'ಶಾನೆ ಟಾಪ್ ಆಗಾವ್ಳೆ' ಚಿರಂಜೀವಿ ಸರ್ಜಾ ಹುಡುಗಿ

ಚಿರಂಜೀವಿ ಸರ್ಜಾ ಹುಡುಗಿ 'ಶಾನೆ ಟಾಪ್ ಆಗಾವ್ಳಂತೆ..'. ಆ ಹುಡುಗಿನ ನೋಡಿ ಹುಡುಗುರೆಲ್ಲಾ ಲೂಸ್ ಆಗ್ತಿದ್ದಾರಂತೆ. ಅಷ್ಟು ಹುಚ್ಚು ಹಿಡಿಸಿರುವ ಆ ಹುಡುಗಿ ಯಾರಪ್ಪ ಅಂತ ತಲೆಕೆಡಿಸಿಕೊಳ್ಳುತ್ತಿದ್ದೀರಾ. ಅದು ಮತ್ಯಾರು ಅಲ್ಲ 'ಸಿಂಗ' ಸಿನಿಮಾದ ನಾಯಕಿ.

ಹೌದು, ಚಿರಂಜೀವಿ ಸರ್ಜಾ ಮತ್ತು ಅಧಿತಿ ಪ್ರಭುದೇವ ಅಭಿನಯದ 'ಸಿಂಗ' ಚಿತ್ರದ ಲಿರಿಕಲ್ ಹಾಡು ರಿಲೀಸ್ ಆಗಿದ್ದು, ಈ ಹಾಡು ಈಗ ಗಾನಪ್ರಿಯರ ಮೆಚ್ಚುಗೆ ಪಡೆದಿದೆ. 'ಶಾನೆ ಟಾಪ್ ಆಗವ್ಳೆ..' ಅನ್ನೋ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಕೇಳೋಕೆ ಸಖತ್ ಮಜಾವಾಗಿದೆ.

chiranjeevi sarjas singa kannada movie song released.

ಮೊನ್ನೆ ಮೊನ್ನೆಯಷ್ಟೆ 'ಸಿಂಗ' ಚಿತ್ರದಿಂದ ಮಾಸ್ ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಡೈಲಾಗ್ ಮತ್ತು ಫೈಟ್ ಗಳ ಅಬ್ಬರ ನೋಡಿ ಇದು ಪಕ್ಕಾ ಆಕ್ಷನ್ ಸಿನಿಮಾ ಅಂತ ಹೇಳಲಾಗುತ್ತಿತ್ತು. ಆದ್ರೀಗ 'ಸಿಂಗ' ಚಿತ್ರದಿಂದ ಇಂಟ್ರಸ್ಟಿಂಗ್ ಆಗಿರುವ ಲವ್ ಟ್ರ್ಯಾಕ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಹಾಡು ಈಗ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಗಮನ ಸೆಳೆದಿದ್ದು ಟ್ರೆಂಡಿಂಗ್ ನಲ್ಲಿದೆ.

ಗಾಯಕ ವಿಜಯ್ ಪ್ರಕಾಶ್ ದ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ 'ಭರ್ಜರಿ' ಚೇತನ್ ಕುಮಾರ್ ಸಾಹಿತ್ಯವಿದೆ. ಧರ್ಮ ವಿಶ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

More from Filmibeat

English summary
Chiranjeevi Sarja and Aditi Prabhudeva's 'Singa' movie song released. 'Bharjari' Chethan Kumar wrote this song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X