಗಿದೆ. ಅನೇಕ ಕಾರಣಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಿತ್ತು. ಈಗ ಚಿತ್ರಕ್ಕೆ ನಿರ್ದೇಶಕ ಚೈತನ್ಯ ಮರುಜೀವ ನೀಡಿ, ಬದಲಾದ ಕಲಾವಿದರೊಂದಿಗೆ ಚಿತ್ರಾಭಿಮಾನಿಗಳ ಮುಂದೆ ತರಲು ಸಿದ್ಧರಾಗಿದ್ದಾರೆ.
English summary
Kannada actor Chiranjeevi sarja starrer Adya film kannada film First look release.This movie is Directed by K.M Chaitanya.


Click it and Unblock the Notifications