For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಪ್ರಶಸ್ತಿ ಗೆದ್ದ ಮೇಘನಾ ರಾಜ್ ಗೆ ಪತಿ ಚಿರು ಸರ್ಜಾ ಹೇಳಿದ್ದೇನು?

  |

  ಕನ್ನಡ ನಟಿ ಮೇಘನಾ ರಾಜ್ ಅವರಿಗೆ 'ಇರುವುದೆಲ್ಲವ ಬಿಟ್ಟು' ಚಿತ್ರದ ನಟನೆಗಾಗಿ 2018ನೇ ಸಾಲಿನಲ್ಲಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ. 2009ರಲ್ಲಿ 'ಪುಂಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಹತ್ತು ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.

  ಇದೀಗ, ಹತ್ತು ವರ್ಷದ ಬಳಿಕ ಮೇಘನಾ ನಟನೆಗೆ ರಾಜ್ಯದ ಅತ್ಯುನ್ನತ ಗೌರವ ಸಿಕ್ಕಿರುವುದು ಮೇಘನಾ ಪಾಲಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

  2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಾಘಣ್ಣ ಅತ್ಯುತ್ತಮ ನಟ, ಮೇಘನಾ ರಾಜ್ ಉತ್ತಮ ನಟಿ2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಾಘಣ್ಣ ಅತ್ಯುತ್ತಮ ನಟ, ಮೇಘನಾ ರಾಜ್ ಉತ್ತಮ ನಟಿ

  ಹೆಂಡತಿಯನ್ನು ಹೊಗಳಿದ ಚಿರು ಸರ್ಜಾ , FILMIBEAT KANNADA

  ಮೇಘನಾಗೆ ರಾಜ್ಯ ಪ್ರಶಸ್ತಿ ಲಭಿಸಿದ್ದಕ್ಕೆ ಪತಿ ಚಿರಂಜೀವಿ ಸರ್ಜಾ ಶುಭಕೋರಿದ್ದಾರೆ. ಪತ್ನಿಯ ನಟನೆ ಬಗ್ಗೆ ಚಿರು ಏನಂದ್ರು? ಮುಂದೆ ಓದಿ...

  ನನ್ನ ಪತ್ನಿ ಬಗ್ಗೆ ಹೆಮ್ಮೆ ಇದೆ

  ನನ್ನ ಪತ್ನಿ ಬಗ್ಗೆ ಹೆಮ್ಮೆ ಇದೆ

  ''2018ರಲ್ಲಿ ರಾಜ್ಯ ಪ್ರಶಸ್ತಿ ಗೆದ್ದ ನನ್ನ ಪತ್ನಿ ಮೇಘನಾ ರಾಜ್ ಬಗ್ಗೆ ನನಗೆ ಹೆಮ್ಮೆ ಆಗುತ್ತಿದೆ ಮತ್ತು ಈ ಸುದ್ದಿ ಬಹಳ ಸಂತಸ ತಂದಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಆಕೆಯ ಮೇಲೆ ಮತ್ತು ನಮ್ಮ ಕುಟುಂಬದ ಮೇಲೆ ಇರಲಿ ಎಂದು ವಿನಂತಿಸುತ್ತೇನೆ'' ಎಂದು ಚಿರು ಸರ್ಜಾ ಹರ್ಷ ವ್ಯಕ್ತಪಡಿಸಿದ್ದಾರೆ.

  ರಾಜ್ಯ ಪ್ರಶಸ್ತಿ ಪ್ರಕಟ: 'ಕೆಜಿಎಫ್' ಹಾಗೂ 'ಟಗರು' ಸಿನಿಮಾಗಳಿಗೆ ಭಾರಿ ನಿರಾಸೆರಾಜ್ಯ ಪ್ರಶಸ್ತಿ ಪ್ರಕಟ: 'ಕೆಜಿಎಫ್' ಹಾಗೂ 'ಟಗರು' ಸಿನಿಮಾಗಳಿಗೆ ಭಾರಿ ನಿರಾಸೆ

  ಮದುವೆ ಬಳಿಕ ಪ್ರಶಸ್ತಿ!

