2024ರ ಸಾಲಿನ ಪದ್ಮಪುರಸ್ಕಾರ ಘೋಷಣೆ: ಚಿತ್ರರಂಗದಲ್ಲಿ ಯಾರಿಗೆಲ್ಲಾ ಪ್ರಶಸ್ತಿ ಲಭಿಸಿತು?

ಗಣರಾಜ್ಯೋತ್ಸವ ಸಂಭ್ರಮದಲ್ಲಿ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ಗೌರವವಾದ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. 132 ಮಂದಿಗೆ ಈ ವರ್ಷ ಈ ಗೌರವ ಪುರಸ್ಕಾರ ಸಿಕ್ಕಿದೆ. ಅದರಲ್ಲಿ ಐವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷನ್ ಹಾಗೂ 110 ಮಂದಿಗೆ ಪದ್ಮಶ್ರ ಈ ಲಭಿಸಿದೆ. ಚಿತ್ರರಂಗದಿಂದ ತೆಲುಗು ನಟ ಚಿರಂಜೀವಿಗೆ ಪದ್ಮವಿಭೂಷಣ ಸಿಕ್ಕಿರುವುದು ವಿಶೇಷ.

ಸಿನಿಮಾ ಕ್ಷೇತ್ರದಲ್ಲಿ ಮೂವರು ಈ ಬಾರಿ ಪದ್ಮಗೌರವಕ್ಕೆ ಪಾತ್ರರಾಗಿದ್ದಾರೆ. ಕಲೆ, ಸಾಮಾಜಿಕ ಸೇವೆ, ಸಾರ್ವಜನಿಕ ಸೇವೆ, ಸೈನ್ಸ್ ಮತ್ತು ಎಂಜಿನಿಯರಿಂಗ್, ವಾಣಿಜ್ಯ, ಶಿಕ್ಷಣ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಸಿದ ಅರ್ಹರಿಗೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. 2024ರಲ್ಲಿ ಒಟ್ಟು 132 ಜನರಿಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

Chiranjeevi, Vyjayanthimala Conferred With Padma Vibhushan, Mithun Chakraborty with Padma Bhushan

ಈಗಾಗಲೇ ಪದ್ಮಭೂಷಣ ಪಡೆದಿರುವ ತೆಲುಗು ನಟ ಚಿರಂಜೀವಿಗೆ ಇದೀಗ ದೇಶದ ಎರಡನೇ ಅತ್ಯುನ್ನತ ಗೌರವ ಪದ್ಮವಿಭೂಷಣ ಗರಿ ಲಭಿಸಿದೆ. ಇನ್ನು ತಮಿಳು ನಟಿ ವೈಜಂತಿಮಾಲಾ ಬಾಲಿಗೂ ಹಾಗೂ ಡ್ಯಾನ್ಸರ್ ಪದ್ಮ ಸುಬ್ರಮಣಿಯಂಗೂ ಪದ್ಮವಿಭೂಷಣ ಗೌರವ ಧಕ್ಕಿದೆ. ಸಿನಿಮಾರಂಗಕ್ಎ ಸೇವೆ ಸಲ್ಲಿಸುವ ಜೊತೆಗೆ ರಕ್ತದಾನ ಹಾಗೂ ನೇತ್ರದಾನವನ್ನು ನಟ ಚಿರಂಜೀವಿ ಪ್ರೋತ್ಸಾಹಿಸುತ್ತಾ ಬರ್ತಿದ್ದಾರೆ. ಕೊರೊನಾ, ಲಾಕ್‌ಡೌನ್ ಸಮಯದಲ್ಲಿ ಸಿನಿ ಕಾರ್ಮಿಕರ ಜೊತೆಗೆ ಜನಸಾಮಾನ್ಯರಿಗೆ ಚಿರಂಜೀವಿ ಸಹಾಯ ಮಾಡಿದ್ದರು. ಇದನ್ನೆಲ್ಲಾ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮವಿಭೂಷಣ ಗೌರವ ನೀಡಿ ಚಿರಂಜೀವಿಯವರನ್ನು ಸತ್ಕರಿಸುತ್ತಿದೆ.

ತಮಿಳು ನಟ ವಿಜಯ್‌ಕಾಂತ್‌ಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್‌ ಹಾಗೂ ಸಂಗೀತ ನಿರ್ದೇಶಕ ಪ್ಯಾರೆಲಲ್ ಶರ್ಮಾಗೂ ಕೂಡ ಪದ್ಮಭೂಷಣ ಗೌರವ ಲಭಿಸುತ್ತಿದೆ.

Chiranjeevi, Vyjayanthimala Conferred With Padma Vibhushan, Mithun Chakraborty with Padma Bhushan

ತೆಲುಗು ನಟ ಚಿರಂಜೀವಿಗೆ ಪದ್ಮವಿಭೂಷಣ ಗೌರವ ಲಭಿಸಿರುವುದಕ್ಕೆ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಮಹಾಪೂರವೇ ಹರಿದು ಬರುತ್ತಿದೆ. ವೈಜಯಂತಿ ಮಾಲಾಗೆ ದೇಶದ ಎರಡನೇ ಅತ್ಯುನ್ನತ ಗೌರವ ಲಭಿಸಿರುವುದಕ್ಕೆ ಬಾಲಿವುಡ್ ನಟಿ ಸೈರಾ ಭಾನು ಅಭಿನಂದನೆ ತಿಳಿಸಿದ್ದಾರೆ.

More from Filmibeat

English summary
Padma Awards 2024 announced: Chiranjeevi and many to get awards;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X