ಬಿಡುಗಡೆ ಆಗಲಿದೆ ಚಿರು ಸರ್ಜಾ ನಟನೆಯ ಕ್ಷತ್ರಿಯ ಸಿನಿಮಾದ ಟ್ರೇಲರ್

ಚಿರಂಜೀವಿ ಸರ್ಜಾ ನಟನೆಯ 'ಶಿವಾರ್ಜುನ' ಸಿನಿಮಾ ಈಗ ಮತ್ತೆ ಚಿತ್ರಮಂದಿರಗಳಲ್ಲಿದೆ, ಆದರೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಹೌದು, ಚಿರಂಜೀವಿ ಸರ್ಜಾ ಬದುಕಿದ್ದಾಗ ಬಿಡುಗಡೆಯಾದ ಕೊನೆಯ ಸಿನಿಮಾ ಶಿವಾರ್ಜುನ ಆದರೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ 'ಕ್ಷತ್ರಿಯ'.

ನಾಳೆ (ಅಕ್ಟೋಬರ್ 17) ಚಿರಂಜೀವಿ ಸರ್ಜಾ ಹುಟ್ಟುಹಬ್ಬವಿದ್ದು, ಇದೇ ದಿನದಂದು ಚಿರು ಸರ್ಜಾ ನಟನೆಯ ಕ್ಷತ್ರಿಯ ಸಿನಿಮಾದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ಕ್ಷತ್ರಿಯ ಸಿನಿಮಾ ಚಿರು ನಟನೆಯ ಕಟ್ಟಕಡೆಯ ಸಿನಿಮಾ ಆಗಿದೆ.

ಧ್ವನಿ ನೀಡಿದ್ದಾರೆ ಧೃವ ಸರ್ಜಾ

ಧ್ವನಿ ನೀಡಿದ್ದಾರೆ ಧೃವ ಸರ್ಜಾ

ಕ್ಷತ್ರಿಯ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧೃವ ಸರ್ಜಾ ಧ್ವನಿ ನೀಡಿದ್ದಾರೆ. ಸಿನಿಮಾದ ಡಬ್ಬಿಂಗ್ ಪ್ರಾರಂಭವಾಗುವ ವೇಳೆಗೆ ಚಿರು ಸರ್ಜಾ ನಿಧನವಾಗಿದ್ದರು, ಹಾಗಾಗಿ ಧೃವ ಸರ್ಜಾ ಸಿನಿಮಾಕ್ಕೆ ಡಬ್ಬಿಂಗ್ ಮಾಡಿದ್ದಾರೆ.

ಅನಿಲ್ ಮಂಡ್ಯ ನಿರ್ದೇಶನದ ಸಿನಿಮಾ

ಅನಿಲ್ ಮಂಡ್ಯ ನಿರ್ದೇಶನದ ಸಿನಿಮಾ

ಎ.ವೆಂಕಟೇಶ್ ಅವರು ಕ್ಷತ್ರಿಯ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಅನಿಲ್ ಮಂಡ್ಯ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕೊನೆಯ ಕೆಲವು ಭಾಗವಷ್ಟೆ ಬಾಕಿ ಇದೆಯಂತೆ. ಚಿರು ಇಲ್ಲದೆ ಈ ಭಾಗವನ್ನು ಹೇಗೆ ಮುಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಅಕ್ಟೋಬರ್ 17 ಚಿರು ಸರ್ಜಾ ಹುಟ್ಟುಹಬ್ಬ

ಅಕ್ಟೋಬರ್ 17 ಚಿರು ಸರ್ಜಾ ಹುಟ್ಟುಹಬ್ಬ

ಅಕ್ಟೋಬರ್ 17 ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಚಿರು ಸರ್ಜಾ ನಿಧನವಾದ ನಂತರ ಇದು ಅವರ ಮೊದಲ ಹುಟ್ಟುಹಬ್ಬ. ಕೆಲವು ದಿನಗಳ ಹಿಂದಷ್ಟೆ ಚಿರು ಕುಟುಂಬದವರು ಮೇಘನಾ ರಾಜ್ ಅವರ ಸೀಮಂತ ಕಾರ್ಯವನ್ನುನ ಅದ್ಧೂರಿಯಾಗಿ ಮಾಡಿದ್ದಾರೆ.

Recommended Video

ಮಗನ ಸಿನಿಮಾ ನೋಡಲು ಥಿಯೇಟರ್ ಗೆ ಬಂದ ಚಿರು ತಾಯಿ | Chiranjeevi Sarja Mother | Filmibeat Kannada
ಮಗನ ಸಿನಿಮಾ ನೋಡಿದ ಚಿರು ತಾಯಿ

ಮಗನ ಸಿನಿಮಾ ನೋಡಿದ ಚಿರು ತಾಯಿ

ಚಿರಂಜೀವಿ ಸರ್ಜಾ ನಟನೆಯ ಶಿವಾರ್ಜುನ ಸಿನಿಮಾ ಮರು ಬಿಡುಗಡೆ ಆಗಿದೆ. ಇಂದು ಸಂತೋಶ್ ಚಿತ್ರಮಂದಿರದಲ್ಲಿ ಹಲವು ಅಭಿಮಾನಿಗಳು ಶಿವಾರ್ಜುನ ಸಿನಿಮಾ ನೋಡಿದರು. ಚಿರು ಸರ್ಜಾ ತಾಯಿ ಅವರೂ ಸಹ ಚಿತ್ರಮಂದಿರಕ್ಕೆ ಬಂದು ಮಗನ ಸಿನಿಮಾ ನೋಡಿದರು.

More from Filmibeat

English summary
Chiranjeevi Sarja's last acted movie Kshatriya's trailer will out on October 17 on Chiru's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X