»   » ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸಿನಿಮಾಟೋಗ್ರಾಫರ್ ಈಗ ಡೈರೆಕ್ಟರ್!

ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸಿನಿಮಾಟೋಗ್ರಾಫರ್ ಈಗ ಡೈರೆಕ್ಟರ್!

Posted By:
Subscribe to Filmibeat Kannada

ಚಂದನವನದಲ್ಲಿ ಛಾಯಾಗ್ರಾಹಕರು ನಿರ್ದೇಶಕರಾಗಿ ತಮ್ಮ ವೃತ್ತಿ ಬದಲಿಸುವ ಬೆಳವಣಿಗೆ ಹೊಸದೇನಲ್ಲ. ಅದು ಕೆಲವರ ಕನಸು ಸಹ. ಇತ್ತೀಚೆಗೆ 'ಹೆಬ್ಬುಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸಿನಿಮಾಟೋಗ್ರಾಫರ್ ಎಸ್ ಕೃಷ್ಣ ಡೈರೆಕ್ಟರ್ ಆದರು. ಅಂತೆಯೇ ಈಗ ಕ್ಯಾಮೆರಾ ಮೆನ್ ಮನೋಹರ್ ಜೋಶಿ ರವರು ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಲು ಮನಸ್ಸು ಮಾಡಿದ್ದಾರೆ.

ಹೌದು, ಈ ಹಿಂದೆ ಜನಪ್ರಿಯ ಚಿತ್ರಗಳಾದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ಕಿರಗೂರಿನ ಗಯ್ಯಾಳಿಗಳು', 'ಬಹುಪರಾಕ್', 'ರನ್ ಆಂಟನಿ', 'ನನ್‌ ಲೈಫ್ ಅಲ್ಲಿ ಒಂದಿನ' ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ದುಡಿದಿರುವ ಮನೋಹರ್ ಜೋಶಿ ರವರು ಈಗ ಡೈರೆಕ್ಟರ್ ಕ್ಯಾಪ್ ತೊಡಲು ಮುಂದಾಗಿದ್ದಾರೆ. ಅವರ ಮೊದಲ ನಿರ್ದೇಶನದ ಚಿತ್ರ 'ಫಸ್ಟ್‌ ರ್ಯಾಂಕ್ ರಾಜು' ಖ್ಯಾತಿಯ ನಟ ಗುರುನಂದನ್ ಮುಖ್ಯ ಭೂಮಿಕೆಯಲ್ಲಿ ಮೂಡಿಬರಲಿದೆಯಂತೆ.

 Cinematographer Manohar Joshi’s directorial debut with actor Gurunandan

ಮನೋಹರ್ ಜೋಶಿ ರವರು ಸದ್ಯದಲ್ಲಿ ತಮ್ಮ ಫಸ್ಟ್ ಡೈರೆಕ್ಷನ್ ಚಿತ್ರಕ್ಕೆ ಸ್ಕ್ರಿಪ್ಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲಿ ಅಧಿಕೃತವಾಗಿ ಚಿತ್ರದ ಬಗ್ಗೆ ಘೋಷಿಸಲಿದ್ದಾರೆ. ಆದರೆ ಚಿತ್ರಕ್ಕೆ ಇನ್ನೂ ಟೈಟಲ್ ನೀಡಿಲ್ಲ.

 Cinematographer Manohar Joshi’s directorial debut with actor Gurunandan

ನಟ ಗುರುನಂದನ್ ರವರು ಸದ್ಯದಲ್ಲಿ ನರೇಶ್ ಕುಮಾರ್ ನಿರ್ದೇಶನದ 'ರಾಜು ಕನ್ನಡ ಮೀಡಿಯಂ' ಮತ್ತು ಡಿ ಪಿ ರಘುರಾಮ್ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. 'ರಾಜು ಕನ್ನಡ ಮೀಡಿಯಂ' ಸಿನಿಮಾ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಚಿತ್ರ ಆಗಸ್ಟ್ ಅಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆಗಳು ಇವೆ.

English summary
Cinematographer Manohar Joshi’s directorial debut with actor Gurunandan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada