For Quick Alerts
  ALLOW NOTIFICATIONS  
  For Daily Alerts

  ಚಿತ್ರದುರ್ಗ: ರೈತರ ಸಂಕಷ್ಟದ ಮೇಲೆ ಬೆಳಕ ಚೆಲ್ಲುವ ಪ್ರಯತ್ನ 'ಅನ್ನದಾತ' ಕಿರುಚಿತ್ರ

  By ಚಿತ್ರದುರ್ಗ ಪ್ರತಿನಿಧಿ
  |

  ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಯುವ ಕಲಾವಿದರಿಂದ ಮಾಜಿ ಪ್ರಧಾನಿ ಹಾಗೂ ಮಣ್ಣಿನ ಮಗ ಹೆಚ್.ಡಿ. ದೇವೇಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ "ಅನ್ನದಾತ power of farmer' ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

  ಜೀ ಕನ್ನಡದ "ಸತ್ಯ" ಧಾರವಾಹಿಯ ಸಹ ನಿರ್ದೇಶಕ ಜಯಂತ್ ಗೌಡ ಅವರ ನೇತೃತ್ವದಲ್ಲಿ ಮೂಡಿಬಂದಿರುವ 25 ನಿಮಿಷದ ಕಿರುಚಿತ್ರ ಇದಾಗಿದೆ. ಅನ್ನದಾತನ ಆರ್ಥಿಕ ಸಂಕಟಗಳನ್ನು ಅನಾವರಣಗೊಳಿಸುವ ಪ್ರಯತ್ನ ಇದಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಇರುವುದು, ಕರೋನಾ ಸಂದರ್ಭದಲ್ಲಿ ರೈತರಿಗೆ ಅಧಿಕಾರಿಗಳಿಂದ ಕಿರುಕುಳದ ಕಾಟ, ಆಡಳಿತ ವ್ಯವಸ್ಥೆಗೆ ಒಂದೊಳ್ಳೆ ಸಂದೇಶ ರವಾನಿಸುವ ಇತರೆ ಪ್ರಮುಖ ಅಂಶಗಳನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ.

  ಹಳ್ಳಿಗಾಡಿ ಬದುಕು ಹಾಗೂ ರೈತನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ರೈತ ಸೋಮಣ್ಣ ಸಾಲಸೂಲ ಮಾಡಿ ತಂಗಿ ಮದುವೆ ಮಾಡಿರುವುದು, ಜಮೀನಿನಲ್ಲಿ ಬೆಳೆ ಕೈಕೊಟ್ಟಗಾ, ಸಾಲದ ಹೊರೆ ಮೈಮೇಲೆ ಬಂದಾಗ ವ್ಯವಸಾಯ ಬಿಟ್ಟು ಸಾಲ ತೀರಿಸಲು ಬೆಂಗಳೂರಿಗೆ ಉದ್ಯೋಗ ಹರಿಸಿಕೊಂಡು ಹೋಗಿ ದುಡಿದು ಸಾಲ ತೀರಿಸುವ ಚಿಂತೆಯಲ್ಲಿರುವ ಸೋಮಣ್ಣ. ಸ್ನೇಹಿತ ಹಿತನುಡಿಗಳಿಂದ ಭೂಮಿ ತಾಯಿಯನ್ನು ನಂಬಿದರೆ ಕೈ ಬಿಡೋದಿಲ್ಲ ಎನ್ನುವ ಪರಿಕಲ್ಪನೆ ಎತ್ತಿ ಹಿಡಿಯಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ರೈತರಿಗೆ ಯಾವ ರೀತಿ ಅನ್ಯಾಯವಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ, ನಷ್ಟದ ಸುಳಿಗೆ ಸಿಲುಕಿ ಮನನೊಂದು ಕೊಳ್ಳುವುದು, ಸಾಲಗಾರರ ಕಾಟ ತಾಳಲಾರದೇ ಸೋಮಣ್ಣ ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಬಿತ್ತರಿಸಲಾಗಿದೆ. ಅಧಿಕಾರಿಗಳ ಕಾಟದಿಂದ ಹೆಚ್ಚು ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪುತ್ತಿದ್ದಾರೆ ಎಂಬ ಸಂದೇಶವನ್ನು ಕಿರುಚಿತ್ರದಲ್ಲಿ ತೋರಿಸಲಾಗಿದೆ. ಮತ್ತೊಂದು ಕಡೆ ಅಧಿಕಾರಿಗಳು ಬಡ್ಡಿಗೆ ಬಡ್ಡಿ ಹಾಕಿ ಅತಿಹೆಚ್ಚು ಹಣ ವಸೂಲಿ ಮಾಡಲು ಬರುವ ಅಧಿಕಾರಿಗಳಿಗೆ ರೈತರು ಬೆವರಿಳಿಸಿರುವುದನ್ನು ಗಮನಿಸಬಹುದಾ ಪ್ರಮುಖ ಅಂಶವಾಗಿದೆ. ಕೋರ್ಟ್ ವಾರೆಂಟ್ ಮೂಲಕ ಜಮೀನು ಅರಾಜು ಮಾಡಲು ಅಧಿಕಾರಿಗಳು ಬರೋವತ್ತಿಗೆ ಸೋಮಣ್ಣ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಸಿಟ್ಟಿಗೆದ್ದ ಆತನ ಸ್ನೇಹಿತರು "ರೈತ ಅಂದ್ರೆ ಏನು, ಅವನ ಶಕ್ತಿ ಎಂದ್ರೆ ಏನು ಎಂಬುದು ಜ್ಞಾನ ಇಲ್ಲದ ಅಧಿಕಾರಿಗಳಿಗೆ ಬೆಳರಿಳಿಸಿದ್ದಾರೆ". "ರೈತ ಈ ದೇಶದ ಬೆನ್ನೆಲುಬು, ಅವನಿಂದಲೇ ಎಲ್ಲ, ರೈತ ಇಲ್ಲಾಂದ್ರೆ ಈ ದೇಶಕ್ಕೆ ಅನ್ನ ಇಲ್ಲ, ಇಷ್ಟೇಲ್ಲಾ ಗೊತ್ತಿದ್ದರು ಸರ್ಕಾರಕ್ಕೆ ಕರುಣೆ ಇಲ್ಲದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದು ವಿಶೇಷ".

  "ಮಳೆ ಬೆಳೆ ಇಲ್ಲ, ಬೋರ್ವೆಲ್ ನಲ್ಲಿ ಒಂದು ಹನಿ ನೀರು ಇಲ್ಲದೆ ಬತ್ತಿ ಹೋಗಿದೆ, ಕಷ್ಟ ಪಟ್ಟು ಹಾಗೋ ಹೀಗೋ ಬೆಳೆ ಬೆಳೆದರೆ ಒಂದೊಳ್ಳೆ ಬೆಲೆ ಕೊಡದ ನಿಮ್ಮ ಸರ್ಕಾರ ನಾವು ಏನು ಮಾಡಬೇಕು ಎಂದು ಪ್ರಶ್ನಿಸುವುದು ಗಮನಿಸಬಹುದಾಗಿದೆ. ಅಧಿಕಾರಿಗಳ ತಾಳಲಾರದೆ ರೈತರು ಜೀವ ಕಳೆದುಕೊಳ್ಳುತ್ತಿರುವುದು ನಿಮ್ಮ ಸರ್ಕಾರ ಮತ್ತು ಕೋರ್ಟ್ ಗೆ ಇನ್ನೇಷ್ಟು ರೈತರನ್ನು ಬಲಿಪಡೆಯಬೇಕು ಅಂತಿದೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಲಾಗಿದೆ.

  " ಕರೋನಾ ರೋಗ ಬಂದು ಲಾಕ್ ಡೌನ್ ಆದಾಗ ಜನ ಕಾರು, ಬೈಕ್, ಬಂಗಾರ ಖರೀದಿ ಮಾಡಲಿಲ್ಲ. ಬದಲಿಗೆ ಎದ್ನೋ, ಬಿದ್ದೆನೋ ಅಂತ ತಿನ್ನೋ ಅನ್ನ ಹುಡುಕಿಕೊಂಡು ಹೋದ್ರು. "ನಮಗೂ ಒಂದು ಟೈಂ ಬಂದೆ ಬರುತ್ತೆ ಆಗ ರೈತ ಅಂದ್ರೆ ಏನು, ರೈತನ ತಾಕತ್ತು ಏನು ಎಂಬುದನ್ನು ತೋರಿಸುತ್ತೆವೆ" ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.

  ಇರೋ ಬರೋ ಅರಳಿ ಮರ,ಬೆವಿನ ಮರ ಕಡಿದು ಹಾಕಿದ್ದಾರೆ. ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ. ಇದೇ ತರಹ ಮುಂದೊಂದು ದಿನ ಹಣ್ಣು, ಕಾಯಿಯನ್ನು ಕಾಡಿಬೇಡಿ ತಿನ್ನೋ ಪರಿಸ್ಥಿತಿ ಬಂದೆ ಬರುತ್ತದೆ ನೆನಪಿರಲಿ.


