ಮೊಮ್ಮಗನನ್ನು ನೋಡಿದ ಚಿರು ತಾಯಿ ಹೇಳಿದ್ದು ಹೀಗೆ

ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಇಂದು ಸಂತಸದ ದಿನ, ಕಳೆದ ನಾಲ್ಕು ತಿಂಗಳಿನಿಂದ ದುಃಖದಲ್ಲೇ ಸಮಯ ಕಳೆದಿದ್ದ ಕುಟುಂಬ ಇಂದು ಸಂತೋಶದ ಅಲೆಯಲ್ಲಿ ತೇಲುತ್ತಿದೆ. ಕಳೆದು ಹೋಗಿದ್ದ ನಗು ಮತ್ತೆ ಬಂದಿದೆ.

Recommended Video

ಚಿರು ಮಗುವನ್ನು ಎತ್ತಿ ಮುದ್ದಾಡಿದ ಅರ್ಜುನ್ ಸರ್ಜಾ ತಾಯಿ | Filmibeat Kannada

ಇಂದು ಮೇಘನಾ ರಾಜ್‌ ಗೆ ಗಂಡು ಮಗು ಜನಿಸಿದೆ. ಅಭಿಮಾನಿಗಳು, ಕುಟುಂಬದವರಾದಿಯಾಗಿ ಎಲ್ಲರೂ, ಚಿರಂಜೀವಿ ಸರ್ಜಾ ನೆ ಮತ್ತೆ ಮಗುವಾಗಿ ಜನಿಸಿದ್ದಾನೆ ಎನ್ನುತ್ತಿದ್ದಾರೆ.

ಮಗು ಹುಟ್ಟಿದ್ದಕ್ಕೆ ಆಸ್ಪತ್ರೆ ಮುಂದೆ ಚಿರು ಅಭಿಮಾನಿಗಳು ಹಬ್ಬವನ್ನೇ ಆಚರಿಸಿದ್ದಾರೆ. ಆಸ್ಪತ್ರೆ ಮುಂದೆ ದಾರಿಯಲ್ಲಿ ಹೋಗುವವರಿಗೆಲ್ಲಾ ಸಿಹಿ ಹಂಚಿದ್ದಾರೆ. ಚಿರು ಪರ ಘೋಷಣೆ ಕೂಗಿದ್ದಾರೆ. ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.

ಹಬ್ಬ ಆಚರಿಸುತ್ತಿದ್ದಾರೆ ಚಿರು-ಮೇಘನಾ ಕುಟುಂಬದವರು

ಹಬ್ಬ ಆಚರಿಸುತ್ತಿದ್ದಾರೆ ಚಿರು-ಮೇಘನಾ ಕುಟುಂಬದವರು

ಇತ್ತ ಆಸ್ಪತ್ರೆ ಒಳಗೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬ ಸದಸ್ಯರೆಲ್ಲರೂ ಪುಟ್ಟ ಮಗುವನ್ನು ಸುತ್ತವರಿದು, ಕಣ್ಣಿನಲ್ಲೇ ಮಗುವಿನ ಮುಗ್ದತೆಯನ್ನು ಸವಿಯುತ್ತಿದ್ದಾರೆ. ನಗುತ್ತಾ, ಪರಸ್ಪರ ಸಿಹಿ ತಿನಿಸುತ್ತಾ ಹಬ್ಬ ಆಚರಿಸುತ್ತಿದ್ದಾರೆ.

ಚಿರುವನ್ನೇ ನೋಡಿದಂತಾಗುತ್ತಿದೆ: ಚಿರು ಸರ್ಜಾ ತಾಯಿ

ಚಿರುವನ್ನೇ ನೋಡಿದಂತಾಗುತ್ತಿದೆ: ಚಿರು ಸರ್ಜಾ ತಾಯಿ

ಮೊಮ್ಮಗನನ್ನು ನೋಡಿದ ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ, ಮಾಧ್ಯಮಗಳೊಟ್ಟಿಗೆ ಮಾತನಾಡಿ, ತುಂಬಾ ಸಂತೋಶವಾಗಿದೆ. ನಾವು ಚಿರುವನ್ನೇ ಮತ್ತೆ ನೋಡುತ್ತಿದ್ದೇವೆ. ಇಷ್ಟು ದಿನ ನೋವು ತಿನ್ನುತ್ತಿದ್ದೆವು, ಇವತ್ತು ಸಂತೋಶವಾಗಿದೆ. ಚಿರು ಹುಟ್ಟಿದ್ದು ಸಹ ಇದೇ ತಿಂಗಳು, ಅವರ ನಿಶ್ಚಿತಾರ್ಥದ ದಿನವೇ ಮಗು ಹುಟ್ಟಿದೆ' ಎಂದಿದ್ದಾರೆ.

ನನ್ನ ಮಗನನ್ನು ಸಾಕು ಎಂದು ಕಳಿಸಿದ್ದಾನೆ: ಅಜ್ಜಿ ಲಕ್ಷ್ಮಿ

ನನ್ನ ಮಗನನ್ನು ಸಾಕು ಎಂದು ಕಳಿಸಿದ್ದಾನೆ: ಅಜ್ಜಿ ಲಕ್ಷ್ಮಿ

ಇನ್ನು ಚಿರು ಪ್ರೀತಿಯ ಅಜ್ಜಿ ಲಕ್ಷ್ಮಿ ಮಾತನಾಡಿ, 'ನಾನು ಹೋಗ್ತೀನಿ ನನ್ನ ಮಗನನ್ನು ಸಾಕು ಎಂದು ಚಿರು ಹೋಗಿದ್ದಾನೆ' ಎಂದು ಕಣ್ಣೀರು ಹಾಕಿದ್ದಾರೆ. ಮಗುವನ್ನು ಕೈಗೆ ಎತ್ತಿಕೊಂಡಾಗ ಕಣ್ಣೀರು ಬಂದು ಬಿಡ್ತು, ಚಿರು ಈಗ ಇದ್ದಿದ್ದರೆ ಆ ಸಂಭ್ರಮವೇ ಬೇರೆ ಇರುತ್ತಿತ್ತು, ಅವನ ಆಸೆಯಂತೆ ನಾವು ಅವನ ಮಗನನ್ನು ಬೆಳೆಸುತ್ತೇವೆ' ಎಂದಿದ್ದಾರೆ ಲಕ್ಷ್ಮಿ.

ಭಾವುಕರಾದ ಧೃವ ಸರ್ಜಾ

ಭಾವುಕರಾದ ಧೃವ ಸರ್ಜಾ

ಚಿರಂಜೀವಿ ಸರ್ಜಾ ಪುತ್ರನನ್ನು ಮೊದಲಿಗೆ ಎತ್ತಿಕೊಂಡ ಧೃವ ಸರ್ಜಾ ಅಂತೂ ತೀರಾ ಭಾವುಕಾದರಂತೆ. ಮಗುವನ್ನು ಎತ್ತಿಕೊಂಡಾಗ ಅಣ್ಣನೊಂದಿಗೆ ಇದ್ದ ಅನುಭವ ಆಯಿತು ಎಂದಿದ್ದಾರೆ ಧೃವ ಸರ್ಜಾ. ಪನ್ನಗಾಭರಣ ಸೇರಿದಂತೆ ಚಿರು-ಮೇಘನಾ ಗೆಳೆಯರು ಮಗುವನ್ನು ನೋಡಲು ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ.

More from Filmibeat

English summary
Chiranjeevi Sarja's mother and grand mother become emotional about Chiru's new baby. They said Chiru born again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X