ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!

ದೇಶದೆಲ್ಲಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆ ಕಟ್ಟಿದೆ. ಅಮೃತ ಮಹೋತ್ಸವದ ಅಂಗವಾಗಿ ಮನೆ ಮನಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಸಿನಿ ತಾರೆಯರು ಕೈ ಜೋಡಿಸಿದ್ದು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಿದ್ದಾರೆ.

ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಅಥವಾ ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸಿನಿಮಾ ತಾರೆಯರು ಬೆಂಬಲ ಸೂಚಿಸಿದ್ದಾರೆ. ಈ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ತುಂಬಲು 'ಹರ್ ಘರ್ ತಿರಂಗಾ' ಅನ್ನುವ ದೇಶಭಕ್ತಿ ಗೀತೆ ಸಿದ್ಧವಾಗಿ ಬಿಡುಗಡೆಯಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್, ನವರಸ ನಾಯಕ ಜಗ್ಗೇಶ್, ನಟಿ ತಾರಾ ಅನುರಾಧ ಸೇರಿದಂತೆ ಸಾಕಷ್ಟು ಜನ ಸೆಲೆಬ್ರೆಟಿಗಳು ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾ ಖಾತೆಗಳ ಡಿಪಿಯಲ್ಲೂ ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿ ದೇಶಪ್ರೇಮದ ಕಹಳೆ ಮೊಳಗಿಸುತ್ತಿದ್ದಾರೆ. ಅಭಿಮಾನಿಗಳಿಗೂ ಇದನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಜನಿಕಾಂತ್ ವಿಶೇಷ ಮನವಿ

ಸೂಪರ್ ಸ್ಟಾರ್ ರಜನಿಕಾಂತ್ ಪತ್ರ ಬರೆದು, ವಿಶೇಷ ವಿಡಿಯೋ ಮೂಲಕ ಸ್ವಾತಂತ್ರ್ಯ ದಿನಾಚರಣೆ ದಿನ ಎಲ್ಲರೂ ಮನೆಯಲ್ಲಿ ಧ್ವಜಾರೋಹಣ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. "ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಜಾತಿ ಮತ ಪಕ್ಷ ಭೇದ ಮರೆತು ಎಲ್ಲರೂ ಧ್ವಜಾರೋಹಣ ಮಾಡಿ, ಆ ಮೂಲಕ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಪ್ರತಿಯೊಬ್ಬರನ್ನು ಸ್ಮರಿಸೋಣ" ಎಂದು ರಜಿನಿಕಾಂತ್ ಕೇಳಿಕೊಂಡಿದ್ದಾರೆ.

ನಟಿ ತಾರಾ ಮನೆ ಮೇಲೆ ತ್ರಿವರ್ಣ ಧ್ವಜ

ಹಿರಿಯ ನಟಿ ತಾರಾ ತಮ್ಮ ಜೆಪಿ ನಗರದ ನಿವಾಸದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆ ವಿಡಿಯೋ ಶೇರ್ ಮಾಡಿದ್ದಾರೆ. "ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ನಮ್ಮ ಮನೆಯ ಮೇಲೂ".....ಭಾರತೀಯಳಾಗಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಮನವಿ

ಕೆಲ ದಿನಗಳ ಹಿಂದೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಟ್ವೀಟ್ ಮಾಡಿ " ಗುಬ್ಬಚ್ಚಿ ಗೂಡಿನ ನನ್ನ ಆತ್ಮೀಯ ಸ್ನೇಹಿತರೆ ತಮ್ಮ ಖಾತೆಯ DPಯಲ್ಲಿ ಭಾರತದ ಧ್ವಜ ಹಾಕಿ. ನಮಗೆ ಸ್ವತಂತ್ರ ಬಂದ 75ನೇ ವರ್ಷ. ಆ ಸಮಯದಲ್ಲಿ ನಾವು ಹುಟ್ಟದೇ ಇರಬಹುದು. ಆದರೆ ಸಂಭ್ರಮಿಸಲು ಇಂದು ಇದ್ದೇವೆ. ನಮ್ಮ ಭಾರತದ ಧ್ವಜ ಗೌರವಿಸಿ ಜೈ ಎನ್ನುವ. ಪ್ರಧಾನಿ ಮೋದಿಯವರ ಭಾವಕ್ಕೆ ಸ್ಪಂದಿಸುವ" ಬರೆದುಕೊಂಡಿದ್ದರು. ಸೋಮವಾರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಗ್ಗೇಶ್ ಭಾಗಿಯಾಗಲಿದ್ದಾರೆ. ಇನ್ನು ನಿರಂತರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

 ತಾರೆಯರ ಮನೆ ಮನಗಳಲ್ಲಿ ರಾಷ್ಟ್ರಧ್ವಜ

ತಾರೆಯರ ಮನೆ ಮನಗಳಲ್ಲಿ ರಾಷ್ಟ್ರಧ್ವಜ

ಹಿರಿಯ ನಟಿ ಸುಧಾರಾಣಿ, ನಟಿ ಅಮೂಲ್ಯ ಅವರ ಮನೆಯಗಳ ಮೇಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಮನೆಯ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 'ಹರ್ ಘರ್ ತಿರಂಗಾ' ಗೀತೆ ಬಿಡುಗಡೆಯಾಗಿ ಅಭಿಯಾನಕ್ಕೆ ಮತ್ತಷ್ಟು ಹುರುಪು ತಂದಿದೆ. ದೇಶಭಕ್ತಿ ಉಕ್ಕಿಸುವ 'ಹರ್ ಘರ್ ತಿರಂಗಾ' ಹಾಡನ್ನು ಪ್ರಧಾನವಾಗಿ ಸೋನು ನಿಗಮ್ ಹಾಗೂ ಆಶಾ ಭೋಂಸ್ಲೆ ಹಾಡಿದ್ದಾರೆ. ಇನ್ನುಳಿದಂತೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಆಯಾ ಭಾಷೆಯಲ್ಲಿ ಆಯಾ ಭಾಷೆಯ ಸಾಧಕರು 'ಮನೆ ಮನೆಗೂ ತ್ರಿವರ್ಣ' ಎಂದು ಹಾಡಿದ್ದಾರೆ.

More from Filmibeat

English summary
Cinema Celebrities Supporting Har Ghar Tiranga Campaign. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X