ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ
ಚಿರು ಅಂತನೇ ಖ್ಯಾತಿಗಳಿಸಿದ್ದ ನಟ ಚಿರಂಜೀವಿ ಸರ್ಜಾ ಸಾವು ದೊಡ್ಡ ಆಘಾತವುಂಟು ಮಾಡಿದೆ. ಚಿಕ್ಕವಯಸ್ಸಿನಲ್ಲಿಯೆ ಜೀವನ ಮುಗಿಸಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಜಿರಂಜೀವಿ ಸರ್ಜಾ ದಿಢೀರ್ ಸಾವಿಗೆ ಇಡೀ ಕರುನಾಡೆ ಮರುಗಿದೆ.
Recommended Video
ಚಿರಂಜೀವಿ ಸರ್ಜಾ ಪಾರ್ಥಿವಶರೀರ ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿದೆ. ಇಂದು ಬೆಳಗ್ಗೆ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಅಂತಿಮ ದರ್ಶನದ ಸಮಯವನ್ನು ಮುಂದೂಡುವ ಸಾಧ್ಯತೆ ಇದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಚಿರು ಅಂತ್ಯ ಕ್ರಿಯೆ ಬೆಂಗಳೂರಿನಲ್ಲಿ ನೆರವೇರಲಿದೆಯಾ ಅಥವಾ ಸರ್ಜಾ ಕುಟುಂಬದ ಮೂಲ ಊರಾದ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆಯಲಿದೆಯಾ ಎನ್ನುವ ಗೊಂದಲವಿತ್ತು.
ಆದರೀಗ ಚಿರು ಸರ್ಜಾ ಅಂತ್ಯ ಕ್ರಿಯೆ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕನಕಪುರ ರಸ್ತೆಯ ನೆಲಗುಳಿಯಲ್ಲಿ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆಯಂತೆ. ಅಣ್ಣ ಯಾವಾಗಲು ಜೊತೆಯಲ್ಲಿಯೆ ಇರಬೇಕೆನ್ನುವ ಕಾರಣಕ್ಕೆ ಫಾರ್ಮ್ ಹೌಸ್ ನಲ್ಲಿಯೇ ಅಂತ್ಯಕ್ರಿಯೆ ಮಾಡುವಂತೆ ಧ್ರುವ ಸರ್ಜಾ ಹೇಳಿದ್ದಾರಂತೆ. ಇದಕ್ಕೆ ಅರ್ಜುನ್ ಸರ್ಜಾ ಮತ್ತು ಕುಟುಂಬದವರ ಸಮ್ಮತಿ ಕೂಡ ಇದೆ.

ನಿನ್ನೆ ಮಧ್ಯಾಹ್ನ (ಜೂನ್ 7) 2ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾಗೆ ಹೃದಯಾಘಾತ ವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೆ ಚಿರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸುದೀಪ್, ಗಣೇಶ್, ಜಗ್ಗೇಶ್, ಸುಧಾರಾಣಿ, ದರ್ಶನ್, ತಾರಾ, ಸೃಜನ್ ಲೋಕೇಶ್, ಯಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಚಿರಂಜೀವಿ ಸರ್ಜಾ ಅಂತಿಮ ದರ್ಶನ ಪಡೆದಿದ್ದಾರೆ.


Click it and Unblock the Notifications











