For Quick Alerts
  ALLOW NOTIFICATIONS  
  For Daily Alerts

  ಸೋಶಿಯಲ್ ಮೀಡಿಯಾದಲ್ಲಿ ರಿಷಬ್- ಸಪ್ತಮಿ ಮೋಡಿ: ವೈರಲ್ ಫೋಟೊಗಳ ಸೀಕ್ರೆಟ್ ಏನು?

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ. ಸಿನಿಮಾ 50ನೇ ದಿನದ ಸಮೀಪದಲ್ಲಿದೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಶಿವ- ಲೀಲಾ ಅದರೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಹೊಸ ಫೋಟೊಗಳು ರಾರಾಜಿಸುತ್ತಿದೆ.

  ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ತೆರೆಗೆ ಬಂದ ಅದ್ಧೂರಿ ಸಿನಿಮಾ 'ಕಾಂತಾರ'. ಕರಾವಳಿಯ ಸಂಸ್ಕೃತಿ, ಆಚರಣೆಗಳನ್ನು ಬಹಳ ಅದ್ಭುತವಾಗಿ ತೆರೆಗೆ ತಂದು ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಕಾಡನ್ನೇ ನಂಬಿ ಬದುಕುವ ಜನ, ಅರಣ್ಯ ಇಲಾಖೆಯ ನಡುವಿನ ಸಂಘರ್ಷದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇನ್ನು ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಡಬ್ ಆಗಿ ಸಿನಿಮಾ ಸೂಪರ್ ಹಿಟ್ ಆಗಿದೆ. 5 ವಾರ ಕಳೆದರೂ ಹೊರ ರಾಜ್ಯಗಳಲ್ಲಿ 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. KGF ಚಾಪ್ಟರ್ 1 ಸೇರಿದಂತೆ ಸಾಕಷ್ಟು ಸಿನಿಮಾಗಳ ದಾಖಲೆಗಳನ್ನು ಮುರಿದು 'ಕಾಂತಾರ' ಮುನ್ನುಗ್ಗುತ್ತಿದೆ.

  'ಕಾಂತಾರ' ಚಿತ್ರದ ಪೋಸ್ಟರ್, ಟೀಸರ್, ಟ್ರೈಲರ್ ಎಲ್ಲವೂ ಸಿನಿರಸಿಕರು ಮನಗೆದ್ದಿದೆ. ಪೋಸ್ಟರ್ ಡಿಸೈನ್ ಮಜವಾಗಿದೆ. ಆದರೆ ಇದ್ದಕ್ಕಿದಂತೆ ಶಿವ, ಲೀಲಾ ಜೋಡಿಯ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಅರೇ ಇಷ್ಟು ದಿನ ಇದನ್ನು ನೋಡೇ ಇರಲಿಲ್ಲವಲ್ಲ. ಇದು ಯಾವ ಸಿನಿಮಾದ್ದು. ಜೋಡಿ ಮತ್ತೊಂದು ಸಿನಿಮಾ ಮಾಡ್ತಿದ್ಯಾ? ಅಂತ ಕೆಲವರು ಮೊದಲಿಗೆ ತಲೆ ಕೆಡಿಸಿಕೊಂಡಿದ್ದರು.

  ಅರವಿಂದ್ ಕಶ್ಯಪ್ ಕ್ಲಿಕ್ಕಿಸಿದ್ದ ಫೋಟೊಗಳು
  'ಕಾಂತಾರ' ಲುಕ್ ಟೆಸ್ಟ್ ಫೋಟೊಗಳು

  ಕೊರೊನಾ ಲಾಕ್‌ಡೌನ್‌ ನಡುವೆಯೇ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಶುರು ಮಾಡಿದ್ದರು. ಕಥೆ ಸಿದ್ಧವಾಗುತ್ತಿದ್ದಂತೆ ಕಲಾವಿದರ ಆಯ್ಕೆ, ಲುಕ್ ಟೆಸ್ಟ್ ಎಲ್ಲಾ ಮಾಡಿದ್ದರು. ಶಿವ ಹಾಗೂ ಲೀಲಾ ಪಾತ್ರಗಳಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಹೇಗೆ ಕಾಣಿಸುತ್ತಾರೆ. ಹೇಗೆ ಇರಬೇಕು ಎಂದು ಮಾಡಿಸಿರುವ ಲುಕ್ ಟೆಸ್ಟ್ ಫೋಟೊಗಳು ಇವು. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಈಗ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  'ಕಾಂತಾರ' ಲುಕ್ ಟೆಸ್ಟ್ ಫೋಟೊಗಳು

  'ಕಾಂತಾರ' ಲುಕ್ ಟೆಸ್ಟ್ ಫೋಟೊಗಳು

  ಕೊರೊನಾ ಲಾಕ್‌ಡೌನ್‌ ನಡುವೆಯೇ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಶುರು ಮಾಡಿದ್ದರು. ಕಥೆ ಸಿದ್ಧವಾಗುತ್ತಿದ್ದಂತೆ ಕಲಾವಿದರ ಆಯ್ಕೆ, ಲುಕ್ ಟೆಸ್ಟ್ ಎಲ್ಲಾ ಮಾಡಿದ್ದರು. ಶಿವ ಹಾಗೂ ಲೀಲಾ ಪಾತ್ರಗಳಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಹೇಗೆ ಕಾಣಿಸುತ್ತಾರೆ. ಹೇಗೆ ಇರಬೇಕು ಎಂದು ಮಾಡಿಸಿರುವ ಲುಕ್ ಟೆಸ್ಟ್ ಫೋಟೊಗಳು ಇವು. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಈಗ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  ಆಡಿಷನ್ ಕೊಟ್ಟಿದ್ದ ಸಪ್ತಮಿ ಗೌಡ

