ಅಣ್ತಮ್ಮ ಎಂದು ದರ್ಶನ್ ಟಪ್ಪಾಂಗುಚಿ: 'ಹೋರಾಡುವ ಬಾ ಗೆಳೆಯಾ' ಎಂದ ಜೋಡೆತ್ತಿಗೆ ಕಥೆ ಬರೆದ ಅಭಿಮಾನಿ

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿಯ ಸಂಗೀತ್ ಕಾರ್ಯಕ್ರಮ ಬಹಳ ಜೋರಾಗಿ ನೆರವೇರಿದೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಂಬಿ ಮನೆಗೆ ಆಪ್ತರಾದ ದರ್ಶನ್ ಹಾಗೂ ಯಶ್ ಹಾಡಿ ಕುಣಿದು ಕೊಂಚ ಹೆಚ್ಚೇ ಸಂಭ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಜೋಡೆತ್ತು ಅನುಬಂಧ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೂರ್ನಾಲ್ಕು ಹಾಡುಗಳಿಗೆ ದರ್ಶನ್ ಹಾಗೂ ಯಶ್ ಒಟ್ಟಿಗೆ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಅದರಲ್ಲೂ ಸುಮಲತಾ ಅಂಬರೀಶ್ ಜೊತೆ ಸೇರಿ ಇಬ್ಬರು 'ಹೇ ಜಲೀಲ' ಸಾಂಗ್‌ಗೆ ಹೆಜ್ಜೆ ಹಾಕಿರುವ ವಿಡಿಯೋ ಬೆಳಗ್ಗೆಯಿಂದ ಭಾರೀ ಸದ್ದು ಮಾಡ್ತಿದೆ. ಅದಕ್ಕಿಂತ ಬೊಂಬಾಟ್ ಆಗಿರೋ ವಿಡಿಯೋಗಳು ಈಗ ಒಂದೊಂದಾಗಿ ರಿವೀಲ್ ಆಗ್ತಿದೆ. ಜಯಪ್ರದಾ, ಮಾಲಾಶ್ರೀ, ಗುರುಕಿರಣ್, ಶಿವಣ್ಣ, ಪ್ರಭುದೇವ ಸೇರಿದಂತೆ ಹಲವರು ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿದ್ದರು.

Club Abhiva: Darshan and Yash Dance At Abhishek- Avivas sangeet party

ಯಶ್ ಅವರನ್ನ ದರ್ಶನ್ ಜ್ಯೂನಿಯರ್ ಅಂತ್ಲೇ ಕರೆಯುತ್ತಾರೆ. ಯಶ್ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ದರ್ಶನ್ ಬೆಂಬಲವಾಗಿ ನಿಂತಿದ್ದರು. ಮಂಡ್ಯ ಲೋಕಸಭೆ ಚುನಾವಣೆ ವೇಳೆ ಇಬ್ಬರು ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದರು. ಊರೂರು ಸುತ್ತಾಡಿ ಮತಯಾಚನೆ ಮಾಡಿದ್ದರು. ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸುಮಲತಾ ಪರ ಪ್ರಚಾರಕ್ಕೆ ಹೊರಟ ವೇಳೆ ನಾವಿಬ್ಬರು ಜೋಡೆತ್ತು ಎಂದು ದರ್ಶನ್ ಹೇಳಿದ್ದರು.

ಅಣ್ತಮ್ಮ ಎಂದು ಕುಣಿದ ದರ್ಶನ್

ಯಶ್ ನಟನೆಯ 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಚಿತ್ರದ ಸೂಪರ್ ಹಿಟ್ ಅಣ್ತಮ್ಮ ಹಾಡಿಗೆ ಯಶ್ ಜೊತೆ ಸೇರಿ ದರ್ಶನ್ ಹೆಜ್ಜೆ ಹಾಕಿದ್ದಾರೆ. ಅಭಿ- ಅವಿ ಸಂಗೀತ್ ಪಾರ್ಟಿಯಲ್ಲಿ ಇವರಿಬ್ಬರ ಡ್ಯಾನ್ಸ್ ಹೈಲೆಟ್ ಆಗಿತ್ತು. ಅಣ್ತಮ್ಮ ಹಾಡಿಗೆ ದರ್ಶನ್, ಯಶ್ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಮಾಲಾಶ್ರೀ, ಸುಮಲತಾ, ಅಭಿಷೇಕ್, ರಾಕ್‌ಲೈನ್ ವೆಂಕಟೇಶ್ ಎಲ್ಲರೂ ಹೆಜ್ಜೆ ಸೇರಿಸಿದ್ದಾರೆ.

