ಹೊಸತನದ ಹಠದಿಂದ ಅರಳಿದ 'ಚಿತ್ತಾರ'ಕ್ಕೆ ದಶಕದ ಮೈಲಿಗಲ್ಲು

ಚಿತ್ತಾರ.. ಚಿತ್ತಾರ ಎಂದರೆ ಕಲರ್ ಫುಲ್. ಸಿನಿಮಾ ಎಂಬ ಅದ್ಭುತ ಲೋಕಕ್ಕೆ ಕಲರ್ ಫುಲ್ ವೇದಿಕೆ ಕಲ್ಪಿಸುವ ಆಶಯದೊಂದಿಗೆ 2009ರಲ್ಲಿ ಪ್ರಾರಂಭವಾಯಿತು. ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ಪ್ರತಿ ಸಂಚಿಕೆಯೂ ಸ್ಯಾಂಡಲ್ ‍ವುಡ್‍ನಲ್ಲಿ ಸಂಚಲನ ಉಂಟುಮಾಡಿದೆ. ಪ್ರತಿ ಸಂಚಿಕೆಯಲ್ಲೂ ಹೊಸತನ್ನು ನೀಡಬೇಕೆನ್ನುವ ಹಠದಿಂದ ಅರಳುವ ಚಿತ್ತಾರ ದಶಕದ ಮೈಲಿಗಲ್ಲು ದಾಟಿದೆ.

ಕನ್ನಡದ ಕ್ವಾಲಿಟಿ ಮ್ಯಾಗಜಿನ್, ಕನ್ನಡದ ಫಿಲ್ಮ್ ಫೇರ್, ಕನ್ನಡದ ಮುಖವಾಣಿ, ಹೀಗೆ ಅನೇಕ ಗರಿಗಳು ಚಿತ್ತಾರಕ್ಕೆ ದಕ್ಕಿದೆ. ಇದಕ್ಕೆ ಕಾರಣ ಚಿತ್ರರಂಗ, ಓದುಗರು ಮತ್ತು ಜಾಹೀರಾತುದಾರರ ನೆಚ್ಚಿನ ಮಾಧ್ಯಮ ಎನಿಸಿಕೊಂಡಿದೆ.

ಚಂದನವನಕ್ಕೆ ಒಂದು ಕ್ವಾಲಿಟಿ ಮ್ಯಾಗಜಿನ್ ನೀಡಬೇಕು ಮತ್ತು ಅದು ಬೇರೆ ಯಾವ ಭಾಷೆಗಿಂತಲೂ ಕಡಿಮೆ ಇರಬಾರದು ಎಂಬ ನಿಲುವಲ್ಲಿ ಪ್ರಾರಂಭವಾಗಿದ್ದೇ ಚಿತ್ತಾರ. ಕನ್ನಡದಲ್ಲಿ ಅನೇಕ ಮ್ಯಾಗಜಿನ್ ‍ಗಳು ಬಂದು ಹೋಗಿದೆ. ಚಿತ್ತಾರವನ್ನು ಹೇಗೆ ವಿಶೇಷವಾಗಿ ರೂಪಿಸಬೇಕು ಎಂಬ ಮಂಥನದಲ್ಲಿ ರೂಪುಗೊಂಡಿದ್ದು, ಗುಣಮಟ್ಟದ ಪತ್ರಿಕೆ, ಅದ್ಭುತ ವಿನ್ಯಾಸ ಮತ್ತು ಮಾರುಕಟ್ಟೆಯ ಚಾಕಚಕ್ಯತೆ, ಈ ಮಿಶ್ರಣದಿಂದ ಚಿತ್ತಾರ ಕೆಲವೇ ತಿಂಗಳಲ್ಲಿ ಕನ್ನಡದ ಅಗ್ರಗಣ್ಯ ಮ್ಯಾಗಜಿನ್ ಆಗಿ ರೂಪುಗೊಂಡಿತು. ಕನ್ನಡಿಗರ ಮನೆ ಮನಗಳನ್ನು ತಲುಪಿತು.

chittara magazine celebrating 10th year anniversary

ಪ್ರತಿಸಂಚಿಕೆಯಲ್ಲೂ ಹೊಸ ಹೊಸ ವಿಚಾರ, ವಿಷಯಗಳನ್ನೊಳಗೊಂಡ ಲೇಖನ, ಸಂದರ್ಶನಗಳು ಪ್ರಕಟವಾಗಿದ್ದು, ಸಿನಿಮಾ ಪತ್ರಿಕೋದ್ಯಮಕ್ಕೊಂದು ಭಾಷ್ಯ ಬರೆದಿತ್ತು. ಮತ್ತು ಮುಖ್ಯವಾಗಿ ಪಾಸಿಟೀವ್ ಜರ್ನಲಿಸಂ ಚಿತ್ತಾರದ ಹೆಗ್ಗಳಿಕೆ. ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸಬೇಕೆನ್ನುವ ನಮ್ಮ ದ್ಯೇಯ ನಮ್ಮನ್ನು ವಿಭಿನ್ನವಾಗಿಸಿತು.

