ಜ್ಯೂನಿಯರ್ ಅಭಿ, ಸೀನಿಯರ್ ದರ್ಶನ್ ಜುಗಲ್ಬಂದಿ: ಅಭಿವಾ ಮ್ಯಾರೇಜ್ ಪಾರ್ಟಿಯಲ್ಲಿ ಬಿಂದಾಸ್ ಸ್ಟೆಪ್ಸ್

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಪ್ರಸಾದ್ ಬಿದ್ದಪ್ಪ ಮಗಳು ಅವಿವಾ ಬಿದ್ದಪ್ಪ ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತ್ತು. ವಿವಿಧ ಕ್ಷೇತ್ರಗಳ ಗಣ್ಯರು ಈ ಶುಭ ಸಮಾರಂಭಕ್ಕೆ ಆಗಮಿಸಿ ಜೋಡಿಯನ್ನು ಹರಸಿದ್ದರು. ಸೋಮವಾರ ಮಾಂಗಲ್ಯಧಾರಣೆ ಹಾಗೂ ಬುಧವಾರ ಆರತಕ್ಷತೆ ಕಾರ್ಯಕ್ರಮ ಕಳೆಕಟ್ಟಿತ್ತು. ಮಂಡ್ಯದಲ್ಲಿ ಬೀಗರೂಟಕ್ಕೂ ಮುನ್ನ ಮತ್ತೊಂದು ಪಾರ್ಟಿ ನಡೆದಿದೆ.

ಖಾಸಗಿ ಹೋಟೆಲ್‌ನಲ್ಲಿ ಅಭಿ- ಅವಿವಾ ಮ್ಯಾರೇಜ್‌ ಪಾರ್ಟಿ ನಿನ್ನೆ(ಜೂನ್ 10) ಸಂಜೆ ಆಯೋಜಿಸಲಾಗಿತ್ತು. ಅಂಬಿ ಕುಟುಂಬದ ಸಾಕಷ್ಟು ಆಪ್ತರು ಈ ಕಲರ್‌ಫುಲ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬಹಳ ಅದ್ಧೂರಿಯಾಗಿ ನಡೆದ ಜಗಮಗ ಪಾರ್ಟಿಯಲ್ಲಿ ಅಭಿ- ಅವಿವಾ ಜೋಡಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಪಾರ್ಟಿಯ ಹೈಲೆಟ್ ಆಗಿತ್ತು. ಮರೂನ್ ಕಲರ್ ಸೂಟ್‌ನಲ್ಲಿ ದರ್ಶನ್ ಸ್ಪೆಷಲ್ ಅಟ್ರಾಕ್ಷನ್ ಆಗಿದ್ದರು.

Club Abhiva: Darshan Dance at Abhishek Ambareesh and Aviva Bidapa Marriage Party

ದರ್ಶನ್ ಸೂಟ್‌ ತೊಟ್ಟು ಪಾರ್ಟಿಗೆ ರೆಡಿಯಾಗಿದ್ದ ಫೋಟೊಗಳು ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಚ್ಚಿದಾನಂದ ಹಾಗೂ ಯಶಸ್ ಸೂರ್ಯ ಸೇರಿದಂತೆ ಆಪ್ತರ ಜೊತೆ ಸ್ಟೈಲಿಶ್ ಲುಕ್‌ನಲ್ಲಿ ದರ್ಶನ್ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಇದೀಗ ಸ್ಟೇಜ್‌ ಮೇಲೆ ಡ್ಯಾನ್ಸ್ ಮಾಡಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ.

