For Quick Alerts
  ALLOW NOTIFICATIONS  
  For Daily Alerts

  ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ

  By Pavithra
  |

  ಚಿರಂಜೀವಿ ಸರ್ಜಾ ಅನ್ನುವ ಹೆಸರು ಕೇಳಿದ ತಕ್ಷಣ ಸದ್ಯ ಎಲ್ಲರ ತಲೆಯಲ್ಲಿ ಬರುವುದು ಮದುವೆಯ ಸಂಭ್ರಮ. ಆದರೆ ಚಿರಂಜೀವಿ ಸರ್ಜಾ ಮಾತ್ರ ಅಮ್ಮನನ್ನೇ ನೆನಪಿಸಿಕೊಳ್ಳುತ್ತಿದ್ದಾರೆ. ಅಯ್ಯೋ..ಹೆಣ್ಣು ಮಕ್ಕಳು ಮದುವೆ ಅಂದಾಗ ತಾಯಂದಿರನ್ನ ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುವುದು ಸಾಮಾನ್ಯ ಆದರೆ ಚಿರಂಜೀವಿ ಸರ್ಜಾ ಯಾಕೆ ತಾಯಿಯನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತ ಯೋಚನೆ ಮಾಡಬೇಡಿ.

  ಚಿರು ಇನ್ನು ತಮ್ಮ ಸಿನಿಮಾದ ಗುಂಗಲ್ಲೇ ಇದ್ದಾರೆ. ಹೌದು ಚಿರಂಜೀವಿ ಸರ್ಜಾ ಅಭಿನಯದ ಕೆ ಎಂ ಚೈತನ್ಯ ನಿರ್ದೇಶನ ಮಾಡಿರುವ 'ಅಮ್ಮ ಐ ಲವ್ ಯೂ' ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿ ಚಿರು ತಾಯಿ ಪಾತ್ರದಲ್ಲಿ ಸಿತಾರ ಅಭಿನಯ ಮಾಡಿದ್ದು ಸಿನಿಮಾದ ಚಿತ್ರೀಕರಣ ಕಂಪ್ಲಿಟ್ ಆಗಿ ತೆರೆಗೆ ಬರಲು ಸಿದ್ದವಾಗಿದೆ.

  ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಎಲ್ಲಾ ತಾಯಂದಿರಿಗಾಗಿ ಪೋಸ್ಟರ್ ಅನ್ನು ಅರ್ಪಣೆ ಮಾಡಿದೆ. 'ಅಮ್ಮ ಐ ಲವ್ ಯೂ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ.

  Chiranjeevi Sarja starrer Amma I Love You movie new poster released.

  ಗುರುಕಿರಣ್ ಸಂಗೀತ ನಿರ್ದೇಶನವಿರುವ ಅಮ್ಮ ಐ ಲವ್ ಯೂ ಸಿನಿಮಾಗೆ ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ನಿರ್ದೇಶಕರು ಮೇ ತಿಂಗಳಲ್ಲಿ ಸಿನಿಮಾವನ್ನ ತೆರೆಗೆ ತರಲು ನಿರ್ಧರಿಸಿದ್ದಾರೆ.

  English summary
  Kannada film actor Chiranjeevi Sarja starrer 'Amma I Love You' movie new poster released. film team dedicated this film poster to all the mothers

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X