ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಇನ್ನಿಲ್ಲ

150ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಸುಂದರನಾಥ್ ಸುವರ್ಣ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ ಮುಂಜಾನೆ ಹನುಮಂತನಗರದಲ್ಲಿರುವ ಅವರ ನಿವಾಸದಲ್ಲಿ ಅವರು ಮೃತಪಟ್ಟಿದ್ದಾರೆ. ಬೆಳಗ್ಗೆ 10ಗಂಟೆಯ ತನಕ ಪಾರ್ಥಿವ ಶರೀರಿದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಅಂತ್ಯಕ್ರಿಯೆ ನಡೆಯಲಿದೆ. [ಛಾಯಾಗ್ರಾಹಕ ಸುಂದರನಾಥ್ ಸುವರ್ಣ]
ಅಪರೂಪದ ಅತಿಥಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಸುಂದರನಾಥ್ ಸುವರ್ಣ ಬಳಿಕ 150ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಆರಂಭ, ಟೈಗರ್, ಅಗ್ನಿ ಪರ್ವ, ಶ್ರೀ ಮಂಜುನಾಥ, ಮುಸ್ಸಂಜೆ ಮಾತು, ಚೆಲ್ಲಾಟ, ಅಮೃತವರ್ಷಿಣಿ, ಗಂಡುಗಲಿ ಕುಮಾರರಾಮ, ಕಿಲಾಡಿ ತಾತ, ಆಪರೇಷನ್ ಅಂತ, ಅನುರಾಗ ಸಂಗಮ, ಲಾಕಪ್ ಡೆತ್, ಗೋಲಿಬಾರ್, ನಮ್ಮರ ಮಂದಾರ ಹೂವೆ ಮುಂತಾದ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದರು. ಸ್ವತಃ ನಿರ್ದೇಶಕರು ಆಗಿದ್ದ ಸುಂದರನಾಥ್ ಸುವರ್ಣ ಅವರಿಗೆ 2013ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.
ಸಿಎಂ ಸಂತಾಪ : ಸುಂದರನಾಥ್ ಸುವರ್ಣ ಅವರ ಸಾವಿನಿಂದ ಕನ್ನಡ ಚಿತ್ರರಂಗ ಕ್ರಿಯಾಶೀಲ ಮತ್ತು ಸೃಜನ ಶೀಲ ಛಾಯಾಗ್ರಾಹಕರನ್ನು ಕಳೆದುಕೊಡಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.


Click it and Unblock the Notifications











