Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಿನಿಮಾ ಲವರ್ಸ್ ಡೇ'ನಂದು ಪಿವಿಆರ್‌ನಲ್ಲಿ ಟಿಕೆಟ್ ರೇಟ್ 99 ಮಾತ್ರ; ಆದರೆ ಈ ಊರುಗಳಲ್ಲಿ ಇಲ್ಲ!
ಕಳೆದ ವರ್ಷ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳನ್ನು 75 ರೂಪಾಯಿಗಳಿಗೆ ಮಾರಾಟ ಮಾಡಿ 'ನ್ಯಾಷನಲ್ ಸಿನಿಮಾ ಡೇ'ಯನ್ನು ಆಚರಿಸಲಾಗಿತ್ತು. ಸೆಪ್ಟೆಂಬರ್ 23ರಂದು ಈ ನ್ಯಾಷನಲ್ ಸಿನಿಮಾ ಡೇಯನ್ನು ರಾಷ್ಟ್ರದಾದ್ಯಂತ ಆಚರಿಸಲಾಗಿತ್ತು. ಈ ದಿನದಂದು ಕಡಿಮೆ ಬೆಲೆಗೆ ಟಿಕೆಟ್‌ಗಳನ್ನು ಖರೀದಿಸಿದ್ದ ಸಿನಿ ರಸಿಕರು ದೊಡ್ಡ ಸಂಖ್ಯೆಯಲ್ಲಿಯೇ ಚಿತ್ರಮಂದಿರಗಳಿಗೆ ಆಗಮಿಸಿದ್ದರು. ಕೊರೊನಾ ನಂತರ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ ಮತ್ತೆ ಪುಟಿದೇಳುವಂತೆ ಮಾಡಿದ ಸಿನಿ ರಸಿಕರಿಗೆ ಕೃತಜ್ಞತೆ ಸಲ್ಲಿಸುವ ಕಾರಣದಿಂದಾಗಿ ಈ ದಿನವನ್ನು ಆಚರಿಸಲಾಗಿತ್ತು.
ಇನ್ನು ಇದೇ ರೀತಿಯ ಮತ್ತೊಂದು ದಿನಾಚರಣೆಯನ್ನು ಆಚರಿಸುವ ಸಮಯ ಇದೀಗ ಬಂದಿದೆ. ಜನವರಿ 20ರಂದು ( ಶುಕ್ರವಾರ ) ಸಿನಿಮಾ ಲವರ್ಸ್ ಡೇ ಎಂದು ಆಚರಿಸಲು ಪಿವಿಆರ್ ಮಲ್ಟಿಪ್ಲೆಕ್ಸ್‌ಗಳು ತೀರ್ಮಾನಿಸಿದ್ದು, ಆ ದಿನದಂದು ಕೇವಲ 99 ರೂಪಾಯಿಗಳಿಗೆ ಟಿಕೆಟ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿವೆ. ಕಳೆದ ಬಾರಿ ನ್ಯಾಷನಲ್ ಸಿನಿಮಾ ಡೇ ಪ್ರಯುಕ್ತ ಕಡಿಮೆ ದರದಲ್ಲಿ ಪಿವಿಆರ್ ಮಲ್ಟಿಪ್ಲೆಕ್ಸ್ ಟಿಕೆಟ್‌ಗಳನ್ನು ನೀಡಿದ್ದರಿಂದ ಆ ದಿನ ದೇಶದಾದ್ಯಂತ ಬರೋಬ್ಬರಿ 6.5 ಮಿಲಿಯನ್ ಸಿನಿ ರಸಿಕರು ಚಿತ್ರಮಂದಿರಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದ್ದರು.
ನ್ಯಾಷನಲ್ ಸಿನಿಮಾ ಡೇ ರೀತಿಯೇ ಸಿನಿಮಾ ಲವರ್ಸ್ ಡೇಯಂದೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಿನಿ ರಸಿಕರು ಚಿತ್ರಮಂದಿರಗಳಿಗೆ ಬಂದು ಚಿತ್ರಗಳನ್ನು ವೀಕ್ಷಿಸುವ ಸಾಧ್ಯತೆಗಳಿವೆ. ಇನ್ನು ಚಿತ್ರಮಂದಿರಗಳಲ್ಲಿ ಅವತಾರ್ ದ ವೇ ಆಫ್ ವಾಟರ್, ವೇದ ಸೇರಿದಂತೆ ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾದ ಹಲವು ದೊಡ್ಡ ಚಿತ್ರಗಳು ಚಿತ್ರಮಂದಿರಲ್ಲಿ ಇರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿ ರಸಿಕರು ಚಿತ್ರಮಂದಿರದೊಳಗೆ ನುಗ್ಗವುದು ಖಚಿತ.

