For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಕೆ.ಮಂಜು-ಪೊಲೀಸರ ನಡುವೆ ಮಾತಿನ ಚಕಮಕಿ?

  |

  ಸಣ್ಣ ವಿಷಯಕ್ಕೆ ನಿರ್ಮಾಪಕ ಕೆ.ಮಂಜು ಹಾಗೂ ಪೊಲೀಸರ ನಡುವೆ ಇಂದು ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

  ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

  ಇಂದು ನಿರ್ಮಾಪಕ ಕೆ.ಮಂಜು ಅವರು ಚಲಾಯಿಸುತ್ತಿದ್ದ ಬೈಕ್ ಅನ್ನು ಪೊಲೀಸರು ತಡೆದಿದ್ದು, ಆ ಸಂದರ್ಭದಲ್ಲಿ ಕೆ.ಮಂಜು ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

  ಪೊಲೀಸರ ವರ್ತನೆ ಬಗ್ಗೆ ಸಿಟ್ಟಾದ ಟಗರು ಮಾನ್ವಿತಾ ಪುಟ್ಟಿಪೊಲೀಸರ ವರ್ತನೆ ಬಗ್ಗೆ ಸಿಟ್ಟಾದ ಟಗರು ಮಾನ್ವಿತಾ ಪುಟ್ಟಿ

  ಕೆ.ಮಂಜು ಅವರು ಇಂದು ಮಧ್ಯಾಹ್ನ ತಮ್ಮ ಬೈಕ್ ನಲ್ಲಿ ಹೊರಗೆ ಬಂದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಪೊಲೀಸರು ಕೆ.ಮಂಜು ಅವರು ಬೈಕ್ ಅನ್ನು ತಡೆದು ಪ್ರಶ್ನೆ ಮಾಡಿದ್ದಾರೆ.

  ಗಾಡಿಯನ್ನು ಠಾಣೆಗೆ ಹೊತ್ತೊಯ್ದ ಪೊಲೀಸರು

  ಗಾಡಿಯನ್ನು ಠಾಣೆಗೆ ಹೊತ್ತೊಯ್ದ ಪೊಲೀಸರು

  ಇದರಿಂದ ಸಿಟ್ಟಾದ ಕೆ.ಮಂಜು ಪೊಲೀಸರಿಗೆ ತಮ್ಮ ಪರಿಚಯ ಹೇಳಿಕೊಂಡು ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ. ಪೊಲೀಸರು ಸಹ ಜೋರಾಗಿಯೇ ಮಾತನಾಡಿ ಮಂಜು ಅವರ ಗಾಡಿಯನ್ನು ಪೊಲೀಸ್ ಠಾಣೆಗೆ ಹೊತ್ತೊಯ್ದಿದ್ದಾರೆ.

  ಓಡಾಡದಂತೆ ಎಚ್ಚರಿಕೆ ನೀಡಿದ ಪೊಲೀಸರು

  ಓಡಾಡದಂತೆ ಎಚ್ಚರಿಕೆ ನೀಡಿದ ಪೊಲೀಸರು

  ಇದರಿಂದ ಇನ್ನಷ್ಟು ಸಿಟ್ಟಿಗೆ ಒಳಗಾದ ಕೆ.ಮಂಜು ಠಾಣೆಗೆ ಹೋಗಿ ಅಲ್ಲಿಯೂ ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ದಾಖಲೆಗಳನ್ನು ತೋರಿಸಿದ ನಂತರ ಪೊಲೀಸರು ಬೈಕ್ ಅನ್ನು ಬಿಟ್ಟು ಕಳುಹಿಸಿದ್ದಾರೆ. ಜೊತೆಗೆ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡದಂತೆ ಎಚ್ಚರಿಕೆ ಸಹ ನೀಡಿದ್ದಾರೆ.

  ಚಿರಂಜೀವಿ ಸರ್ಜಾ ಗೆ ಏನಾಯಿತು? ನಿರ್ಮಾಪಕ ಕೆ.ಮಂಜು ನೀಡಿದ ಮಾಹಿತಿಚಿರಂಜೀವಿ ಸರ್ಜಾ ಗೆ ಏನಾಯಿತು? ನಿರ್ಮಾಪಕ ಕೆ.ಮಂಜು ನೀಡಿದ ಮಾಹಿತಿ

  ಇನ್‌ಸ್ಪೆಕ್ಟರ್ ಪರಿಚಯ ಇದ್ದರು ಎಂದ ಮಂಜು

  ಇನ್‌ಸ್ಪೆಕ್ಟರ್ ಪರಿಚಯ ಇದ್ದರು ಎಂದ ಮಂಜು

  ಘಟನೆ ಬಗ್ಗೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಕೆ.ಮಂಜು ಮಧ್ಯಾಹ್ನದ ವೇಳೆ ಬ್ಯಾಂಕಿಗೆ ಹೋಗುವಾಗ ಪೊಲೀಸರು ವಾಹನ ಅಡ್ಡಗಟ್ಟಿದರು. ಪೊಲೀಸ್ ಇನ್‌ಸ್ಪೆಕ್ಟರ್ ನನಗೆ ಪರಿಚಯದವರೇ ಆಗಿದ್ದರು, ದಾಖಲೆ ಕೊಟ್ಟ ನಂತರ ಗಾಡಿ ಬಿಟ್ಟರು ಎಂದು ಹೇಳಿದ್ದಾರೆ.

  ಒಂದು ವಾರಗಳ ಕಾಲ ಲಾಕ್‌ಡೌನ್

  ಒಂದು ವಾರಗಳ ಕಾಲ ಲಾಕ್‌ಡೌನ್

  ಬೆಂಗಳೂರು ನಗರ ಸೇರಿ ರಾಜ್ಯದ 14 ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಓಡಾಡಲು ಅವಕಾಶ ನೀಡಲಾಗಿದ್ದು, 12 ಗಂಟೆ ನಂತರ ಓಡಾಡಿದರೆ ದಂಡ ವಿಧಿಸಲಾಗುತ್ತಿದೆ.

  ಕೊರೊನಾ ಗೆದ್ದು ಬಂದ ಧ್ರುವ ಸರ್ಜಾ ಹೇಳಿದ ಕಿವಿಮಾತುಕೊರೊನಾ ಗೆದ್ದು ಬಂದ ಧ್ರುವ ಸರ್ಜಾ ಹೇಳಿದ ಕಿವಿಮಾತು

  English summary
  Police stopped producer K Manju's vehicle today this leads to verble clash between police and K Manju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X