Christmas 2025: ಕನ್ನಡ ತಾರೆಯರ ಮನೆ ಮನಗಳಲ್ಲಿ ಕ್ರಿಸ್‌ಮಸ್ ಸಡಗರ ಜೋರು

ದೇಶ ವಿದೇಶಗಳಲ್ಲಿ ಕ್ರಿಸ್‌ಮಸ್ ಸಡಗರ ಜೋರಾಗಿದೆ. ಕನ್ನಡದ ಕೆಲ ಸಿನಿಮಾ ತಾರೆಯರ ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ತುಂಬಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹಬ್ಬದ ಶುಭಾಶಯ ಕೋರಿದ್ದಾರೆ. ಮತ್ತೆ ಕೆಲವರು ಹಬ್ಬ ಆಚರಿಸಿ ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್‌ಗಳು ಹರಿದಾಡುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಕ್ರಿಸ್‌ಮಸ್ ಸಡಗರ ಕೂಡ ಯಶ್ ಮನೆಯಲ್ಲಿ ಜೋರಾಗಿದೆ. ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ರಾಧಿಕಾ ಹಬ್ಬ ಆಚರಿಸಿದ್ದು "ಟ್ರೀ ಅಲಂಕಾರ, ಮ್ಯಾಚಿಂಗ್ ಕಾಸ್ಟ್ಯೂಮ್, ಹಾಟ್ ಚಾಕೊಲೇಟ್. ಡ್ಯಾಡ್(ಯಶ್) ಕ್ಲಾಸ್‌ಗಾಗಿ ಮಕ್ಕಳು ಕಾಯುತ್ತಿದ್ದಾರೆ" ಎಂದು ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ.

Christmas Cheer Lights Up Kannada Film Stars Homes Festive Celebrations Go Viral

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸಿ ಮನೆಮಾತಾದ ನಟಿ ಮೇಘಾ ಶೆಟ್ಟಿ ಕೂಡ ಪ್ರತಿವರ್ಷ ಮನೆಯಲ್ಲಿ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಿಸುತ್ತಾ ಬರ್ತಿದ್ದಾರೆ. ಈ ಬಾರಿ ಕೂಡ ಹಬ್ಬ ಆಚರಿಸಿ ಪೋಸ್ಟ್ ಮಾಡಿದ್ದಾರೆ. ಮೈಗೆ ಬಿಗಿಅಪ್ಪಿದಂತ ಕೆಂಪು ಬಣ್ಣದ ಬಾಡಿಕಾನ್ ಗೌನ್ ಧರಿಸಿ ಮೇಘಾ ಮಿಂಚಿದ್ದಾರೆ. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ನಟ ಸುಂದರ್ ರಾಜ್ ಅಯ್ಯಂಗಾರ್.. ತಾಯಿ ರೋಮನ್ ಕ್ಯಾಥೋಲಿಕ್ (ಕ್ರಿಶ್ಚಿಯನ್). ಹಾಗಾಗಿ ಚಿಕ್ಕಂದಿನಿಂದ ಎರಡೂ ಧರ್ಮಗಳನ್ನು ನಟಿ ಮೇಘನಾ ರಾಜ್ ಪಾಲಿಸುತ್ತಾ ಬಂದಿದ್ದಾರೆ. ಮೇಘನಾ ಮನೆಯಲ್ಲಿ ಕ್ರಿಸ್‌ಮಸ್ ಸಂಭ್ರಮ ಪ್ರತಿವರ್ಷದಂತೆ ಈ ವರ್ಷವೂ ಜೋರಾಗಿದೆ. ಮಗನ ಜೊತೆ ಚರ್ಚ್‌ಗೆ ಹೋಗಿ ಬಂದಿರುವುದು, ಕ್ರಿಸ್‌ಮಸ್ ಗಿಫ್ಟ್‌ಗಳ ಫೋಟೊವನ್ನು ಹಂಚಿಕೊಂಡಿದ್ದಾರೆ.

'ಕಾಂತಾರ'-1 ಸಿನಿಮಾ ಬೆಡಗಿ ರುಕ್ಮಿಣಿ ವಸಂತ್ ಕೂಡ ಕ್ರಿಸ್‌ಮಸ್ ಸಂಭ್ರಮದಲ್ಲಿದ್ದಾರೆ. ಹಬ್ಬದ ಶುಭಾಶಯ ಕೋರಿದ್ದಾರೆ. 'ಭಾಗ್ಯಲಕ್ಷ್ಮಿ' ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಮಗಳು ವಿಯಾನಾ ಜೊತೆ ಹಬ್ಬ ಆಚರಿಸಿ ಖುಷಿಪಟ್ಟಿದ್ದಾರೆ.

ಕಳೆದ ವರ್ಷವಷ್ಟೆ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೊ ಮದುವೆ ಆಗಿದ್ದರು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯಗಳಂತೆ ಮದುವೆ ನೆರವೇರಿತ್ತು. ಅಪ್ಪಟ ಕ್ಯಾಥೊಲಿಕ್ ಕ್ರಿಶ್ಚಿಯನ್ ಹುಡುಗಿ ಸೋನಲ್. ಹಬ್ಬದ ದಿನ ಪತಿಯ ಜೊತೆ ಚರ್ಚ್‌ಗೆ ಭೇಟಿ ನೀಡಿದ್ದಾರೆ. ಎಲ್ಲರಿಗೂ ಹಬ್ಬದ ಶುಭ ಹಾರೈಸಿದ್ದಾರೆ.

ನಟಿ ಮೇಘನಾ ಗಾಂವ್ಕರ್ ಮನೆಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಸಾಮಾನ್ಯವಾಗಿ ರೆಡ್ ಥೀಮ್‌ನಲ್ಲಿ ಎಲ್ಲರೂ ಹಬ್ಬದ ಆಚರಣೆ ಇರುತ್ತದೆ. ಆದರೆ ಈ ಬಾರಿ ಮೇಘನಾ ಮನೆಯಲ್ಲಿ ಎಲ್ಲವೂ ವೈಟ್‌ ಥೀಮ್‌ನಲ್ಲಿದೆ. ಕ್ರಿಸ್‌ಮಸ್ ಟ್ರೀ ಕೂಡ ವೈಟ್ ಕಲರ್‌ನಲ್ಲೇ ಸಿಂಗರಿಸಿದ್ದಾರೆ. ವೈಟ್ ಟೀ-ಶರ್ಟ್ ಹಾಗೂ ನೀಲಿ ಬಣ್ಣದ ಡೆನಿಮ್ ತೊಟ್ಟು ಮೇಘನಾ ಮಿಂಚಿದ್ದಾರೆ.

More from Filmibeat

Read more about: christmas sandalwood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X