ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'

Recommended Video

ಪ್ರಭಾಸ್ ರೆಕಾರ್ಡ್ ಮುರಿದ ಮೆಗಾಸ್ಟಾರ್ ಜಿರಂಜೀವಿ.Sye Raa Narasimha Reddy | FILMIBEAST KANNADA

ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐದು ಭಾಷೆಯಲ್ಲಿ ತೆರೆಗೆ ಬಂದಿರುವ ಸೈರಾ ನರಸಿಂಹ ರೆಡ್ಡಿಯನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಸೈರಾ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಆಧಾರಿತ ಚಿತ್ರ. ನರಸಿಂಹ ರೆಡ್ಡಿ ಪಾತ್ರದಲ್ಲಿ ಮೆಗಾಸ್ಟಾರ್ ಮಿಂಚಿದ್ದಾರೆ. ಇನ್ನು ಕನ್ನಡಿಗರಿಗೆ ಈ ಸಿನಿಮಾ ವಿಶೇಷ. ಯಾಕಂದ್ರೆ ಸೈರಾ ಚಿತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಅವುಕು ರಾಜನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಎಲ್ಲಾ ಕಡೆಯು ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಲೆಕ್ಷನ್ ವಿಚಾರದಲ್ಲೂ ಸೈರಾ ಕೋಟಿ ಕೋಟಿ ಬಾಚಿಕೊಂಡಿದೆ. ಆದ್ರೆ ಹೊಸ ರೆಕಾರ್ಡ್ ಕ್ರಿಯೆಟ್ ಮಾಡುವಲ್ಲಿ ಸೈರಾ ಸಿನಿಮಾ ಸೋತಿದೆ.

ಸಾಹೋ ಸಿನಿಮಾದ ರೆಕಾರ್ಡ್ ಬ್ರೇಕ್

ಸಾಹೋ ಸಿನಿಮಾದ ರೆಕಾರ್ಡ್ ಬ್ರೇಕ್

ಪ್ರಭಾಸ್ ಅಭಿನಯದ ಸಾಹೋ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದೆ ಸೈರಾ ಸಿನಿಮಾ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೆ ಸೈರಾ ಬರೋಬ್ಬರಿ 39 ಕೋಟಿ ಬಾಚಿಕೊಂಡಿದೆ. ಇನ್ನು ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಸುಮಾರು 35ಕೋಟಿ ಕಲೆಕ್ಷನ್ ಮಾಡಿತ್ತು. ಸಾಹೋ ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದೆ ಸೈರಾ. ಆದ್ರೆ ಹೊಸ ರೆಕಾರ್ಡ್ ಕ್ರಿಯೆ ಮಾಡಿಲ್ಲ. ಯಾಕಂದ್ರೆ ಕಲೆಕ್ಷನ್ ವಿಚಾರದಲ್ಲಿ ಬಾಹುಬಲಿ ಮೊದಲ ಸ್ಥಾನದಲ್ಲಿದೆ.

ಹಿಂದಿಯ ಕಲೆಕ್ಷನ್

ಹಿಂದಿಯ ಕಲೆಕ್ಷನ್

ಹಿಂದಿಯಲ್ಲಿ ಮೊದಲ ದಿನ ಸೈರಾ ಸಿನಿಮಾ 2.6 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ಬಾಲಿವುಡ್ ವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಹಿಂದಿ ಪ್ರೇಕ್ಷಕರಿಗೂ ಸಿನಿಮಾ ಮತ್ತಷ್ಟು ಹತ್ತಿರವಾಗಿರಲಿದೆ. ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇತ್ತು. ಆದ್ರೆ ಬಾಲಿವುಡ್ ನಲ್ಲಿ ಬಹು ನಿರೀಕ್ಷೆಯ ವಾರ್ ಸಿನಿಮಾ ರಿಲೀಸ್ ಆದ ಆದ ಕಾರಣ ಹಿಂದಿ ಕಲೆಕ್ಷನ್ ಕೊಂಚ ಹೊಡೆತ ಬಿದ್ದಿದೆ ಎಂದರೆ ತಪ್ಪಾಗಲ್ಲ.

ಎಲ್ಲಾ ಭಾಷೆಯ ಬಾಕ್ಸ್ ಆಫೀಸ್ ಕಲೆಕ್ಷನ್

ಎಲ್ಲಾ ಭಾಷೆಯ ಬಾಕ್ಸ್ ಆಫೀಸ್ ಕಲೆಕ್ಷನ್

ಸೈರಾ ಸಿನಿಮಾ ಒಟ್ಟು ಐದು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದೆಯಲ್ಲಿ ತೆರೆಗೆ ಬಂದಿದೆ. ಈ ಎಲ್ಲಾ ಕಡೆಯಿಂದನೂ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಭಾಷೆಯ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 66 ಕೋಟಿ ಎಂದು ಹೇಳಲಾಗುತ್ತಿದೆ.

ಓವರ್ ಸೀಸ್ ಮತ್ತು ವರ್ಲ್ಡ್ ವೈಡ್ ಕಲೆಕ್ಷನ್

ಓವರ್ ಸೀಸ್ ಮತ್ತು ವರ್ಲ್ಡ್ ವೈಡ್ ಕಲೆಕ್ಷನ್

ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಾಗೆ ವಿದೇಶದಲ್ಲೂ ಸೈರಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ವಿದೇಶದಲ್ಲಿ ಸೈರಾ ಮೊದಲ ದಿನದ ಕಲೆಕ್ಷನ್ 14 ಕೋಟಿ ಆಗಿದೆ. ಒಟ್ಟಾರೆ ಮೊದಲ ದಿನ ಸೈರಾ ಸಿನಿಮಾ ಬರೋಬ್ಬರಿ 92 ಕೋಟಿ ಬಾಚಿಕೊಂಡಿದೆ. ಆಕ್ಬೋಬರ್ 2 ರಜೆ ದಿನ ಆದ ಕಾರಣ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಈ ವೀಕೆಂಡ್ ನಲ್ಲಿ ಸೈರಾ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ

More from Filmibeat

English summary
Telugu actor Chiranjeevi starrer Sye Raa Narasimha Reddy First day box office collection. Sye Raa movie first day overall earned 92 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X