twitter
    For Quick Alerts
    ALLOW NOTIFICATIONS  
    For Daily Alerts

    ಈ ಭಾವಚಿತ್ರ ನೋಡಿ ಈ ನಟನನ್ನ ಗುರುತಿಸುವಿರಾ?

    By Bharath Kumar
    |

    ಕೆಳಗೆ ನೀಡಲಾಗಿರುವ ಭಾವಚಿತ್ರವನ್ನ ಚೆನ್ನಾಗಿ ಗಮನಿಸಿ, ಈ ಫೋಟೋದಲ್ಲಿರುವ ನಟ ಯಾರೆಂದು ಗುರುತಿಸಿ. ಯಾರಪ್ಪಾ ಇದು ತಲೆಯ ತುಂಬ ದಟ್ಟವಾಗಿ ಕೂದಲು ಬಿಟ್ಟುಕೊಂಡು, ದೇವದಾಸ್ ಸ್ಟೈಲ್ ನಲ್ಲಿ ಗಡ್ಡ ಬಿಟ್ಟು ಒಳ್ಳೆ ಖಳನಾಯಕನಂತೆ ಕಾಣಿಸುತ್ತಿದ್ದಾರೆ ಅನಿಸುತ್ತಿದೆ ಅಲ್ವಾ.

    ಬಹುಶಃ ಬಹುತೇಕರಿಗೆ ಈ ನಟ ಯಾರು ಎಂದು ಗೊತ್ತಾಗಿರುತ್ತೆ. ಗೊತ್ತಿಲ್ಲದವರು ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಈ ಕಲಾವಿದ ಯಾರು ಎಂದು ನಾವು ಹೇಳ್ತಿವಿ. ಈ ಫೋಟೋದಲ್ಲಿರುವುದು ಕನ್ನಡದ ಸ್ಟಾರ್ ನಟ ಚಿರಂಜೀವಿ ಸರ್ಜಾ. ಅರೇ ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಆಗಿದ್ದ ಚಿರು ಯಾಕೆ ಹೀಗಾದ್ರು ಎಂಬ ಕುತೂಹಲನಾ?

    ನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಶುರುನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಶುರು

    Chiranjeevi sraja new look for Amma I love you Movie

    ಚಿರಂಜೀವಿ ಸರ್ಜಾ ಈ ರೀತಿಯ ಮೇಕ್ ಓವರ್ ಮಾಡಿಕೊಂಡಿರುವುದು ತಮ್ಮ ಹೊಸ ಚಿತ್ರಕ್ಕಾಗಿ. ಕೆ.ಎಂ ಚೈತನ್ಯ ನಿರ್ದೇಶನ ಮಾಡುತ್ತಿರುವ 'ಅಮ್ಮ ಐ ಲವ್ ಯೂ' ಚಿತ್ರಕ್ಕಾಗಿ ಚಿರು ಗೆಟಪ್ ಬದಲಿಸಿದ್ದಾರೆ. ಇದೊಂದು ತಾಯಿ ಸೆಂಟಿಮೆಂಟ್ ಸಿನಿಮಾ ಆಗಿದ್ದು, ಚಿರು ಸರ್ಜಾ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

     ಸೆಟ್ಟೇರಿತು ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾ 'ಅಮ್ಮ ಐ ಲವ್ ಯು' ಸೆಟ್ಟೇರಿತು ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾ 'ಅಮ್ಮ ಐ ಲವ್ ಯು'

    ಅಂದ್ಹಾಗೆ, 'ಅಮ್ಮ ಐ ಲವ್ ಯೂ' ಸಿನಿಮಾ ತಮಿಳಿನ 'ಪಿಚ್ಚಕಾರನ್' ಚಿತ್ರದ ರೀಮೇಕ್. ದ್ವಾರಕೀಶ್ ಬ್ಯಾನರ್ ನಲ್ಲಿ ಈ ಚಿತ್ರವನ್ನ ನಿರ್ಮಾಣವಾಗುತ್ತಿದ್ದು, ಚಿರಂಜೀವಿ ಸರ್ಜಾ, ಸಿತಾರ, ಪ್ರಕಾಶ್ ಬೆಳವಾಡಿ, ಗಿರೀಶ್ ದ್ವಾರಕೀಶ್ ಮುಂತಾದವರು 'ಅಮ್ಮ ಐ ಲವ್ ಯು' ತಾರಾಗಣದಲ್ಲಿ ಅಭಿನಯಿಸಲಿದ್ದಾರೆ.

    English summary
    Kannada actor chiranjeevi sraja new look for his upcoming Movie 'Amma I love you'. the movie directed by K m chaithanya.
    Friday, December 15, 2017, 14:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X