'ಪೈಲ್ವಾನ್' ಸಿನಿಮಾ ನೋಡ್ತಾರೆ ದಕ್ಷಿಣ ಭಾರತದ ದೊಡ್ಡ ನಟ
ಈಗಾಗಲೇ, 'ಪೈಲ್ವಾನ್' ಸಿನಿಮಾವನ್ನ ಬಾಲಿವುಡ್ ನಟ ಸಲ್ಮಾನ್ ಖಾನ್ ನೋಡುವ ಸುದ್ದಿ ಬಂದಿದೆ. ಇದೀಗ ದಕ್ಷಿಣ ಭಾರತದ ಒಬ್ಬ ದೊಡ್ಡ ನಟ ಕೂಡ ಸಿನಿಮಾವನ್ನು ವೀಕ್ಷಿಸಲಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ 'ಪೈಲ್ವಾನ್' ಸಿನಿಮಾವನ್ನು ನೋಡಲಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ಹಂಚಿಕೊಂಡಿದ್ದಾರೆ. ಸಲ್ಮಾನ್ ಹಾಗೂ ಚಿರಂಜೀವಿ ತಾವೇ ಸಿನಿಮಾವನ್ನು ನೋಡುವ ಆಸೆಯನ್ನು ಸುದೀಪ್ ಮುಂದೆ ಇಟ್ಟಿದ್ದಾರೆ. ಸುದೀಪ್ ಮೇಲಿನ ಸ್ನೇಹದಿಂದ ಚಿತ್ರ ನೋಡಿ, ಇನ್ನಷ್ಟು ಜನರಿಗೆ ಸಿನಿಮಾವನ್ನು ತಲುಪಿಸಲು ಸಹಾಯ ಮಾಡುತ್ತಿದ್ದಾರೆ.
ಚಿರಂಜೀವಿ ಅವರ 151ನೇ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ, ಸುದೀಪ್ ತೆಲುಗು ಸಿನಿಮಾ ಮಾಡಿದ್ದರೂ ಇದೇ ಮೊದಲ ಬಾರಿಗೆ ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಕನ್ನಡ ನಟರು ಸಹ 'ಪೈಲ್ವಾನ್' ಸಿನಿಮಾಗೆ ಶುಭ ಹಾರೈಸಿದ್ದಾರೆ. ನಟ ಜಗ್ಗೇಶ್ 'ತೋತಾಪುರಿ' ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬನ್ನೂರಿನಲ್ಲಿ 'ಪೈಲ್ವಾನ್' ವೀಕ್ಷಿಸಿದ್ದಾರೆ.
ಸಿನಿಮಾ ಹೇಗಿದೆ?
'ಪೈಲ್ವಾನ್' ಕ್ರೀಡಾ ಹಿನ್ನಲೆಯಲ್ಲಿ ಬಂದ ಪಕ್ಕಾ ಕಮರ್ಷಿಯಲ್ ಸಿನಿಮಾ. ಮನರಂಜನೆ ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವವರಿಗೆ ಸಿನಿಮಾ ಇಷ್ಟ ಆಗುತ್ತದೆ. ಸುದೀಪ್ ಶ್ರಮ, ನಿರ್ದೇಶಕರ ಪರಿಶ್ರಮ ಮೆಚ್ಚುವಂತದ್ದು. ಕೃಷ್ಣ ಎಂಬ ಕುಸ್ತಿ ಪೈಲ್ವಾನನ ಸಾಧನೆಯ ಕಥೆಯೇ ಈ ಚಿತ್ರ. ಇಲ್ಲಿ ಸಾಹಸವೂ ಇದೆ. ಸಂಬಂಧದ ಮಹತ್ವವೂ ಇದೆ. ಭಾವನಾತ್ಮಕ ದೃಶ್ಯಗಳಿಂದ ಸಿನಿಮಾಗೆ ತೂಕ ಬಂದಿದೆ.


Click it and Unblock the Notifications