ಯಾವ ನಗರಗಳಲ್ಲಿ ಲಭ್ಯ?
ಈ ಸಿನಿಮಾ ಲವರ್ಸ್ ಡೇಯನ್ನು ಜನವರಿ 20ರಂದು ಆಚರಿಸಲಿದ್ದು, ಆ ದಿನ ಮಾತ್ರ ಈ ಆಫರ್ ಇರಲಿದೆ. ಚಂಡೀಘರ್, ಪಠಾಣ್‌ಕೋಟ್ ಹಾಗೂ ಪಾಂಡಿಚೆರಿ ಈ ಮೂರು ನಗರಗಳನ್ನು ಹೊರತುಪಡಿಸಿ ದೇಶದ ಉಳಿದ ಎಲ್ಲಾ ನಗರಗಳ ಪಿವಿಆರ್‌ನಲ್ಲಿಯೂ ಈ ಆಫರ್ ಲಭ್ಯವಿರಲಿದೆ. ಇನ್ನು ಕರ್ನಾಟಕದ ಎಲ್ಲಾ ಪಿವಿಆರ್ ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಈ ಆಫರ್ ಇರಲಿದೆ.

ಜಿಎಸ್‌ಟಿ ಇರುತ್ತೆ!
ಇನ್ನು ಟಿಕೆಟ್ ದರಗಳು 99 ರೂಪಾಯಿಗಳಿಂದ ಪ್ರಾರಂಭವಾಗಲಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ಹಾಗೂ ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂಪಾಯಿ ಜತೆಗೆ ಜಿಎಸ್‌ಟಿ ಸೇರ್ಪಡೆಗೊಳ್ಳಲಿದೆ. ತೆಲಂಗಾಣ ರಾಜ್ಯದಲ್ಲಿ 112 ರೂಪಾಯಿ ಜತೆಗೆ ಜಿಎಸ್‌ಟಿ ಇರಲಿದೆ. ಈ ಮೂಲಕ ಸಾಮಾನ್ಯ ದಿನಗಳಲ್ಲಿ ಇರುತ್ತಿದ್ದ ಟಿಕೆಟ್ ದರಕ್ಕಿಂತ ತುಸು ಕಡಿಮೆ ದರದಲ್ಲಿ ಟಿಕೆಟ್‌ಗಳು ಲಭ್ಯವಾಗಲಿದ್ದು, ಸಿನಿಮಾ ಲವರ್ಸ್ ಇದನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಈ ಸೀಟುಗಳಲ್ಲಿ ಕೂರುವಂತಿಲ್ಲ!
ಇನ್ನು ಪ್ರೀಮಿಯಮ್ ಸೀಟುಗಳ ದರ ಎಂದಿನಂತೆಯೇ ಇರಲಿದ್ದು, ಸಾಮಾನ್ಯ ಸೀಟುಗಳ ಟಿಕೆಟ್ ದರವನ್ನು ಮಾತ್ರ ತಗ್ಗಿಸಲಾಗಿದೆ. ಅಂದರೆ 4ಡಿಎಕ್ಸ್, ಡೈರೆಕ್ಟರ್ಸ್ ಕಟ್, ಗೋಲ್ಡ್ ಕ್ಲಾಸ್, ಸೋಫಾ, ಐಮ್ಯಾಕ್ಸ್‌ಗಳಲ್ಲಿ ಟಿಕೆಟ್ ದರ ಎಂದಿನಂತೆ ದುಬಾರಿಯೇ ಇರಲಿದ್ದು, ಕ್ಲಬ್ ಕ್ಲಾಸ್ ಸೀಟುಗಳ ಟಿಕೆಟ್ ದರ ಮಾತ್ರ ಕಡಿಮೆ ಇರಲಿದೆ.