For Quick Alerts
  ALLOW NOTIFICATIONS  
  For Daily Alerts

  'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ತಂಡ ಸೇರಿಕೊಂಡ ಹರ್ಷ

  By Pavithra
  |

  ಕಿಚ್ಚ ಸುದೀಪ್ ಅಭಿನಯ ಮಾಡುತ್ತಿರುವ ಪೈಲ್ವಾನ್ ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಇದೇ ಖುಷಿಯಲ್ಲಿ ಸುದೀಪ್ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಟೈಟಲ್ ನಲ್ಲಿ ಚಿತ್ರತಂಡದ ಜೊತೆಯಲ್ಲಿ ಪೈಲ್ವಾನ್ ಪೋಸ್ ಕೊಟ್ಟಿರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

  ಸದ್ಯ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಟೀಂ ಗೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಎ ಹರ್ಷ ಸೇರಿಕೊಂಡಿದ್ದಾರೆ. ಕಿಚ್ಚ ಸುದೀಪ್ ಚೆನೈನಿಂದ ಬೆಂಗಳೂರಿಗೆ ಬಂದ ಅಭಿನಯ ಚಕ್ರವರ್ತಿ ಮತ್ತೆ ಜಿಮ್ ನಲ್ಲಿ ವರ್ಕ್ ಔಟ್ ಶುರು ಮಾಡಿದ್ದಾರೆ.

  ಚಿತ್ರೀಕರಣ ಮುಗಿಸಿದ 'ಅಂಬಿ ನಿಂಗ್ ವಯಸ್ಸಾಯ್ತೋ' ತಂಡಚಿತ್ರೀಕರಣ ಮುಗಿಸಿದ 'ಅಂಬಿ ನಿಂಗ್ ವಯಸ್ಸಾಯ್ತೋ' ತಂಡ

  ಇಷ್ಟು ದಿನಗಳ ಕಾಲ ಒಬ್ಬರೇ ವರ್ಕ್ ಔಟ್ ಮಾಡುತ್ತಿದ್ದ ಕಿಚ್ಚನ ಜೊತೆಯಲ್ಲಿ ಈಗ ಇಬ್ಬರು ನೃತ್ಯ ನಿರ್ದೇಶಕರು ಸೇರಿಕೊಂಡಿದ್ದಾರೆ, ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ಎ ಹರ್ಷ ಹಾಗೂ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಸುದೀಪ್ ಜೊತೆ ದೇಹವನ್ನು ದಂಡಿಸಲು ಶುರು ಮಾಡಿದ್ದಾರೆ.

  ಪೈಲ್ವಾನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಯಾಗಿ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಅಭಿನಯಿಸುತ್ತಿದ್ದಾರೆ. ಆಕಾಂಕ್ಷ ಸಿಂಗ್ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಬ್ಬುಲಿ ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡುವುದರ ಜೊತೆಯಲ್ಲಿ ನಿರ್ಮಾಣವನ್ನು ಮಾಡುತ್ತಿದ್ದಾರೆ.

  English summary
  Choreographer A Harsha and Imran Sardhariya are working out in gym with actor Kiccha Sudeep. Three people have worked out and uploaded the photo on Pailwan Poses in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X