For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್-ಪ್ರಭಾಸ್ 'ಸಲಾರ್' ಸಿನಿಮಾಗೆ ಕನ್ನಡದ ಛಾಯಾಗ್ರಾಹಕ ಎಂಟ್ರಿ

  By ಫಿಲ್ಮ್ ಡೆಸ್ಕ್
  |

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಕನ್ನಡದ ತಂತ್ರಜ್ಞನೊಬ್ಬ ಎಂಟ್ರಿ ಕೊಟ್ಟಿದ್ದಾರೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಬಿಟ್ಟರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿರಲಿಲ್ಲ. ಆದರೀಗ ಮತ್ತೊಬ್ಬರ ಹೆಸರು ರಿವೀಲ್ ಆಗಿದೆ.

  ಪ್ರಶಾಂತ್ ನೀಲ್ ಜೊತೆ ಕನ್ನಡದ ಖ್ಯಾತ ಛಾಯಾಗ್ರಾಹಕ ಭುವನ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಎಲ್ಲಾ ಸಿನಿಮಾಗಳಿಗೂ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಭುವನ್ ಗೌಡ ಇದೀಗ ಸಲಾರ್ ನಲ್ಲೂ ಕೆಲಸ ಮಾಡಲು ಕೈ ಜೋಡಿಸಿದ್ದಾರೆ. ಈ ಮೂಲಕ ಭುವನ್ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  'ಕೆಜಿಎಫ್ 3' ಸಿನಿಮಾ ಕುರಿತು ಪ್ರಶಾಂತ್ ನೀಲ್ ಕೊಟ್ಟರು ಸ್ಪಷ್ಟನೆ

  ಉಗ್ರಂ, ಕೆಜಿಎಫ್-1 ಮತ್ತು ಕೆಜಿಎಫ್-2 ಸಿನಿಮಾದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿಯುವ ಮೂಲಕ ಪ್ರೇಕ್ಷಕರ ಕಣ್ಣಿಗೆ ತಂಪೆರೆದಿದ್ದ ಭುವನ್ ಇದೀಗ ಪ್ರಶಾಂತ್ ನೀಲ್ ಆವರ 4ನೇ ಸಿನಿಮಾಗೂ ಕೈಜೋಡಿಸಿದ್ದಾರೆ. ಅಂದಹಾಗೆ ಈಗಾಗಲೇ ರಿಲೀಸ್ ಆಗಿರುವ ಸಲಾರ್ ಫಸ್ಟ್ ಲುಕ್ ಅನ್ನು ಸೆರೆಹಿಡಿದಿದ್ದು ಇದೇ ಭುವನ್ ಗೌಡ.

  ಸಲಾರ್ ಫಸ್ಟ್ ಲುಕ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫಸ್ಟ್ ಲುಕ್ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದಿೆ. ಇದೀಗ ಪ್ರಭಾಸ್ ಸಿನಿಮಾವನ್ನು ಸೆರೆಹಿಡಿಯಲು ಭುವನ್ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಸದ್ಯ ಭುವನ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಯಾರೆಲ್ಲ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಇರಲಿದ್ದಾರೆ ಎನ್ನುವುದನ್ನು ಕಾದುನೋಡಬೇಕು.

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

  ಸದ್ಯ ಚಿತ್ರತಂಡ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈಗಾಗಲೇ ಸಿನಿಮಾತಂಡ ಆಡಿಷನ್ ಪ್ರಕ್ರಿಯೆಯನ್ನು ನಡೆಸಿದೆ. ಪ್ರಶಾಂತ್ ನೀಲ್ ಈಗಾಗಲೇ ಕೆಜಿಎಫ್-2ಸಿನಿಮಾದ ಕ್ಪೈಮ್ಯಾಕ್ಸ್ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಡಿಸೆಂಬರ್ ನಲ್ಲಿ ಕೆಜಿಎಫ್-2 ಚಿತ್ರದ ಕೆಲಸವನ್ನು ಮುಗಿಸಿ ಜನವರಿ ಕೊನೆಯ ತಿಂಗಳಲ್ಲಿ ಸಲಾರ್ ಸಿನಿಮಾ ಪ್ರಾರಂಭಿಸುವ ಸಾಧ್ಯತೆ ಇದೆ.

  English summary
  Kannada Cinematographer Bhuvan Gowda Joined Prabhas-Prashanth Neel's Salaar Project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X