»   »  ಕನ್ನಡ ಚಿತ್ರವನ್ನು ಮರೆತ ದೀಪಿಕಾಗೆ ಸರಿಯಾಗಿ ಬುದ್ದಿ ಕಲಿಸಿದ ಸಿನಿಪ್ರಿಯರು!

ಕನ್ನಡ ಚಿತ್ರವನ್ನು ಮರೆತ ದೀಪಿಕಾಗೆ ಸರಿಯಾಗಿ ಬುದ್ದಿ ಕಲಿಸಿದ ಸಿನಿಪ್ರಿಯರು!

Posted By:
Subscribe to Filmibeat Kannada
ಕನ್ನಡ ಸಿನಿಮಾಗೆ ದೀಪಿಕಾ ಪಡುಕೋಣೆ ಅವಮಾನ | ಸಿನಿಪ್ರೇಕ್ಷಕರು ಅಸಮಾಧಾನ | Filmibeat Kannada

ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕನ್ನಡ ಚಿತ್ರವನ್ನು ನಿರ್ಲಕ್ಷ್ಯ ಮಾಡಿದ್ದರು. 'ಓಂ ಶಾಂತಿ ಓಂ' ಸಿನಿಮಾದ ಬಗ್ಗೆ ಮಾತನಾಡಿದ್ದ ದೀಪಿಕಾ ತಮ್ಮ ಮೊದಲ ಚಿತ್ರ 'ಐಶ್ವರ್ಯ' ಬಗ್ಗೆ ಬಾಯಿ ಬಿಟ್ಟಿರಲಿಲ್ಲ.

ಅಲ್ಲದೆ ''ಓಂ ಶಾಂತಿ ಓಂ' ಚಿತ್ರಕ್ಕೂ ಮೊದಲು ನಾನು ಯಾವುದೇ ಸಿನಿಮಾ ಸೆಟ್ ಗಳಿಗೆ ಹೋಗಿರಲಿಲ್ಲ. ನನಗೆ ನಟನೆ ಮಾಡಿದ ಅನುಭವವೇ ಇರಲಿಲ್ಲ'' ಎಂದು ಹೇಳಿದ್ದರು. ದೀಪಿಕಾ ಅವರ ಈ ಹೇಳಿಕೆಗೆ ಅನೇಕರು ಕೋಪಗೊಂಡಿದ್ದಾರೆ. ಜೊತೆಗೆ ಫೇಸ್ ಬುಕ್ ನಲ್ಲಿ ಸಾಕಷ್ಟು ಜನ ತಮ್ಮ ಕಾಮೆಂಟ್ ಗಳ ಮೂಲಕ ದೀಪಿಕಾಗೆ ಬುದ್ದಿ ಕಲಿಸಿದ್ದಾರೆ. ಮುಂದೆ ಓದಿ...

ನಿಮ್ಮ ಮೊದಲ ಸಿನಿಮಾ 'ಐಶ್ವರ್ಯ'

ದೀಪಿಕಾ ಸಂದರ್ಶನದ ವಿಡಿಯೋ ನೋಡಿ ''ನಿಮ್ಮ ಮೊದಲ ಸಿನಿಮಾ 'ಐಶ್ವರ್ಯ'' ಎಂದು ಫೇಸ್ ಬುಕ್ ನಲ್ಲಿ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಕನ್ನಡೇತರರೂ ಕೂಡ ಇದೇ ರೀತಿ ಕಾಮೆಂಟ್ ಮಾಡಿದ್ದಾರೆ.

ಇದು ಸುಳ್ಳು

ಅನೇಕರು ದೀಪಿಕಾ ಪಡುಕೋಣೆ ಹೇಳುತ್ತಿರುವ ಮಾತು ಸುಳ್ಳು ಎಂದು ಹೇಳಿದ್ದಾರೆ.

ವಿಕಿಪೀಡಿಯಾ ಇದೆ

''ದೀಪಿಕಾ ನಿಮ್ಮ ಬಗ್ಗೆ ವಿಕಿಪೀಡಿಯಾ ಇದೆ. ಆದ್ದರಿಂದ ಮಾತನಾಡುವ ಮುಂಚೆ ಯೋಚಿಸಿ'' ಎಂದು ಜನರು ಬಿಸಿ ಮುಟ್ಟಿಸಿದ್ದಾರೆ.

ಎಲ್ಲ ಜನಪ್ರಿಯತೆಗಾಗಿ

''ದೀಪಿಕಾ ಜನಪ್ರಿಯತೆಗಾಗಿ ಈ ರೀತಿ ಮಾಡುತ್ತಾರೆ'' ಎನ್ನುವುದು ಕೆಲವರ ಅಭಿಪ್ರಾಯ

ಹಳೆಯದನ್ನು ಮರೆತಿದ್ದಾರೆ

''ದೀಪಿಕಾ ತಮ್ಮನ್ನು ಮೊದಲು ಚಿತ್ರರಂಗಕ್ಕೆ ಪರಿಚಯ ಮಾಡಿದವರನ್ನು ಮರೆತಿದ್ದಾರೆ'' ಎಂಬುದು ಕೆಲವರ ಅಭಿಪ್ರಾಯ.

ಬಾಲಿವುಡ್ ಚಿತ್ರಕ್ಕೆ ಕೊಡುವ ಗೌರವವನ್ನ ಕನ್ನಡ ಚಿತ್ರಕ್ಕೆ ನೀಡದ ದೀಪಿಕಾ.!

ಉಪೇಂದ್ರ ಫ್ಯಾನ್ಸ್

ಉಪೇಂದ್ರ ಅವರ ಕೆಲ ಅಭಿಮಾನಿಗಳು ಸಹ ಈ ವಿಡಿಯೋ ನೋಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಬಿಗ್ ಬಾಸ್' ಮನೆಗೆ ಹೋಗುತ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ

ದೀಪಿಕಾ ಹೇಳಿದ್ದೇನು...?

''ಓಂ ಶಾಂತಿ ಓಂ' ಚಿತ್ರ ಮರೆಯುವುದಕ್ಕೆ ಸಾಧ್ಯ ಇಲ್ಲ. ಅದಕ್ಕೂ ಮುಂಚೆ ನಾನು ಯಾವುದೇ ಸಿನಿಮಾ ಸೆಟ್ ಗಳಿಗೂ ಸಹ ಹೋಗಿರಲ್ಲೇ ಇಲ್ಲ. ನನಗೆ ಈ ಚಿತ್ರಕ್ಕೂ ಮುಂಚೆ ಹೇಗೆ ಕ್ಯಾಮರಾ ಎದುರಿಸಬೇಕು.. ಹೇಗೆ ನೋಡಬೇಕು.. ಯಾವ ರೀತಿ ಡೈಲಾಗ್ ಹೇಳಬೇಕು.. ಯಾವ ರೀತಿ ನಟನೆ ಮಾಡಬೇಕು ಯಾವುದು ತಿಳಿದೇ ಇರಲಿಲ್ಲ. ನಟನೆ ಬಗ್ಗೆ ಸ್ವಲ್ಪವೂ ಅನುಭವ ಇರಲಿಲ್ಲ'' ಎಂದು ಇತ್ತೀಚಿನ ಸಂದರ್ಶನದಲ್ಲಿ ದೀಪಿಕಾ ಹೇಳಿದ್ದರು.

English summary
Cinelovers have taken their Facebook account to express their anger towards Deepika Padukone about her comment on first film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X