ಟಾಕ್ಸಿಕ್ VS ಧುರಂಧರ್ 2 ; ಮಾರ್ಚ್ 19- ಬಾಕ್ಸಾಫೀಸ್‌ನಲ್ಲಿ ಯಶ್‌ ವಿರುದ್ಧ ರಣವೀರ್ ಸಿಂಗ್ ಸಮರ

ಪ್ಯಾನ್ ಇಂಡಿಯಾ ಅಲೆಯಿಂದಾಗಿ ಬಾಲಿವುಡ್ ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್‌.ಟಿ.ಆರ್‌.. ರಿಷಬ್ ಶೆಟ್ಟಿ.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್‌ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ.

ತಮ್ಮದೇ ಆದ ಅಭಿಮಾನಿ ಬಳಗವನ್ನು ಉತ್ತರ ಭಾರತದಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣದ ಈ ಸ್ಟಾರ್‌ಗಳ ಹಾವಳಿಯನ್ನು ಕಂಡು ಅಲ್ಲಿನವರ ಬುಡಕ್ಕೆ ಬೆಂಕಿ ಬಿದ್ದಿದೆ. ಹೀಗಾಗಿಯೇ ಹೇಗಾದರು ಮಾಡಿ ಸೌತ್‌ ಸ್ಟಾರ್‌ಗಳನ್ನು ಮರಳಿ ಮನೆಗೆ ಕಳುಹಿಸಬೇಕೆಂದು ಶಪಥವನ್ನು ಬಾಲಿವುಡ್ ಮಾಡಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇದೀಗ ಯಶ್ ಎದುರು ಬಾಲಿವುಡ್ ರಣ್ವೀರ್ ಸಿಂಗ್ ಅವರನ್ನು ಕಣಕ್ಕಿಳಿಸುತ್ತಿದೆ.

CLASH OF TITANS Bollywood s Ranveer Singh vs Sandalwood s Yash Dhurandhar 2 Battles Toxic on Eid

ಹೌದು, ಇಂದು (ಡಿಸೆಂಬರ್ 5) ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ''ಧುರಂಧರ್'' ಬಿಡುಗಡೆಯಾಗಿದೆ. ಚಿತ್ರಕ್ಕೆ ಮೊದಲ ದಿನ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಚಿತ್ರದ ಅವಧಿ 3 ಗಂಟೆ 36 ನಿಮಿಷವಾದರೂ ಕೂಡ ವಿಮರ್ಷಕರು ಮಾತ್ರವಲ್ಲದೇ ಪ್ರೇಕ್ಷಕರು ಕೂಡ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ರಣವೀರ್ ಸಿಂಗ್ ಅವರ ಅಭಿನಯವನ್ನು ಕೊಂಡಾಡುತ್ತಿದ್ದಾರೆ.

ವಿಶೇಷ ಅಂದರೆ ಈ ''ಧುರಂಧರ್'' ಕಥೆ ಇನ್ನೂ ಮುಕ್ತಾಯವಾಗಿಲ್ಲ. ಚಿತ್ರದ ಕಥೆ ಮುಂದುವರೆಯಲಿದೆ. ಚಿತ್ರದ ಅಂತ್ಯದಲ್ಲಿ ಚಿತ್ರದ ಎರಡನೇ ಭಾಗವನ್ನು ಬಿಡುಗಡೆಯ ದಿನಾಂಕ ಸಮೇತ ಘೋಷಣೆ ಮಾಡಿದೆ. ''ಟಾಕ್ಸಿಕ್'' ಚಿತ್ರಕ್ಕೆ ಯಶ್ ಆಯ್ಕೆ ಮಾಡಿಕೊಂಡ ಮಾರ್ಚ್ 19ನೇ ತಾರೀಖನ್ನೇ ''ಧುರಂಧರ್'' ತಂಡ ಕೂಡ ಸೆಲೆಕ್ಟ್ ಮಾಡಿದೆ. ಈ ಮೂಲಕ ''ಟಾಕ್ಸಿಕ್'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ''ಧುರಂಧರ್ 2'' ನೇರಾ ನೇರ ಸವಾಲು ಹಾಕಲಿದೆ.

ಇನ್ನೂ ಮಾರ್ಚ್ 19ಕ್ಕೆ ಈ ಬಾರಿ ''ಈದ್'' ಹಬ್ಬ ಇದೆ. ನಾಲ್ಕು ದಿನದ ವೀಕೆಂಡ್ ಇರಲಿದೆ. ಈ ಹಿನ್ನೆಲೆ ಯಶ್ ತಮ್ಮ ''ಟಾಕ್ಸಿಕ್'' ಅಳೆದು ತೂಗಿ ಮಾರ್ಚ್ 19ಕ್ಕೆ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದರು. ಆದರೆ ಈಗ ''ಧುರಂಧರ್-2'' ಮೂಲಕ ರಣ್ವೀರ್ ಸಿಂಗ್ ಕೂಡ ಈದ್ ಹಬ್ಬಕ್ಕೆ ಸಿಗುವ ಲಾಂಗ್ ವೀಕೆಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆ ಬಾಕ್ಸಾಫೀಸ್‌ನ ಈ ಸಮರ ಕುತೂಹಲ ಕೆರಳಿಸಿದೆ.

ಹೀಗೆ ಮಾರ್ಚ್ 19ರಂದು ''ಟಾಕ್ಸಿಕ್'' ಮತ್ತು ''ಧುರಂಧರ್ 2'' ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಲಿವೆ. ಹಾಗಂಥ ಇವೆರಡು ಸಿನಿಮಾಗಳು ಮಾತ್ರ ಬಾಕ್ಸಾಫೀಸ್‌ನ ಮೈದಾನದಲ್ಲಿ ಇಲ್ಲ. ಬದಲಿಗೆ ಅವತ್ತೇ ಅಜಯ್ ದೇವಗನ್ ಅಭಿನಯದ ''ಧಮಾಲ್ -4'' ಚಿತ್ರವನ್ನು ಕೂಡ ಬಾಲಿವುಡ್‌ ಮಂದಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ.

CLASH OF TITANS Bollywood s Ranveer Singh vs Sandalwood s Yash Dhurandhar 2 Battles Toxic on Eid

ಇದರ ನಡುವೆ ಪಕ್ಕದ ಆಂಧ್ರದ ಸ್ಟಾರ್ ಅಡಿವಿ ಶೇಷ್ ಕೂಡ ತಮ್ಮ ''ಡಕೋಯಿಟ್: ಎ ಲವ್ ಸ್ಟೋರಿ'' ಚಿತ್ರವನ್ನು ಕೂಡ ''ಟಾಕ್ಸಿಕ್'' ಎದುರು ಬಿಡುಗಡೆ ಮಾಡುತ್ತಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. 2018ರಲ್ಲಿ, ಶಾರುಖ್ ಖಾನ್ ಅವರ 'ಝೀರೋ' ಚಿತ್ರದ ಎದುರು kGF- 1 ತೆರೆಕಂಡು ಗೆದ್ದಿತ್ತು. ಸಿನಿಮಾ ಮೇಕಿಂಗ್ ಪರಿಭಾಷೆಯನ್ನೇ ಅದು ಬದಲಿಸಿತ್ತು. ಆದರೆ ಆಗ 'KGF-1' ಚಿಕ್ಕ ಸಿನಿಮಾ ಆಗಿತ್ತು. ಈಗ ನನ್ನ ಸಿನಿಮಾ ಚಿಕ್ಕದು. ನಾನು ಚಿಕ್ಕವನಾಗಿಯೇ ಚಿತ್ರರಂಗಕ್ಕೆ ಬಂದವನು. ನನ್ನ ವೃತ್ತಿಜೀವನದಲ್ಲಿ ಸದಾ ಅಚ್ಚರಿಗೊಳಿಸುತ್ತಾ ಇರ್ತೀನಿ. ಅದು ನನಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಭಾವಿಸುತ್ತೇನೆ ಎಂದು ಕೂಡ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಮತ್ತು ಈದ್ ಹಬ್ಬದ ನಡುವೆ ವಿಶೇಷವಾದ ಸಂಬಂಧ ಇದೆ. ಈ ಹಬ್ಬದಂದು ತೆರೆಗೆ ಬಂದ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳು ಸೋಲನ್ನು ಕಂಡಿದ್ದು ತುಂಬಾನೇ ವಿರಳ. 'ಸಿಕಂದರ್' ಸೇರಿ ಕೆಲ ಚಿತ್ರಗಳಷ್ಟೇ ಸೋಲನ್ನು ಕಂಡಿವೆ. ಆದರೂ ಕೂಡ ಈದ್ ಸಲ್ಮಾನ್ ಖಾನ್‌ ಪಾಲಿಗೆ ತುಂಬಾ ಲಕ್ಕಿ ಎಂದೇ ಬಾಲಿವುಡ್ ಮಾತನಾಡಿಕೊಳ್ಳುತ್ತೆ. ಸಲ್ಮಾನ್ ಖಾನ್ ಕೂಡ ಈ ಮಾತನ್ನು ನಂಬುತ್ತಾರೆ. ಹೀಗಾಗಿ ಈ ಬಾರಿಯ ಈದ್ ಹಬ್ಬದಂದು ಸಲ್ಮಾನ್ ಖಾನ್ ತಮ್ಮ ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಹಾಗೊಂದು ವೇಳೆ ಈ ''ಬ್ಯಾಟಲ್ ಆಫ್ ಗಲ್ವಾನ್'' ಈದ್ ಹಬ್ಬದಂದು ಬಿಡುಗಡೆಯಾದರೆ ಬಾಕ್ಸಾಫೀಸ್‌ನ ಈ ಕದನ ರಣರೋಚಕವಾಗಿರಲಿದೆ. ದೊಡ್ಡ ಸ್ಟಾರ್‌ಗಳ ಎರಡು ಚಿತ್ರಗಳು ಒಟ್ಟಿಗೆ ಬಿಡುಗಡೆಯಾದರೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವ ಮಾತು ಚಿತ್ರಸಂತೆಯಲ್ಲಿ ಚಾಲ್ತಿಯಲ್ಲಿದೆ. ಹೀಗಿರುವಾಗ ಈ ಎಲ್ಲ ಸ್ಟಾರ್‌ಗಳ ಈ ಚಿತ್ರಗಳು ಒಂದೇ ದಿನ ಬಂದರೆ ಪ್ರೇಕ್ಷಕರು ಗೊಂದಲಕ್ಕೀಡಾಗುವುದು ಖಚಿತ. ಇವರಲ್ಲಿ ಈಗ ಯಾರು ಹಿಂದೆ ಸರಿಯುತ್ತಾರೆ..? ಯಾರು ಒಂದು ಹೆಜ್ಜೆ ಮುಂದಿಡುತ್ತಾರೆ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Makers used a post-credits scene to reveal the release date for Dhurandhar Part 2, cementing an epic showdown with Yash’s Toxic! Will Ranveer Singh conquer the box office against the KGF star? Find out everything about the clash.
Read more about: yash ranveer singh box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X