Chiranjeevi Sarja: ಚಿರು ಸರ್ಜಾ ಕೊನೆಯ ಚಿತ್ರ 'ರಾಜಮಾರ್ತಾಂಡ' ರಿಲೀಸ್‌ಗೆ ಸಜ್ಜು!
ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಅಗಲಿ ವರ್ಷವೇ ಕಳೆದೋಯ್ತು. ಹೀಗಿದ್ದರು ಅವರ ನೆನಪು ಇನ್ನು ಮಾಸಿಲ್ಲ. ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವ ಚಿರು ಅಜರಾಮರ. ತನ್ನ 39ನೇ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿದ ಚಿರು ಸಾಕಷ್ಟು ಸಿನಿಮಾಗಳಲ್ಲಿ ನಟಿಸೋ ಮೂಲಕ ಜನಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. ತನ್ನದೇ ವಿಶೇಷ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಚಿರು ಅಭಿನಯದ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ. ಇದೀಗ ಚಿರು ಕೊನೆ ಚಿತ್ರ 'ರಾಜಮಾರ್ತಾಂಡ' ರಿಲೀಸ್‌ಗೆ ಸಜ್ಜಾಗಿದೆ.
ಚಿರು ಸರ್ಜಾ ಸಾವನ್ನಪ್ಪುವ ಮೊದಲೇ 'ರಾಜಮಾರ್ತಾಂಡ' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿತ್ತು. ಆದರೇ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಮಾತ್ರ ಬಾಕಿ ಉಳಿದುಕೊಂಡಿತ್ತು. 'ರಾಜಮಾರ್ತಾಂಡ' ಸಿನಿಮಾದ ಟೀಸರ್ , ಫಸ್ಟ್ ಲುಕ್, ಮತ್ತು ಟ್ರೈಲರ್ ಈಗಾಗಲೇ ರಿಲೀಸ್ ಅಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ಚಿರು ಸರ್ಜಾ ಪಾತ್ರಕ್ಕೆ ಸಹೋದರ ಧ್ರುವಾ ಸರ್ಜಾ ಧ್ವನಿ ನೀಡಿದ್ದು, ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಕೂಡ ಇತ್ತೀಚೆಗೆ ಮುಕ್ತಾಯವಾಗಿದೆ.
ಕೆಲದಿನಗಳ ಹಿಂದಷ್ಟೆ ಚಿತ್ರ ಸೆನ್ಸಾರ್‌ನಿಂದಲೂ ಗ್ರೀನ್ ಸಿಗ್ನಲ್ ಪಡೆದು ಹೊರಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ದೊಡ್ಡ ಪರದೆಗೆ ಎಂಟ್ರಿ ನೀಡಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೇ ಮೊದಲ ವಾರದಲ್ಲಿ ಈ ಚಿತ್ರ ರಿಲೀಸ್ ಅಗುವ ಸಾಧ್ಯತೆ ಇದೆ. ಇದಕ್ಕಾಗಿ ಚಿತ್ರತಂಡ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಅಭಿಮಾನಿಗಳು ಕೂಡ ಸಿನಿಮಾವನ್ನು ನೋಡಲು ಕಾತುರರಾಗಿದ್ದಾರೆ. 'ರಾಜಮಾರ್ತಾಂಡ' ಒಂದು ಮಾಸ್ ಆಕ್ಷನ್ ಸಿನಿಮಾವಾಗಿದ್ದು, ಅಭಿಮಾನಿಗಳಿಗೆ ಖುಷಿ ನೀಡಲಿದೆ ಎಂಬುದು ಚಿತ್ರರಂಡದ ಅಭಿಪ್ರಾಯ.

ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಜೆ.ಕೆ. ರಾಮನಾರಾಯಣ್ 'ರಾಜಮಾರ್ತಾಂಡ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಶ್ರೀಮಾದೇಶ್ವರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಣವ್ ಗೌಡ, ಎನ್.ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಹಾಗೂ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಗಳು ಈ ಚಿತ್ರದಲ್ಲಿದೆ.

ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಜೊತೆಗೆ 'ಜಾಗ್ವಾರ್' ಸಿನಿಮಾದಲ್ಲಿ ನಟಿಸಿದ್ದ ದೀಪ್ತಿ ಸಾತಿ 'ರಾಜಮಾರ್ತಾಂಡ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಮೇಘಶ್ರೀ, 'ಟಗರು' ಖ್ಯಾತಿಯ ತ್ರಿವೇಣಿ ರಾವ್ ಕೂಡ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ, ಭಜರಂಗಿ ಲೋಕಿ, ದೇವರಾಜ್, ಚಿಕ್ಕಣ್ಣ, ಸುಮಿತ್ರಾ, ಶಂಕರ್ ಅಶ್ವತ್ಥ್, ವಿನೀತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಜೆ.ಕೆ. ಗಣೇಶ್ ಛಾಯಾಗ್ರಹಣ ಮಾಡಿದ್ದು, ವೆಂಕಟೇಶ್ ಯು.ಡಿ.ವಿ. ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ವಿನೋದ್, ಪಳನಿರಾಜ್ ಸಾಹಸ ನಿರ್ದೇಶನವಿರುವ 'ರಾಜಮಾರ್ತಾಂಡ' ಚಿತ್ರಕ್ಕೆ ಭೂಷಣ್, ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.
Recommended Video



Click it and Unblock the Notifications