  ಆಡಿಷನ್ ಕೊಟ್ಟಿದ್ದ ಸಪ್ತಮಿ ಗೌಡ

  ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಪುತ್ರಿ ಸಪ್ತಮಿ ಗೌಡ 'ಪಾಪ್‌ಕಾರ್ನ್‌ ಮಂಕಿ ಟೈಗರ್' ನಂತರ ವಿದೇಶಕ್ಕೆ ಹೋಗಿ ಓದುವ ಕನಸು ಕಂಡಿದ್ದರು. ಆದರೆ ಅಷ್ಟರಲ್ಲಿ ಲಾಕ್‌ಡೌನ್ ಆಗಿ ಅದು ಸಾಧ್ಯವಾಗಿರಲಿಲ್ಲ. ಇಂತಹ ಸಮಯದಲ್ಲೇ ಲೀಲಾ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆಡಿಷನ್‌ನಲ್ಲಿ ಗಮನ ಸೆಳೆದು ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರಕ್ಕೆ ಆಯ್ಕೆ ಆಗಿದ್ದರು. ಅದೇ ದಿನ ಈ ರೀತಿ ರಿಷಬ್ ಶೆಟ್ಟಿ ಜೊತೆಗೆ ಫೋಟೊಶೂಟ್ ಮಾಡಲಾಗಿತ್ತು. ಹಳ್ಳಿಯ ಹುಡುಗಿಯಾಗಿ ಸೀರೆ ಉಟ್ಟು ಮಿಂಚಿದ್ದರು. ರಿಷಬ್ ಶೆಟ್ಟಿ ಬೀಡಿ ಹಿಡಿದು ರಗಡ್ ಲುಕ್‌ನಲ್ಲಿ ದರ್ಶನ್ ಕೊಟ್ಟಿದ್ದರು. ಕಳೆದ ವರ್ಷ ಜುಲೈ 27ಕ್ಕೆ ಈ ಆಡಿಷನ್ ನಡೆದಿತ್ತು.

  75 ಕೋಟಿ ಗಡಿಯಲ್ಲಿ ಹಿಂದಿ ವರ್ಷನ್

  75 ಕೋಟಿ ಗಡಿಯಲ್ಲಿ ಹಿಂದಿ ವರ್ಷನ್

  ಹಿಂದಿಗೆ ಡಬ್ ಆಗಿರುವ 'ಕಾಂತಾರ' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಈಗಾಗಲೇ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ. ಉತ್ತರ ಭಾರತದ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡುತ್ತಿದ್ದಾರೆ. ವಾರದ ದಿನಗಳಲ್ಲಿ ಇವತ್ತಿಗೂ ಸಿನಿಮಾ 1 ಕೋಟಿಗೂ ಅಧಿಕ ಗಳಿಕೆ ಮಾಡುತ್ತಿದೆ. ವೀಕೆಂಡ್‌ಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದ ಒಂದು ತಿಂಗಳಿನಲ್ಲಿ ಬಿಡುಗಡೆಯಾದ ಎಲ್ಲಾ ಹಿಂದಿ ಸಿನಿಮಾಗಳು 'ಕಾಂತಾರ' ಎದುರು ಮಂಕಾಗಿಬಿಟ್ಟವು. ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ 100 ಕೋಟಿ ಬಾಚಿದರೂ ಅಚ್ಚರಿ ಪಡಬೇಕಿಲ್ಲ.

  ರಾಜ್ಯದಲ್ಲಿ 1 ಕೋಟಿ ಟಿಕೆಟ್ ಮಾರಾಟ

  ರಾಜ್ಯದಲ್ಲಿ 1 ಕೋಟಿ ಟಿಕೆಟ್ ಮಾರಾಟ


  'ಕಾಂತಾರ' ಕರ್ನಾಟಕದಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ರಾಜ್ಯದಲ್ಲಿ ಚಿತ್ರದ 1 ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗಿದೆ. ಆ ಮೂಲಕ ರಾಜ್ಯದಲ್ಲಿ ಸಿನಿಮಾ ಗಳಿಕೆ 150 ಕೋಟಿ ಮೀರಿದೆ. ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಥಿಯೇಟರ್‌ಗೆ ಬಂದೇ ಬರುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಪರಭಾಷಿಕರು ಕೂಡ 'ಕಾಂತಾರ' ಸಕ್ಸಸ್ ನೋಡಿ ಬೆರಗಾಗಿದ್ದಾರೆ.

  English summary
  Cinematographer Arvind S Kashyap Shares Kantara Shiva and Leela First look test Photos. Rishab Shetty’s Kantara is currently in its 7th week and still going strong. hindi version inches closer to 75 crore mark. Know more.
  Monday, November 14, 2022, 8:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X