  "ಆಗ ನಾವು ಹೇಳಿದ್ದೆ ಬೆಲೆ, ಕೂಗಿದ್ದೆ ರೇಟ್" ಆಗ ಏನ್ ಮಾಡುತ್ತದೆ ನಿಮ್ಮ ಸರ್ಕಾರ ನೋಡೋಣ ಎನ್ನುವ ರೈತ ಮುಖಂಡ ರಂಗನಾಥ್ ಅವರ ಖಡಕ್ ಡೈಲಾಗ್ ಗಮನಾರ್ಹವಾಗಿದೆ. ಒಟ್ಟಾರೆಯಾಗಿ ಸ್ವತಹ ರೈತರೇ ಒಗ್ಗಟ್ಟಿನಿಂದ ಸೋಮಣ್ಣನ ಸಾಲ ತೀರಿಸಲು ಮುಂದಾಗಿರುವುದು ವಿಶೇಷವಾಗಿದ್ದು, ರೈತರು ಒಗ್ಗಟ್ಟು ಪ್ರದರ್ಶಿಸಬೇಕು ಎನ್ನುವ ಸಂದೇಶವನ್ನು ರೈತರಿಗೆ ತಿಳಿಸಿದ್ದಾರೆ.

  ಈ ಕಿರುಚಿತ್ರದಲ್ಲಿ ಸಣ್ಣದೊಂದು ಕಾಮಿಡಿ ಇದ್ದು, ನನಗೆ ಹೆಂಡ್ರು ಮಕ್ಳು ಇಲ್ಲ, ನಾನು ಮನೆಗೆ ಹೋಗಲ್ಲ, ಚನೈ ಅಂತೆ, ಮುಂಬೈಅಂತೆ, ಮೊದ್ಲು ಹುಟ್ಟಿದ ಊರಿಗೆ ಸಪೋರ್ಟ್ ಮಾಡ್ರೋ, ತಾಯಿ ಕರಿಯಮ್ಮ ನಮಸ್ಕಾರ ಈಸಲ ಆರ್.ಸಿ.ಬಿ. ಕಪ್ ನಮ್ದೆ ಎನ್ನುವ ಕುಡುಕನ ಪಾತ್ರದಲ್ಲಿ ನಿಜಾನಂದ ಮಿಂಚಿದ್ದಾರೆ.

  ಈ ಚಿತ್ರವನ್ನು ರಂಗೇನಹಳ್ಳಿ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಿಕರಣಕ್ಕೆ ಕ್ಯಾಮೆರಾ, ದ್ರೋಣ್ ಕ್ಯಾಮೆರಾ ಹಾಗೂ ಮೊಬೈಲ್ ಬಳಸಲಾಗಿದೆ. ಜಯಂತ್ ಗೌಡ ಅವರು ಚಿತ್ರಕಥೆ, ಸಂಕಲನ ನಿರ್ದೇಶನ, ಸಂಭಾಷಣೆ ಕೊಟ್ಟಿದ್ದಾರೆ. ಮುಖ್ಯ ಪಾತ್ರದಲ್ಲಿ ಬೊಪ್ಪರಾಯ, ರಂಗನಾಥ್, ಸೈಫುಲ್ಲಾ, ಉದಯ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಮಲಯಾಳಂ Bigg boss ಕದ್ದು ಚಿತ್ರೀಕರಣ ನಡೆಸಲಾಗುತ್ತಿತ್ತು | Filmibeat Kannada

  " ಈಗಾಗಲೇ ಕಿರುಚಿತ್ರ "RJV ಕ್ರಿಯೇಷನ್ ಅಂಡ್ ಯುಟ್ಯೂಬ್ ಚಾನೆಲ್ ನಲ್ಲಿ" ಬಿಡುಗೊಂಡಿದ್ದು, ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಈ ಚಿತ್ರವನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಹುಟ್ಟು ಹಬ್ಬಕ್ಕೆ ಬಿಡುಗಡೆ ಮಾಡಿರುವ ಮತ್ತೊಂದು ವಿಶೇಷತೆ. ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ ಅವರ ಮೂಲಕ ದೇವೆಗೌಡ ಅವರಿಗೆ ತಲುಪಿಸುವ ಪ್ರಯತ್ನ ಯುವಕರು ಮಾಡುತ್ತಿದ್ದಾರೆ.

  English summary
  Chitradurga district Hiryuru's Rangenahalli village youths produce a short movie about farmers life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X