»   » ರಜತ ಪರದೆಗೆ ಹಾರಿ ಬಂತು ‘ಚಿಟ್ಟೆ’

ರಜತ ಪರದೆಗೆ ಹಾರಿ ಬಂತು ‘ಚಿಟ್ಟೆ’

Posted By: Staff
Subscribe to Filmibeat Kannada

ಈ ಶುಕ್ರವಾರದ ಕೊಡುಗೆ 'ಚಿಟ್ಟೆ". ಈ ಸಿನಿಮಾದ ಪತ್ರಿಕಾ ಜಾಹೀರಾತಿನಲ್ಲಿ ಹಲವಾರು ಬಣ್ಣ ಬಣ್ಣದ ಚಿಟ್ಟೆಗಳಿವೆ. ಮೇಲೊಂದು ಶೀರ್ಷಿಕೆಯೂ ಇದೆ. ಅದು ಏನು ಹೇಳುತ್ತದೆ ಗೊತ್ತೆ. "A Story of Young Lovers That all Elders must see...! ಅಂದರೆ ಇದು ಮತ್ತೊಂದು ಕನ್ನಡದ ಪ್ರೇಮಕಾವ್ಯ ಎಂದು ಮತ್ತೆ ಹೇಳುವ ಅಗತ್ಯ ಇಲ್ಲ.

ದಿನೇಶ್‌ಬಾಬು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಮೂಡಿ ಬಂದಿರುವ 'ಚಿಟ್ಟೆ"ಯ ನಿರ್ಮಾಪಕರು ಸಿ. ಪಾಂಡು. ನವೆಂಬರ್‌ 23ರಿಂದ ರಜತ ಪರದೆಯ ಮೇಲೆ ಹಾರಾಡಲು ಬಂದಿರುವ ಈ ಚಿಟ್ಟೆ ಎಷ್ಟು ಎತ್ತರ ಹಾರುತ್ತದೆ ಎಂಬುದನ್ನು ಕಾದು ನೋಡಬೇಕು.ರಾಮೋಜಿರಾವ್‌ ನಿರ್ಮಾಣದ 'ಚಿತ್ರ" ಯಶಸ್ಸಿನ ನಂತರ ಕನ್ನಡ ಚಿತ್ರರಂಗದಲ್ಲಿ ಹದಿಹರೆಯದ ಟ್ರೆಂಡ್‌ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ 'ಚಿಟ್ಟೆ " ಬಾನೆತ್ತರಕ್ಕೆ ಹಾರುತ್ತದೆ ಎಂಬುದು ನಿರ್ದೇಶಕ- ನಿರ್ಮಾಪಕರ ಲೆಕ್ಕಾಚಾರ.

ಚನ್ನಂ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಪಿ.ಕೆ.ಎಚ್‌. ದಾಸ್‌ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ವಿ. ಮನೋಹರ್‌ ಗೀತೆ ಮತ್ತು ಸಂಗೀತ ಒದಗಿಸಿದ್ದಾರೆ. ಸಂಪತ್‌ ನೃತ್ಯ ಸಂಯೋಜನೆ, ಕೆಂಪರಾಜ ಸಂಕಲನ ಚಿತ್ರಕ್ಕಿದೆ. ಈ ಚಿತ್ರದ ನಾಯಕ 'ಚಿತ್ರ" ಖ್ಯಾತಿಯ ಅನಿರುದ್ಧ್‌. 'ಚಿಟ್ಟೆ"ಯಲ್ಲಿ ಅನಿರುದ್ಧ್‌ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮಿದ್ದಾರೆ.

'ಮುನ್ನುಡಿ" ಚಿತ್ರದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ, ಛಾಯಾಸಿಂಗ್‌ ಈ ಚಿತ್ರದ ಮೂಲಕ ನಾಯಕಿಯ ಪಟ್ಟಕ್ಕೇರಿದ್ದಾರೆ. ಈ ಯುವ ಜೋಡಿಯಾಂದಿಗೆ ಅನುಭವಿಗಳಾದ ಅನಂತ್‌ನಾಗ್‌ ಚಿತ್ರಾಶಣೈ, ವನಿತಾವಾಸು, ವಿಜಯಲಕ್ಷ್ಮೀಸಿಂಗ್‌, ಅವಿನಾಶ್‌ ಧಮಿನಿ, ಉಮೇಶ್‌ ಇದ್ದಾರೆ.

ಪ್ರೀತಿಸುವ ಹೃದಯಗಳಿಗೆ ಒಂದು ಅನುಭವ ನೀಡುವ ಈ ಚಿತ್ರ ಬೆಂಗಳೂರಿನ ನರ್ತಕಿ, ಉಮಾ, ಪಟ್ಟಣ್ಣ, ಗೋವರ್ಧನ್‌, ಸಂಪಿಗೆ, ಪ್ರಸನ್ನ, ಕಾವೇರಿ, ಅಜಂತ, ಮೈಸೂರಿನ ಗಾಯತ್ರಿ, ಪ್ರಭಾ, ಮಂಡ್ಯದ ಮಹಾವೀರ್‌, ಹಾಸನದ ಶ್ರೀಗುರು, ಮಂಗಳೂರಿನ ಜ್ಯೋತಿ, ಶಿವಮೊಗ್ಗದ ಮಲ್ಲಿಕಾರ್ಜುನ, ಚಿಕ್ಕಮಗಳೂರಿನ ನಾಗಲಕ್ಷ್ಮೀ, ದಾವಣಗೆರೆಯ ಪದ್ಮಾಂಜಲಿ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

English summary
A Story of Young Lovers This Fridays gift for kannada film lovers

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada