twitter
    For Quick Alerts
    ALLOW NOTIFICATIONS  
    For Daily Alerts

    ಮೈನಾ ಚಿತ್ರತಂಡಕ್ಕೆ ಸಿವಿಲ್ ಕೋರ್ಟ್ ನೋಟೀಸ್

    By Rajendra
    |

    ಸುಗಮ ಸಂಗೀತ ಗಾಯಕ ದಿ.ಸಿ. ಅಶ್ವತ್ಥ್ ಅವರ "ಕಾಣದ ಕಡಲಿಗೆ ಹಂಬಲಿಸಿದೆ ಮನ" ಹಾಡನ್ನು ಕಾಪಿ ರೈಟ್ ಕಾಯಿದೆ ಉಲ್ಲಂಘಿಸಿ 'ಮೈನಾ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್ ಮೈನಾ ಚಿತ್ರತಂಡಕ್ಕೆ ನೋಟೀಸ್ ಜಾರಿ ಮಾಡಿದೆ.

    'ಕಾಣದ ಕಡಲಿಗೆ' ಹಾಡಿನ ಹಕ್ಕು ಸ್ವಾಮ್ಯವನ್ನು ಹೊಂದಿರುವ ಲಹರಿ ಆಡಿಯೋ ಕಂಪನಿಯ ಮಾಲೀಕ ಲಹರಿ ವೇಲು ಅವರು ಮೈನಾ ಚಿತ್ರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮೈನಾ ಚಿತ್ರದ ನಿರ್ದೇಶಕ ನಾಗಶೇಖರ್, ನಿರ್ಮಾಪಕ ರಾಜ್ ಕುಮಾರ್ ಮತ್ತು ಹಂಚಿಕೆದಾರರಾದ ಬಾದ್ ಷಾ ಅವರನ್ನು ಗುರುವಾರ (ಫೆ.21) ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿದೆ.

    ಏತನ್ಮಧ್ಯೆ ಮೈನಾ ಚಿತ್ರದ ನಿರ್ದೇಶಕರು ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೇಲು, ತಾನೇನು ತಪ್ಪು ಮಾಡಿಲ್ಲವೆಂದಾದರೆ ಕದ್ದುಮುಚ್ಚು ಕೇವಿಯಟ್ ಅರ್ಜಿ ಸಲ್ಲಿಸಿದ್ದಾದರು ಯಾಕೆ ಎಂದಿದ್ದಾರೆ. ರು.5 ಲಕ್ಷ ಪರಿಹಾರ ನೀಡುವಂತೆಯೂ ವೇಲು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಇದೇ ಶುಕ್ರವಾರ (ಫೆ.22) ಮೈನಾ ಚಿತ್ರ ಬಿಡುಗಡೆಯಾಗುತ್ತಿದೆ.

    ಚೇತನ್ ಕುಮಾರ್ ಹಾಗೂ ನಿತ್ಯಾ ಮೆನನ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಜೆಸ್ಸಿ ಗಿಫ್ಟ್ ಅವರ ಸಂಗೀತ ಹಾಗೂ ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸರಿಸುಮಾರು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕಿಂತಲೂ ನಾಗಶೇಖರ್ ನಿರ್ದೇಶನದ ಬಗ್ಗೆ ಹೆಚ್ಚು ಕುತೂಹಲವಿದೆ. (ಏಜೆನ್ಸೀಸ್)

    English summary
    Bangalore city civil court sent a notice to Kannada film Myana team. Film director Nagashekar facing trouble over copyright issues. The filmmaker has reportedly used a 20-year-old song called "Kaanda Kadalige Hambaliside Mana". The copyright of the song, then rendered by the late C Aswath, is said to be with audio company Lahari.
    Thursday, February 21, 2013, 10:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X