  ಮದುವೆ ಬಳಿಕ ಪ್ರಶಸ್ತಿ!

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. ಮದುವೆ ಬಳಿಕ ಮೇಘನಾಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ಈ ದಂಪತಿಯ ಖುಷಿ ಹೆಚ್ಚಿಸಿದೆ. 2018ರ ಮೇ ತಿಂಗಳಲ್ಲಿ ಚಿರು ಸರ್ಜಾ ಮತ್ತು ಮೇಘನಾ ಮದುವೆ ಆಗಿದ್ದರು. ಈಗ ಪ್ರಕಟವಾಗಿರುವ ರಾಜ್ಯ ಪ್ರಶಸ್ತಿಯೂ ಕೂಡ 2018ನೇ ಸಾಲಿನದ್ದು ಎಂಬುದು ವಿಶೇಷ.

  ರಾಜ್ಯ ಪ್ರಶಸ್ತಿ ವಿರುದ್ಧ ಅಸಮಾಧಾನ: 'ಸಿನಿಮಾ ತರಬೇತಿಗಿಂತ ಲಾಬಿ ಮಾಡುವುದು ಕಲಿಯಬೇಕು'ರಾಜ್ಯ ಪ್ರಶಸ್ತಿ ವಿರುದ್ಧ ಅಸಮಾಧಾನ: 'ಸಿನಿಮಾ ತರಬೇತಿಗಿಂತ ಲಾಬಿ ಮಾಡುವುದು ಕಲಿಯಬೇಕು'

  ಬಹುಭಾಷೆಯಲ್ಲಿ ಮೇಘನಾ ನಟನೆ

  ಬಹುಭಾಷೆಯಲ್ಲಿ ಮೇಘನಾ ನಟನೆ

  ಕನ್ನಡದ ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಶಾಯ್ ದಂಪತಿ ಮಗಳಾಗಿರುವ ಮೇಘನಾ ರಾಜ್, ಕನ್ನಡದಲ್ಲಿ ಮಾತ್ರವಲ್ಲ ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡ ಬಿಟ್ಟರೆ ಹೆಚ್ಚು ಮಲಯಾಳಂ ಸಿನಿಮಾ ಮಾಡಿರುವುದು ವಿಶೇಷ.

  'ನನಗೆ ಬಂದ ಮೊದಲ ಪ್ರಶಸ್ತಿ': ಸಂತಸ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್'ನನಗೆ ಬಂದ ಮೊದಲ ಪ್ರಶಸ್ತಿ': ಸಂತಸ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್

  'ಇರುವುದೆಲ್ಲವ ಬಿಟ್ಟು' ಚಿತ್ರದ ಬಗ್ಗೆ

  'ಇರುವುದೆಲ್ಲವ ಬಿಟ್ಟು' ಚಿತ್ರದ ಬಗ್ಗೆ

  2018ರಲ್ಲಿ ಬಿಡುಗಡೆಯಾಗಿದ್ದ ಇರುವುದೆಲ್ಲವ ಬಿಟ್ಟು ಚಿತ್ರದ ನಟನೆಗಾಗಿ ಮೇಘನಾಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ತಿಲಕ್ ಮತ್ತು ಶ್ರೀಮಹಾದೇವ್ ಇಬ್ಬರು ನಾಯಕರಾಗಿ ಕಾಣಿಸಿಕೊಂಡಿದ್ದರು. ಕಾಂತ್ ಕನ್ನಲ್ಲಿ ಈ ಚಿತ್ರ ನಿರ್ದೇಶಿಸಿದ್ದರು. ಸಿನಿಮಾ ರಿಲೀಸ್ ಆದಾಗ ಮೆಚ್ಚುಗೆ ಕೂಡ ಗಳಿಸಿಕೊಂಡಿತ್ತು.

  English summary
  Kannada actor Chiranjeevi sarja wish to meghana raj for winning best actress state film award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X