For Quick Alerts
  ALLOW NOTIFICATIONS  
  For Daily Alerts

  'ಗಿರ್ಮಿಟ್' ಹುಡುಗರ ಆಸೆ ಈಡೇರಿಸ್ತಾರಾ ಡಿ-ಬಾಸ್ ಮತ್ತು ಯಶ್?

  |

  ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಆಕ್ಷನ್ ಕಟ್ ಹೇಳಿರುವ ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ 'ಗಿರ್ಮಿಟ್' ಶುಕ್ರವಾರ ಬಿಡುಗಡೆಯಾಗಿದೆ. ಇದು ಕಂಪ್ಲೀಟ್ ಮಕ್ಕಳ ಸಿನಿಮಾ ಆಗಿದ್ದು, ಸ್ಟಾರ್ ಕಲಾವಿದರು ಮಕ್ಕಳಿಗೆ ವಾಯ್ಸ್ ಡಬ್ ಮಾಡಿರುವುದು ಈ ಚಿತ್ರದ ವಿಶೇಷ.

  ಪ್ರಮುಖ ಪಾತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ವಾಯ್ಸ್ ಡಬ್ ಮಾಡಿದ್ದರು. ಜೊತೆಗೆ ಹಿರಿಯ ನಟಿ ತಾರಾ, ಅಚ್ಯುತ್ ಕುಮಾರ್, ರಂಗಾಯಣ ರಘು, ಸಾಧುಕೋಕಿಲಾ ಅಂತವರು ಧ್ವನಿ ನೀಡಿದ್ದಾರೆ.

  ರಾಕಿಂಗ್ ಸ್ಟಾರ್ ಗೆ ಆವಾಜ್ ‍‍‍‍‍ಹಾಕಿದ ರಾಧಿಕಾ ಪಂಡಿತ್ರಾಕಿಂಗ್ ಸ್ಟಾರ್ ಗೆ ಆವಾಜ್ ‍‍‍‍‍ಹಾಕಿದ ರಾಧಿಕಾ ಪಂಡಿತ್

  ಇಂತಹ ಸಿನಿಮಾ ಯಶ್, ರಾಧಿಕಾ ಪಂಡಿತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸಾಥ್ ನೀಡಿದ್ದರು. ಇದೀಗ, ಸಿನಿಮಾ ರಿಲೀಸ್ ಆಗಿದೆ. ಸಿನಿಮಾದ ನಟಿಸಿರುವ ಬಹುತೇಕ ಬಾಲನಟರು ದರ್ಶನ್ ಮತ್ತು ಯಶ್ ಕುರಿತು ಆಸೆಯೊಂದನ್ನ ಹೇಳಿಕೊಂಡಿದ್ದಾರೆ. ಏನದು? ಮುಂದೆ ಓದಿ...

  ಡಿ ಬಾಸ್ ಜೊತೆ ಸಿನಿಮಾ ನೋಡ್ಬೇಕಂತೆ

  ಡಿ ಬಾಸ್ ಜೊತೆ ಸಿನಿಮಾ ನೋಡ್ಬೇಕಂತೆ

  ಗಿರ್ಮಿಟ್ ಚಿತ್ರದಲ್ಲಿ ನಟಿಸಿರುವ ಕೆಲವು ಬಾಲನಟರು ದರ್ಶನ್ ಅವರ ಅಭಿಮಾನಿಗಳು. ಹಾಗಾಗಿ, ಗಿರ್ಮಿಟ್ ಚಿತ್ರವನ್ನ ದರ್ಶನ್ ಅವರ ಜೊತೆ ನೋಡಬೇಕು ಎಂಬ ಆಸೆ ಹೊರಹಾಕಿದ್ದಾರೆ. ಮಕ್ಕಳ ಕಮರ್ಷಿಯಲ್ ಚಿತ್ರಕ್ಕೆ ಹಲವು ಸ್ಟಾರ್ ನಟರು ಸಾಥ್ ನೀಡಿದ್ದಾರೆ. ಮಕ್ಕಳ ಈ ಆಸೆಯನ್ನ ಡಿ ಬಾಸ್ ಈಡೇರಿಸ್ತಾರಾ?

  ಯಶ್-ರಾಧಿಕಾ ಜೊತೆ ಸಿನಿಮಾ ನೋಡ್ಬೇಕು

  ಯಶ್-ರಾಧಿಕಾ ಜೊತೆ ಸಿನಿಮಾ ನೋಡ್ಬೇಕು

  ಚಿತ್ರದ ಹೀರೋ ಮತ್ತು ಹೀರೋಯಿನ್ ಪಾತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ವಾಯ್ಸ್ ಕೊಟ್ಟಿದ್ದಾರೆ. ಈ ಮಕ್ಕಳ ಪೈಕಿ ಕೆಲವು ಯಶ್ ಮತ್ತು ರಾಧಿಕಾ ಪಂಡಿತ್ ಜೊತೆ ಕೂತು ಈ ಸಿನಿಮಾ ನೋಡ್ಬೇಕು ಎಂಬ ಆಸೆ ಹೇಳಿಕೊಂಡಿದ್ದಾರೆ. ಈ ಆಸೆಯನ್ನ ರಾಕಿಂಗ್ ಜೋಡಿ ಈಡೇರಿಸುತ್ತಾ?

  ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?

  ಇಂತಹ ಸಿನಿಮಾಗಳು ಹೆಚ್ಚು ಬರಲಿ

  ಇಂತಹ ಸಿನಿಮಾಗಳು ಹೆಚ್ಚು ಬರಲಿ

  ''ಗಿರ್ಮಿಟ್ ಚಿತ್ರದ ಟ್ರೈಲರ್ ನೋಡಿ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದರು. ಈ ಚಿತ್ರಕ್ಕೆ ನನ್ನ ಕೇಳಿದ್ರು ವಾಯ್ಸ್ ಕೊಡ್ತಿದ್ದೆ ಎಂದು ಸೆಂಚುರಿಸ್ಟಾರ್ ಹೇಳಿದ್ದರು. ತೆಲುಗು ಮತ್ತು ತಮಿಳಿನಲ್ಲಿ ಇಂತಹ ಪ್ರಯತ್ನಗಳು ಬರುತ್ತೆ. ಕನ್ನಡದಲ್ಲಿ ಹೆಚ್ಚು ಬರಲಿ'' ಎಂದು ಶಿವಣ್ಣ ಹೇಳಿದ್ದರು.

  ಗಿರ್ಮಿಟ್ ಸಿನಿಮಾ ಬಗ್ಗೆ

  ಗಿರ್ಮಿಟ್ ಸಿನಿಮಾ ಬಗ್ಗೆ

  ರವಿಬಸ್ರೂರು ನಿರ್ದೇಶನದ ಈ ಚಿತ್ರದಲ್ಲಿ ಸ್ಲಾಗಾ ಸಾಲಿಗ್ರಾಮ, ಅಶ್ಲೇಶ್ ರಾಜ್, ಆರಾಧ್ಯ ಶೆಟ್ಟಿ ಸೇರಿದಂತೆ ಹಲವು ಮಕ್ಕಳು ನಟಿಸಿದ್ದಾರೆ. ಎನ್.ಎಸ್ ರಾಜಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  irmit movie children's want to see movie with their favorite actors like darshan and yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X