'ಹೋರಾಡುವ ಬಾ ಗೆಳೆಯಾ

'ಕಳ್ಳ ಕುಳ್ಳ' ಚಿತ್ರದ 'ಸ್ನೇಹ ಪ್ರೀತಿ ನನ್ನುಸಿರು' ಹಾಡಿಗೂ ಅಭಿ ಜೊತೆ ಸೇರಿ ದರ್ಶನ್ ಹಾಗೂ ಯಶ್ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ವೇಳೆ ಇಬ್ಬರು ಅನುಬಂಧ ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಟ್ರೆಂಡಿಂಗ್‌ನಲ್ಲಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದರ್ಶನ್- ಯಶ್ ಒಟ್ಟಿಗೆ ಓಡಾಡಿದ್ದು ನೋಡಿ ಇವರಬ್ಬರು ಒಟ್ಟಿಗೆ ಒಂದೇ ಸಿನಿಮಾ ನಟಿಸಿದರೆ ನೋಡಬೇಕು ಎಂದುಕೊಳ್ಳುತ್ತಿದ್ದಾರೆ. ಸದ್ಯ ಈ ಡ್ಯಾನ್ಸ್ ವಿಡಿಯೋಗಳು ಆ ಆಸೆಯನ್ನು ಹೆಚ್ಚಿಸಿವೆ.

Club Abhiva: Darshan and Yash Dance At Abhishek- Avivas sangeet party

ಜೋಡೆತ್ತು ಚಿತ್ರಕ್ಕೆ ಕಥೆ

ಸದ್ಯ 'ಸ್ನೇಹ ಪ್ರೀತಿ ನನ್ನುಸಿರು' ಎಂದು ಕುಣಿದಿರುವ ದರ್ಶನ್ - ಯಶ್ ನೋಡಿ ಅಭಿಮಾನಿಯೊಬ್ಬರು ಇಬ್ಬರೂ ಸೇರಿ ಒಟ್ಟಿಗೆ ನಟಿಸಿದರೆ ಹೇಗಿರುತ್ತೆ ಎಂದು ಊಹಿಸಿಕೊಂಡಿದ್ದಾರೆ. "ಬಿಗ್‌ಸ್ಕ್ರೀನ್‌ನಲ್ಲಿ ಯಶ್ ಮತ್ತು ದರ್ಶನ್ ಒಟ್ಟಿಗೆ ಇರುವುದನ್ನು ಊಹಿಸಿಕೊಳ್ಳಿ. ಆಕ್ಷನ್ ಸನ್ನಿವೇಶವೊಂದರಲ್ಲಿ ದರ್ಶನ್ ಗಾಯಗೊಂಡು ಬಿದ್ದಾಗ ಯಶ್ ರಕ್ಷಣೆಗಾಗಿ ಬಂದರೆ(ಅದಕ್ಕೂ ಮುನ್ನ ಯಶ್‌ನ ದರ್ಶನ್ ಕಾಪಾಡಿರುತ್ತಾರೆ) ಹೇಗಿರುತ್ತೆ? ಕೊನೆಗೆ ಇಬ್ಬರು ಸೇರಿ ವೈರಿಗಳ ವಿರುದ್ಧ ಯುದ್ಧಕ್ಕೆ ನಿಂತರೆ ಅದ್ಭುತವಾಗಿರುತ್ತದೆ. ಇನ್ನು ಇವರಿಬ್ಬರ ಒಂದಾದರೆ ಪೈಪೋಟಿ ಇರೋದೇ ಇಲ್ಲ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.

ಅಭಿ- ಅವಿವಾಗೆ ಸಲಹೆ

ಇನ್ನು ಸಂಗೀತ್ ಪಾರ್ಟಿಯಲ್ಲಿ ನವ ಜೋಡಿ ಅಭಿ ಹಾಗೂ ಅವಿವಾಗೆ ಯಶ್ ಹಾಗೂ ದರ್ಶನ್ ಸಲಹೆ ನೀಡಿರುವ ವಿಡಿಯೋ ಕೂಡ ವೈರಲ್ ಆಗ್ತಿದೆ. ಅಂಬರೀಶ್ ಎನ್ನುವ ಹೆಸರಿಗೆ ಯಾವತ್ತು ಧಕ್ಕೆ ತರಬೇಡ" ಎಂದು ಅವಿವಾ ಬಳಿ ದರ್ಶನ್ ಮನವಿ ಮಾಡಿದ್ದಾರೆ. ಇನ್ನು ಅಭಿಷೇಕ್‌ಗೆ ಯಶ್‌ ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ. ಒಟ್ಟಾರೆ ತಾರೆಯರೆಲ್ಲಾ ಒಂದೆಡೆ ಸೇರಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

More from Filmibeat

English summary
Club Abhiva: Darshan and Yash Dance At Abhishek- Aviva's sangeet party. Fan wrote Multistarrer Movie scene for Yash and Darshan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X