ವಿದೇಶದಲ್ಲಿ ಮೋಡಿ ಮಾಡುತ್ತಿದೆ ಕನ್ನಡದ 'ಚೌಕ'
'ಕನ್ನಡದ ಕುಳ್ಳ' ದ್ವಾರಕೀಶ್ ರವರ ನಿರ್ಮಾಣದ 50ನೇ ಚಿತ್ರ 'ಚೌಕ' ಯು.ಎಸ್.ಎ ಹಾಗೂ ಕೆನಡಾದಲ್ಲಿ ಬಿಡುಗಡೆ ಆಗಿದ್ದು, ವಿದೇಶಗಳಲ್ಲಿ ಮೋಡಿ ಮಾಡುತ್ತಿದೆ.
ಕಸ್ತೂರಿ ಮೀಡಿಯಾ ಹಾಗೂ ಡ್ರೀಮ್ಸ್ ಮೀಡಿಯಾ ಯು.ಎಸ್.ಎ ಹಾಗೂ ಕೆನಡಾದಲ್ಲಿ 'ಚೌಕ' ಚಿತ್ರವನ್ನ ರಿಲೀಸ್ ಮಾಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.[ವಿದೇಶಗಳಲ್ಲಿ ಮಿನುಗಲಿದೆ ಕನ್ನಡದ 'ಚೌಕ' ಚಿತ್ರ]

ಮಾರ್ಚ್ 17, 18 ಮತ್ತು 19 ರಂದು ಅಮೆರಿಕಾದ ಚಿತ್ರಮಂದಿರಗಳಲ್ಲಿ ಚೌಕ ಸಿನಿಮಾ ಪ್ರದರ್ಶನವಾಗಲಿದ್ದು, ಶನಿವಾರ ಮಧ್ಯಾಹ್ನ 2.00ಕ್ಕೆ ಹಾಗೂ ಸಂಜೆ 5 ಗಂಟೆಗೆ ಮತ್ತು ಭಾನುವಾರ ಮಧ್ಯಾಹ್ನ 2.00ಕ್ಕೆ ಹಾಗೂ ಸಂಜೆ 4.45ಕ್ಕೆ 'ಚೌಕ' ಸಿನಿಮಾವನ್ನ ನೋಡಬಹುದು.[ಮೊದಲ ಮೂರು ದಿನದಲ್ಲಿ 'ಚೌಕ' ಗಳಿಸಿದ್ದೆಷ್ಟು ಗೊತ್ತಾ?]
ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ 'ಚೌಕ'. ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಗಂತ್, ದೀಪಾ ಸನ್ನಿಧಿ, ಪ್ರಿಯಾಮಣಿ, ಭಾವನಾ ಸೇರಿದಂತೆ ದೊಡ್ಡ ತಾರಾಬಳಗವಿರುವ 'ಚೌಕ' ಚಿತ್ರಕ್ಕೆ ಕರ್ನಾಟಕದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.[ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ']
ಹೀಗೆ, ಕರ್ನಾಟಕದಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದ್ದ 'ಚೌಕ' ಈಗ ದೂರದ ಯು.ಎಸ್.ಎ ಹಾಗೂ ಕೆನಡಾದಲ್ಲೂ ಸೌಂಡ್ ಮಾಡುತ್ತಿದೆ.


Click it and Unblock the Notifications