ಕನ್ನಡದ ಎಲ್ಲ ಸ್ಟಾರ್‍ಗಳ ಫೋಟೋಶೂಟ್ ಮಾಡಿ ಟ್ರೆಂಡ್ ಹುಟ್ಟುಹಾಕಿದ್ದು ಚಿತ್ತಾರದ ವಿಶೇಷತೆ. ಓದುಗರಿಗೂ ಮತ್ತು ತಾರೆಯರಿಗೂ ಸೇತುವೆಯಾಗಿ ಚಿತ್ತಾರ ಒಂದು ದಶಕವನ್ನು ಪೂರೈಸಿದೆ. ಇಡೀ ತಂಡ ಈ ಯಶಸ್ಸಿನ ಪಾಲುದಾರರು. ಕನ್ನಡ ಪತ್ರಿಕೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಬೇಕೆನ್ನುವ ಗುರಿಯೊಂದಿಗೆ ವಿದೇಶಗಳಲ್ಲೂ ಕನ್ನಡ ಕಲರವವನ್ನು ಮೊಳಗಿಸಿದ್ದು ಚಿತ್ತಾರದ ಸಾಧನೆ.

ಸಿಂಗಪುರ, ದುಬೈ, ಆಸ್ಟ್ರೇಲಿಯಾ, ಶ್ರೀಲಂಕಾ ದೇಶಗಳಲ್ಲಿ ಚಿತ್ತಾರ ಪ್ರತಿಗಳು ಪ್ರತಿ ತಿಂಗಳೂ ಸಿಗುತ್ತವೆ. ಕರ್ನಾಟಕವನ್ನು ದಾಟಿ ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ, ಗೋವಾ, ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲೂ ಚಂದನವನದ ಕಂಪನ್ನು ಪಸರಿಸುತ್ತಿದೆ. ಚಿತ್ತಾರ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಂಡು ಝೂಮ್ ಇಂಗ್ಲಿಷ್ ಪತ್ರಿಕೆಯನ್ನು ಪರಿಚಯಿಸಿ ಯಶಸ್ವಿಯಾಗಿದೆ. ನಂತರ ಸಿ ಮ್ಯೂಸಿಕ್ ಆಡಿಯೋ ಸಂಸ್ಥೆ ಸ್ಥಾಪಿಸಿ ನೂರಾರು ಚಿತ್ರಗಳಿಗೆ ಮಾರುಕಟ್ಟೆ ಕಲ್ಪಿಸಿದೆ.

chittara magazine celebrating 10th year anniversary

ಈಗಿನ ಸೋಶಿಯಲ್ ಮೀಡಿಯಾದಲ್ಲಿ ಕೂಡ ಚಿತ್ತಾರ ಅತಿ ಹೆಚ್ಚು ಜನರನ್ನು ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮತ್ತು ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಚಿತ್ತಾರ ತೊಡಗಿಸಿಕೊಳ್ಳುವ ಯೋಜನೆ ರೂಪಿಸಿದೆ. ಒಂದು ಪತ್ರಿಕೆ ಹಲವು ವಿಶೇಷತೆ ಎಂಬ ಚಿತ್ತಾರದ ಟ್ಯಾಗ್‍ಲೈನ್ ಕಾರ್ಪೊರೇಟ್ ಜಗತ್ತನ್ನು ಕನ್ನಡ ಸಿನಿಮಾದೊಂದಿಗೆ ಬೆಸೆದ ಶ್ರೇಯ ಚಿತ್ತಾರಕ್ಕೆ ಸಲ್ಲುತ್ತದೆ.

ದೇಶ ವಿದೇಶಗಳ ಖ್ಯಾತ ಬ್ರಾಂಡ್‍ಗಳಾದ ಮರ್ಸಿಡೀಸ್, ಆಡಿ, ಗೋದ್ರೆಜ್, ಹ್ಯುಂಡೈ, ಜಾಗ್ವಾರ್, ಮಿನಿಕೂಪರ್, ಜೀಪ್, ರೆನಾಲ್ಟ್, ಬಜಾಜ್, ಏರ್‍ಟೆಲ್, ಟಾಟಾ ಸ್ಕೈ, ಹೀಗೆ ನೂರಾರು ಸಂಸ್ಥೆಗಳನ್ನು ಕನ್ನಡಕ್ಕೆ ಪರಿಚಯಿಸಿದ ಹೆಮ್ಮೆ ಚಿತ್ತಾರದ್ದು. ನಮ್ಮ ಉದ್ದೇಶ ಕನ್ನಡವನ್ನು ಚಿತ್ತಾರದ ಮೂಲಕ ಹೆಚ್ಚು ಪಸರಿಸುವುದು. ಕಳೆದ ದಶಕದಿಂದ ಚಿತ್ತಾರದ ಈ ಕೈಂಕರ್ಯದಲ್ಲಿ ಯಶಸ್ವಿಯಾಗಿದೆ. ನಮ್ಮ ದಶಕದ ಸಂಭ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಚಿತ್ತಾರ ಈ ಸಂದರ್ಭದಲ್ಲಿ ನೆನೆಯುತ್ತದೆ.

More from Filmibeat

English summary
Karnataka's no number 1 entertainment monthly magazine chittara have celebrating 10th year anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X