ಈ ಭಾವಚಿತ್ರ ನೋಡಿ ಈ ನಟನನ್ನ ಗುರುತಿಸುವಿರಾ?

By Bharath Kumar

ಕೆಳಗೆ ನೀಡಲಾಗಿರುವ ಭಾವಚಿತ್ರವನ್ನ ಚೆನ್ನಾಗಿ ಗಮನಿಸಿ, ಈ ಫೋಟೋದಲ್ಲಿರುವ ನಟ ಯಾರೆಂದು ಗುರುತಿಸಿ. ಯಾರಪ್ಪಾ ಇದು ತಲೆಯ ತುಂಬ ದಟ್ಟವಾಗಿ ಕೂದಲು ಬಿಟ್ಟುಕೊಂಡು, ದೇವದಾಸ್ ಸ್ಟೈಲ್ ನಲ್ಲಿ ಗಡ್ಡ ಬಿಟ್ಟು ಒಳ್ಳೆ ಖಳನಾಯಕನಂತೆ ಕಾಣಿಸುತ್ತಿದ್ದಾರೆ ಅನಿಸುತ್ತಿದೆ ಅಲ್ವಾ.

ಬಹುಶಃ ಬಹುತೇಕರಿಗೆ ಈ ನಟ ಯಾರು ಎಂದು ಗೊತ್ತಾಗಿರುತ್ತೆ. ಗೊತ್ತಿಲ್ಲದವರು ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಈ ಕಲಾವಿದ ಯಾರು ಎಂದು ನಾವು ಹೇಳ್ತಿವಿ. ಈ ಫೋಟೋದಲ್ಲಿರುವುದು ಕನ್ನಡದ ಸ್ಟಾರ್ ನಟ ಚಿರಂಜೀವಿ ಸರ್ಜಾ. ಅರೇ ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಆಗಿದ್ದ ಚಿರು ಯಾಕೆ ಹೀಗಾದ್ರು ಎಂಬ ಕುತೂಹಲನಾ?

Chiranjeevi sraja new look for Amma I love you Movie

ಚಿರಂಜೀವಿ ಸರ್ಜಾ ಈ ರೀತಿಯ ಮೇಕ್ ಓವರ್ ಮಾಡಿಕೊಂಡಿರುವುದು ತಮ್ಮ ಹೊಸ ಚಿತ್ರಕ್ಕಾಗಿ. ಕೆ.ಎಂ ಚೈತನ್ಯ ನಿರ್ದೇಶನ ಮಾಡುತ್ತಿರುವ 'ಅಮ್ಮ ಐ ಲವ್ ಯೂ' ಚಿತ್ರಕ್ಕಾಗಿ ಚಿರು ಗೆಟಪ್ ಬದಲಿಸಿದ್ದಾರೆ. ಇದೊಂದು ತಾಯಿ ಸೆಂಟಿಮೆಂಟ್ ಸಿನಿಮಾ ಆಗಿದ್ದು, ಚಿರು ಸರ್ಜಾ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ, 'ಅಮ್ಮ ಐ ಲವ್ ಯೂ' ಸಿನಿಮಾ ತಮಿಳಿನ 'ಪಿಚ್ಚಕಾರನ್' ಚಿತ್ರದ ರೀಮೇಕ್. ದ್ವಾರಕೀಶ್ ಬ್ಯಾನರ್ ನಲ್ಲಿ ಈ ಚಿತ್ರವನ್ನ ನಿರ್ಮಾಣವಾಗುತ್ತಿದ್ದು, ಚಿರಂಜೀವಿ ಸರ್ಜಾ, ಸಿತಾರ, ಪ್ರಕಾಶ್ ಬೆಳವಾಡಿ, ಗಿರೀಶ್ ದ್ವಾರಕೀಶ್ ಮುಂತಾದವರು 'ಅಮ್ಮ ಐ ಲವ್ ಯು' ತಾರಾಗಣದಲ್ಲಿ ಅಭಿನಯಿಸಲಿದ್ದಾರೆ.

More from Filmibeat

English summary
Kannada actor chiranjeevi sraja new look for his upcoming Movie 'Amma I love you'. the movie directed by K m chaithanya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X