»   » ಪ್ರಶಸ್ತಿಗಳಿಗಾಗಿ ಸರ್ಕಾರದಿಂದ ಕನ್ನಡ ಸಿನಿಮಾಗಳ ಅರ್ಜಿ ಆಹ್ವಾನ

ಪ್ರಶಸ್ತಿಗಳಿಗಾಗಿ ಸರ್ಕಾರದಿಂದ ಕನ್ನಡ ಸಿನಿಮಾಗಳ ಅರ್ಜಿ ಆಹ್ವಾನ

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ ಹಾಗೂ ಇತರ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳಿಗಾಗಿ ನೀಡುವ ರಾಜ್ಯ ಪ್ರಶಸ್ತಿಗಳಿಗಾಗಿ ಕರ್ನಾಟಕ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ. ಏಪ್ರಿಲ್‌ 1, 2000 ದಿಂದ ಮಾರ್ಚ್‌ 31, 2001 ವರೆಗೆ ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ ಸಿನಿಮಾಗಳನ್ನು ನಿರ್ಮಾಪಕರು ಸ್ಪರ್ಧೆಗೆ ಕಳುಹಿಸಬಹುದು.

ಸ್ಪರ್ಧೆಗೆ ಸಿನಿಮಾಗಳನ್ನು ಕಳಹಿಸಲು ನಿಗದಿತ ಅರ್ಜಿ ನಮೂನೆಯಿದೆ. ನಿರ್ದೇಶಕರು, ವಾರ್ತಾ ಇಲಾಖೆ , ಚಲನಚಿತ್ರ ವಿಭಾಗ, ಬಾದಾಮಿ ಕಟ್ಟಡ, ನರಸಿಂಹರಾಜ ವೃತ್ತ , ಬೆಂಗಳೂರು - 560002 ವಿಳಾಸದಲ್ಲಿ ಅರ್ಜಿ ನಮೂನೆಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್‌ 16.

ಭರ್ತಿ ಮಾಡಿದ ಅರ್ಜಿಗಳೊಂದಿಗೆ ನಿರ್ದೇಶಕರ ಹೆಸರಿನಲ್ಲಿ ಪಡೆದ 2800 ರುಪಾಯಿ ಡ್ರಾಫ್ಟ್‌ ಇರಿಸುವುದು ಕಡ್ಡಾಯ. ಹೆಚ್ಚಿನ ವಿವರಗಳು ಅಗತ್ಯವಿದ್ದಲ್ಲಿ ನೇರವಾಗಿ ವಾರ್ತಾ ಇಲಾಖೆಯ ಚಲನಚಿತ್ರ ವಿಭಾಗದ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

Read more about: sandalwood, kannada cinema
English summary
Last date to send the contesting application is april 16
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada