»   » 'ಮೇಲುಕೋಟೆ ಮಂಜ' ಚಿತ್ರದಲ್ಲಿ ಟಾಪ್ ಮೋಸ್ಟ್ ನೃತ್ಯಗಾರ್ತಿಯ ಬೆಲ್ಲಿ ಡ್ಯಾನ್ಸ್

'ಮೇಲುಕೋಟೆ ಮಂಜ' ಚಿತ್ರದಲ್ಲಿ ಟಾಪ್ ಮೋಸ್ಟ್ ನೃತ್ಯಗಾರ್ತಿಯ ಬೆಲ್ಲಿ ಡ್ಯಾನ್ಸ್

Posted By:
Subscribe to Filmibeat Kannada

ನವರಸನಾಯಕ ಜಗ್ಗೇಶ್ ಅವರು ನಿರ್ದೆಶಿಸಿ, ನಟಿಸಿರುವ 'ಮೇಲುಕೋಟೆ ಮಂಜ' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ನಗುವವರಿಗೆ ಮಾತ್ರ ಎಂದು ಈಗಾಗಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಚಿತ್ರದಲ್ಲಿ ಇನ್ನೇನೆಲ್ಲಾ ವಿಶೇಷತೆ ಇರಬಹುದು ಎಂದು ಯೋಚಿಸುತ್ತಿದ್ದ ಸಿನಿ ಪ್ರಿಯರಿಗೆ ಇನ್ನೊಂದು ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ.

Cindrella belly dance in Jaggesh Starrer 'Melukote Manja' movie

ಜಗ್ಗೇಶ್ ಅವರ 'ಮೇಲುಕೋಟೆ ಮಂಜ'ನಿಗಾಗಿ ಟಾಪ್ ಮೋಸ್ಟ್ ಬೆಲ್ಲಿ ಡ್ಯಾನ್ಸರ್ ಸಿಂಡ್ರೆಲ್ಲಾ ಕುಣಿದಿದ್ದಾರೆ. ಸ್ಯಾಂಡಲ್ ವುಡ್ ಸಿನಿಮಾ ಗಳಲ್ಲಿ ಇತ್ತೀಚೆಗೆ ಹೊಸ ಹೊಸ ಡ್ಯಾನ್ಸರ್ ಗಳನ್ನು ಸೇರ್ಪಡೆ ಮಾಡುತ್ತಿರುವ ಕೆಲವು ನಿರ್ದೇಶಕರಂತೆ, ಜಗ್ಗೇಶ್ ಸಹ ತಮ್ಮ ಸಿನಿಮಾ ದಲ್ಲಿ ಈ ವಿದೇಶಿ ಡ್ಯಾನ್ಸರ್ ನಿಂದ ಹೆಜ್ಜೆ ಹಾಕಿಸಿದ್ದಾರೆ.[ನಟಿ ಐಂದ್ರಿತಾ ರೇ, 'ಮೇಲುಕೋಟೆ ಮಂಜ' ಮತ್ತು ಸಂಭಾವನೆ ಕಿರಿಕ್]

ಅಂದಹಾಗೆ ಸಿಂಡ್ರೆಲ್ಲಾ ಇತ್ತೀಚೆಗೆ ಪ್ರೈವೇಟ್ ಕಾರ್ಯಕ್ರಮವೊಂದಕ್ಕೆ ಭಾರತಕ್ಕೆ ಆಗಮಿಸಿದ್ದರಂತೆ. ಈ ವೇಳೆ ಜಗ್ಗೇಶ್ ಅವರಿಗೆ ಅವರ ಮುಂಬೈ ಸ್ನೇಹಿತರಿಂದ ಮಾಹಿತಿ ತಿಳಿದು, ಬೆಲ್ಲಿ ಡ್ಯಾನ್ಸ್ ಬೆಡಗಿಯನ್ನು ಭೇಟಿ ಮಾಡಿದ್ದರಂತೆ. ನಂತರ ಸಿನಿಮಾ ಮತ್ತು ಹಾಡಿನ ಬಗ್ಗೆ ವಿವರಣೆ ನೀಡಿದಾಗ ಸಿಂಡ್ರೆಲಾ ಬೆಲ್ಲಿ ಡ್ಯಾನ್ಸ್ ಮಾಡಲು ಒಪ್ಪಿಕೊಂಡರಂತೆ. ಚಿತ್ರದಲ್ಲಿ ಇವರ ಡ್ಯಾನ್ಸ್ ಗಾಗಿ ಜಗ್ಗೇಶ್ ಬರೋಬರಿ 18 ಲಕ್ಷ ವೆಚ್ಚ ಮಾಡಿದ್ದಾರಂತೆ.[ಈ ವಾರ ತೆರೆಗೆ ಬರಲಿರುವ 'ಮೇಲುಕೋಟೆ ಮಂಜ' ನ ಸ್ಪೆಷಾಲಿಟಿಗಳು]

 'Melukote Manja' movie

ಭರ್ಜರಿ ಮನರಂಜನೆ ಜೊತೆಗೆ 'ಮೇಲುಕೋಟೆ ಮಂಜ' ಸಿನಿಮಾ ನೋಡಲು ಹೋದವರು ಸಿಂಡ್ರೆಲಾ ಅವರ ಬೆಲ್ಲಿ ಡ್ಯಾನ್ಸ್ ಅನ್ನು ಕಣ್ತುಂಬಿಕೊಳ್ಳಬಹುದು. ಚಿತ್ರವನ್ನು ಆರ್.ಕೃಷ್ಣ ಅವರು ಕೊಂಡದ ಬೀರೇಶ್ವರ ಸ್ವಾಮಿ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ.

English summary
Jaggesh Starrer 'Melukote Manja' Movie Releasing tomorrow(February 10th). In this movie top most belli dancer Cindrella was danced a song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada