ಚೂ ಮಂತರ್ ; ಬಿಗ್ ಬಾಸ್ ಜಾಹ್ನವಿ ಮಂತ್ರದ ಎಫೆಕ್ಟ್, ಪೂರನ್‌ ಔಟ್ - ಚಿನ್ನಸ್ವಾಮಿಯ ಮ್ಯಾಜಿಕ್ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರ ಪಾಲಿಗೆ ಕೇವಲ ತಂಡ ಮಾತ್ರವಲ್ಲ. ಈ ತಂಡದ ಜೊತೆ ಕನ್ನಡಿಗರಿಗೆ ಭಾವನಾತ್ಮಕವಾದ ಸಂಬಂಧ ಇದೆ. ಇದು ನಮ್ಮ ನಾಡಿನ ತಂಡ .. ನಮ್ಮೂರಿನ ತಂಡ .. ನಮ್ಮದೇ ತಂಡ ಎಂಬ ಭಾವನೆ ಜನರಲ್ಲಿ ಗಾಢವಾಗಿ ಬೇರೂರಿದೆ. ಸೋಲಲಿ .. ಗೆಲ್ಲಲಿ .. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಯಾವತ್ತು ಕಡಿಮೆಯಾಗಲಿಲ್ಲ. ಕಡಿಮೆ ಆಗಲು ಸಾಧ್ಯವೂ ಇಲ್ಲ.

ಬದಲಿಗೆ ಈ ಸೋಲುಗಳಿಂದ ತಂಡದ ಜೊತೆಗಿನ ಬಾಂಧವ್ಯ ಇನ್ನೂ ಗಟ್ಟಿಯಾಯ್ತು. ಜನರಿಗೆ ತಮ್ಮ ಮೇಲಿರುವ ಅಭಿಮಾನ ಕಂಡು ಹೇಗಾದರೂ ಮಾಡಿ ಕಪ್ ಗೆಲ್ಲಲೇಬೇಕೆಂಬ ಕಿಚ್ಚು ನಮ್ಮ ಆರ್‌ಸಿಬಿ ತಂಡದ ಆಟಗಾರರಲ್ಲಿ ಹೆಚ್ಚಾಯ್ತು.

Chuu-Mantar BBK Jahnavi s Magic Spell Viral as Nicholas Pooran Falls Next Ball

ಇನ್ನು ಕಳೆದ 18 ವರ್ಷಗಳಲ್ಲಿ ''ಈ ಸಲ ಕಪ್ ನಮ್ದೇ'' ಎಂಬ ಕನ್ನಡಿಗರ ಘೋಷವಾಕ್ಯ ಕೇಳಿ ಕುಹುಕವಾಡಿದವರು ಅದೆಷ್ಟೋ. ಆಡಿಕೊಂಡವರ ಬಾಯಿಗಳಿಗೆಲ್ಲ ಕಳೆದ ವರ್ಷ ಆರ್‌ಸಿಬಿ ತಂಡ ಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಬೀಗ ಜಡಿದಿದೆ.

18 ವರ್ಷಗಳ ನಂತರ ಐಪಿಎಲ್‌ನಲ್ಲಿ ಹೊಸ ಚರಿತ್ರೆಯನ್ನು ಬರೆದಿದೆ. ಈ ವರ್ಷ ಕೂಡ ಆರ್‌ಸಿಬಿಯ ನಾಗಾಲೋಟ ಮುಂದುವರೆದಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಬೆಂಗಳೂರು ಗೆದ್ದು ಬೀಗಿದೆ.

ಹೀಗೆ ಗೆದ್ದ ಪಂದ್ಯದಲ್ಲಿ ಲಕ್ನೋ ವಿರುದ್ದದ ಪಂದ್ಯವೂ ಒಂದು. ಈ ಗೆಲುವಿಗೆ ತಂಡದ ಪರಿಶ್ರಮ ಮಾತ್ರ ಕಾರಣವಲ್ಲ. ಬದಲಿಗೆ ''ಬಿಗ್ ಬಾಸ್'' ಜಾಹ್ನವಿ ಅವರ ಮಂತ್ರ ಕೂಡ ಕಾರಣ ಎನ್ನುವುದೇ ಸದ್ಯದ ಚರ್ಚಿತ ವಿಷಯ.

ಹೌದು. ಮಂತ್ರಕ್ಕೆ‌ ಮಾವಿನ ಕಾಯಿ ಉದುರುವುದಿಲ್ಲ ಎನ್ನುವ ಮಾತು ನೀವು ಕೇಳಿರಬಹುದು. ಆದರೆ ಜಾಹ್ನವಿಯ ಮಂತ್ರಕ್ಕೆ‌ ಮಾತ್ರ ನಿನ್ನೆ ( ಏಪ್ರಿಲ್ 15ವೇಗಿ ಜೋಶ್ ಹ್ಯಾಜಲ್‌ವುಡ್ ಎಸೆದ ಚೆಂಡಿಗೆ ನಿಕೋಲಸ್ ಪೂರನ್ ಅವರ ವಿಕೆಟ್ ಬಿದ್ದಿದೆ. ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಹೋಯ್ತು ಎಂಬಂತೆ ಜಾಹ್ನವಿ ಮಂತ್ರ ಪಠಿಸಿದ ಬೆನ್ನಲ್ಲೇ ವಿಕೆಟ್ ಬಿತ್ತಾ ಅಥವಾ ಅಷ್ಟೊಂದು ಸುಂದರವಾಗಿ ಕತ್ತರಿ ಪ್ರಯೋಗ ಮಾಡಿ ವಿಡಿಯೋವನ್ನು ಮಾಡಲಾಗಿದೆಯಾ ಗೊತ್ತಿಲ್ಲ.

