ಚುಟು ಚುಟು ದಾಖಲೆ: 100 ಮಿಲಿಯನ್ ಗಡಿ ದಾಟಿದ ಮೊದಲ ಕನ್ನಡ ಹಾಡು
Recommended Video
ಯೂ ಟ್ಯೂಬ್ ನಲ್ಲಿ ಕನ್ನಡ ಸಿನಿಮಾದ ಹಾಡೊಂದು 100 ಮಿಲಿಯನ್ ಗಡಿ ದಾಟಿದೆ. 'ಚುಟು ಚುಟು..' 100 ಮಿಲಿಯನ್ ದಾಟಿದ ಕನ್ನಡದ ಮೊದಲ ಹಾಡು ಎನ್ನುವ ಹೆಗ್ಗಾಳಿಕೆಗೆ ಕಾರಣವಾಗಿದೆ.
'ಚುಟು ಚುಟು..' 'ರಾಂಬೋ 2' ಸಿನಿಮಾದ ಹಾಡು. ಅರ್ಜುನ್ ಜನ್ಯ ಹಾಡಿಗೆ ಸಂಗೀತ ನೀಡಿದ್ದಾರೆ. ಅವರ ಕೆರಿಯರ್ ನಲ್ಲಿ ಈ ಹಾಡು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ. ಮಾರ್ಚ್ 21, 2018 ರಲ್ಲಿ ಈ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು.
ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗುವ ಹಾಡು ಇದಾಗಿದೆ. ಜಾನಪದ ಸೊಗಡು ಹಾಡಿನಲ್ಲಿದೆ. ಉತ್ತರ ಕರ್ನಾಟಕ ಸ್ಟೈಲ್ ನಲ್ಲಿ ಹಾಡು ಇದೆ. ಎಲ್ಲರನ್ನು ಕುಣಿಸುವ ಹಾಡು ಇದಾಗಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಹಾಡಿನಲ್ಲಿ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದಾರೆ.

'ಚುಟು ಚುಟು..' ಹಾಡಿನ ಹೈಲೈಟ್ ಗಾಯಕರ ಧ್ವನಿ. ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್ ಸೊಗಸಾಗಿ ಹಾಡಿದ್ದಾರೆ. ಶಿವು ಬೇರ್ಗಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅನಿಲ್ ಕುಮಾರ್ ಸಿನಿಮಾದ ನಿರ್ದೇಶನ ಮಾಡಿದ್ದರು.
'ಚುಟು ಚುಟು..' ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ. ಸೌತ್ ಇಂಡಿಯಾದ ಜನಪ್ರಿಯ ಹಾಡುಗಳ ಪೈಕಿ ಈ ಹಾಡು ಪ್ರಮುಖವಾಗಿದೆ. ಈ ಹಾಡಿನ ನಂತರ 'ಬೊಂಬೆ ಹೇಳುತೈತೆ..', 'ಬೆಳಗೆದ್ದು ಯಾರು ಮುಖವ..' ಹಾಡುಗಳು ನೂರರ ಗಡಿ ದಾಟುವ ಹಾದಿಯಲ್ಲಿವೆ.


Click it and Unblock the Notifications











