'ಕಿರಿಕ್ ಪಾರ್ಟಿ' ಹಾಡಿನ ದಾಖಲೆ ಮುರಿದ 'ಚುಟು ಚುಟು'
Recommended Video

ಕನ್ನಡದಲ್ಲಿ ಇದುವರೆಗೂ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿದ್ದ ಹಾಡು ಕಿರಿಕ್ ಪಾರ್ಟಿ ಚಿತ್ರದ 'ಬೆಳಗೆದ್ದು ಯಾವ ಮುಖವಾ ನಾನು ನೋಡಲಿ......'
ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್ ಲೌಡ್ ಆಗಿರುವ ಈ ಹಾಡು ಇಲ್ಲಿಯವರೆಗೂ 75ಗೂ ಮಿಲಿಯನ್ ಅಧಿಕ ವೀಕ್ಷಣೆ ಪಡೆದಿತ್ತು. ಸ್ಯಾಂಡಲ್ ವುಡ್ ಇಂಡಸ್ಟ್ರಿ ಮಟ್ಟಿಗೆ ಇದು ಹಾಡು ಮೊದಲನೇ ಸ್ಥಾನದಲ್ಲಿತ್ತು.
ಇದೀಗ, ಈ ಹಾಡಿನ ದಾಖಲೆಯನ್ನ ಬ್ರೇಕ್ ಮಾಡಿದೆ ಶರಣ್ ಚಿತ್ರದ ಹಾಡು. Rambo 2 ಚಿತ್ರದ 'ಚುಟು ಚುಟು' ಹಾಡು ಈಗ ಕಿರಿಕ್ ಪಾರ್ಟಿ ಹಾಡಿನ ವೀಕ್ಷಣೆ ಸಂಖ್ಯೆಯನ್ನ ಬ್ರೇಕ್ ಮಾಡಿದೆ.

ಹೌದು, ಬೆಳಗೆದ್ದು ಹಾಡು 75,405,227 ಮಿಲಿಯನ್ ವೀಕ್ಷಣ ಕಂಡಿದೆ. ಈಗ 'ಚುಟು ಚುಟು' ಹಾಡು 75.4 (75,431,190) ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ, ಮೊಲದ ಸ್ಥಾನ ಅಲಂಕರಿಸಿದೆ. ಮಾರ್ಚ್ 21, 2018 ರಂದು ಈ ಹಾಡು ಅಪ್ ಲೌಡ್ ಆಗಿದೆ.

ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡುಗಳು ಪೈಕಿ ಚುಟು ಚುಟು ಮೊದಲ ಸ್ಥಾನದಲ್ಲಿದ್ರೆ, ಎರಡನೇ ಸ್ಥಾನಕ್ಕೆ ಕಿರಿಕ್ ಪಾರ್ಟಿಯ ಬೆಳಗೆದ್ದು ಹಾಡು ಜಾರಿದೆ. ಇನ್ನೊಂದೆಡೆ ಕೆಜಿಎಫ್ ಚಿತ್ರದ ಟ್ರೈಲರ್ ದಾಖಲೆಯನ್ನ ಯಜಮಾನ ಸಿನಿಮಾದ ಟ್ರೈಲರ್ ಹಿಂದಿಕ್ಕುವ ಮೂಲಕ ಇತಿಹಾಸ ಸೃಷ್ಟಿಸಿದೆ.


Click it and Unblock the Notifications