chuu-mantar-bbk-jahnavi-s-magic-spell-viral-as-nicholas-pooran-falls-next-ball

ಆದರೆ ದೃಶ್ಯಾವಳಿಗಳು ಮಾತ್ರ ಒಂದಕ್ಕೊಂದು ತುಂಬಾ ಚೆನ್ನಾಗಿ ಸಿಂಕ್ ಆಗಿವೆ. ಸದ್ಯ ಈ ಫನ್ನಿ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಒಂದಕ್ಕಿಂತ ಒಂದು ಚೆಂದದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಜಾಹ್ನವಿ ಮಂತ್ರ ಪಠಿಸಿದ ತಕ್ಷಣವೇ ವಿಕೆಟ್ ಬಿದ್ದಿರುವ ಹಿನ್ನೆಲೆ ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿದ್ದು, ಆ ಮಂತ್ರವನ್ನು ನಮಗೂ ದಯಮಾಡಿ ತಿಳಿಸಿ..ಕಪ್ ತರೋತನಕ ಚೂ ಮಂಥರ್ ಹಾಕ್ತಿರಿ ಓಕೆ ನಾ..ನಂಗೆ ಗೊತ್ತು ಇತ್ತು ನೀವು ಆರ್ಸಿಬಿ ಗೋಸ್ಕರ್ ಏನಾದ್ರು ಮಾಡ್ತೀರಾ ಅಂತೆ..ಅವತ್ತೇ ಹೇಳಿದ್ದೇ ಈವಮ್ಮಾ ಕೊಳ್ಳೆಗಾಲದವರು ಅಂತಾ.. ಎಂದೆಲ್ಲಾ ಹಲವರು
ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಪಾಸಿಟಿವ್ ಇದ್ದಲ್ಲಿ ನೆಗೆಟಿವ್ ಕೂಡ ಇದ್ದೇ ಇರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಜಾಹ್ನವಿ ಅವರ ಈ ವಿಡಿಯೋಗೂ ಕೂಡ ಕಿಡಿ ಕಾರಿದ್ದಾರೆ.ಇವರಿಗೆಲ್ಲಾ ಆರ್ ಸಿ ಬಿ ತಂಡದಲ್ಲಿ ಯಾರ್ಯಾರು ಇದ್ದಾರೆ ಅಂತ ಗೊತ್ತಿಲ್ಲ ಬರಿ ಬಿಲ್ಡಪ್..ನಾವು ನಿಯತ್ತಿನಿಂದ ಗೆಲ್ಲೋರು ಈ ಕೆಲಸ ಏನಿದ್ರೂ ಮುಂಬೈ ಇಂಡಿಯನ್ಸ್ ಅವರದ್ದು, ಮ್ಯಾಚ್ ನೋಡ್ಕೊಂಡ್ ಎದ್ದು ಬಾ.. ಕಿತಾಪತಿ ಹೆಂಗ್ಸು..ಮಾಟ ಮಂತ್ರ ಮಾಡಿ ನಮ್ಮ ಮಾನ ಮರ್ಯಾದೆ ಕಳಿಬೇಡ ತಾಯಿ, ಒಳ್ಳೆ ಹೆಸರು ಪಡೆದಿರುವ ಏಕೈಕ ತಂಡ ಅಂದ್ರೆ ಅದು ನಮ್ಮ ಆರ್ ಸಿ ಬಿ, ಸುಮ್ನೆ ಮ್ಯಾಚ್ ನೋಡಿ ಬಾ ನಿನ್ನ ಕೈ ಮುಗಿತೀವಿ ತಾಯಿ.. ಎಂದೆಲ್ಲಾ ಕೆಲವರು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಇದೇ ಮಂತ್ರವನ್ನ ''ಬಿಗ್‌ ಬಾಸ್‌''ನಲ್ಲಿದ್ದಾಗ ನೀವು ಹೇಳಬೇಕಿತ್ತು, ಆಗ ಕಪ್ ಆರಾಮಾಗಿ ಗೆಲ್ಲಬಹುದಿತ್ತು ಎಂದು ಕಾಮೆಂಟ್ ಮಾಡುವ ಮೂಲಕ ಜಾಹ್ನವಿ ಅವರ ಕಾಲೆಳೆಯುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ. ಒಟ್ನಲ್ಲಿ ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 24 ಗಂಟೆಗಳಲ್ಲಿ 521,000 ಜನ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

English summary
Witchcraft or luck? Bigg Boss Jahnavi’s viral magic moment goes viral after Nicholas Pooran’s dismissal. Watch the "Chuu-Mantar" video from the RCB vs LSG match.
Read more about: jhanvi viral video ipl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X