Club Abhiva: Darshan Dance at Abhishek Ambareesh and Aviva Bidapa Marriage Party

ದರ್ಶನ್- ಅಭಿ ಬಿಂದಾಸ್ ಸ್ಟೆಪ್ಸ್

ಕ್ಲಬ್ ಅಭಿವಾ ಹೆಸರಿನಲ್ಲಿ ಈ ಮ್ಯಾರೇಜ್ ಪಾರ್ಟಿ ಆಯೋಜಿಸಲಾಗಿತ್ತು. ಖಾಸಗಿ ಹೋಟೆಲ್‌ ಹಾಲ್‌ನಲ್ಲಿ ನಡೆದ ಪಾರ್ಟಿಗೆ ಅಂಬಿ ಕುಟುಂಬದ ಕೆಲವೇ ಆಪ್ತರಿಗೆ ಆಮಂತ್ರಣ ಇತ್ತು. ವೇದಿಕೆಯಲ್ಲಿ ನವ ವಧು ವರರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದ್ದಾರೆ. ಅದರ ಸಣ್ಣ ವಿಡಿಯೋ ಝಲಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಜ್ಯೂನಿಯರ್- ಸೀನಿಯರ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲಿ ನೆರದಿದ್ದರು ಲೈವ್‌ನಲ್ಲಿ ಇಬ್ಬರ ಡ್ಯಾನ್ಸ್‌ ನೋಡಿ ಹುರಿದುಂಬಿಸಿ ಖುಷಿಪಟ್ಟಿದ್ದಾರೆ.

ಅಂದು ಅಂಬಿ- ದಚ್ಚು

'ಬುಲ್ ಬುಲ್' ಚಿತ್ರದ 'ಜ್ಯೂನಿಯರ್ ಸೀನಿಯರ್' ಸಾಂಗ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಚಿತ್ರದಲ್ಲಿ ತಂದೆ ಮಗನಾಗಿ ಅಂಬಿ ಹಾಗೂ ದರ್ಶನ್ ಕಾಣಿಸಿಕೊಂಡಿದ್ದರು. ಹಾಡಿನಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದರು. ಇದೀಗ ಅದೇ ಹಾಡಿಗೆ ವೇದಿಕೆ ಅಭಿ ಜ್ಯೂನಿಯರ್ ಆಗಿ ದರ್ಶನ್ ಸೀರಿಯರ್ ಡ್ಯಾನ್ಸ್ ಮಾಡಿದ್ದಾರೆ. ದರ್ಶನ್‌ನ ಜೋಡಿ ಅಭಿಮಾನಿಗಳು ನಮ್ ಬಾಸ್ ಜ್ಯೂನಿಯರೋ ಸೀನಿಯರೋ ಗೊತ್ತಾಗ್ತಿಲ್ಲ ಎಂದು ಕಾಮೆಂಟ್ ಮಾಡ್ತಿದ್ದಾರೆ.

ನೆಕ್ಲೆಸ್ ಗಿಫ್ಟ್ ಕೊಟ್ಟಿದ್ದ ದರ್ಶನ್

ಬುಧವಾರ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಅಭಿ- ಅವಿವಾ ಜೋಡಿಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಮಾಂಗಲ್ಯಧಾರಣೆ ದಿನ ದರ್ಶನ್ ಹಾಜರಾಗಿರಲಿಲ್ಲ. ಆದರೆ ಆರತಕ್ಷತೆ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ನವ ಜೋಡಿಗೆ ಶುಭ ಹಾರೈಸಿ ಭರ್ಜರಿ ಉಡುಗೊರೆ ನೀಡಿದ್ದರು. ಅವಿವಾಗೆ ಡೈಮಂಡ್ ನೆಕ್ಸೆಸ್ ಗಿಫ್ಟ್ ಮಾಡಿದ್ದರು. ಇದರ ಬೆಲೆ ಅಂದಾಜು 30ರಿಂದ 40 ಲಕ್ಷ ರೂ. ಎನ್ನಲಾಗಿತ್ತು.

ಮಂಡ್ಯದಲ್ಲಿ ಬೀಗರೂಟ

ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಂಬಿ ಕುಟುಂಬದಿಂದ ಬೀಗರ ಔತಣ ಕೂಟ ಏರ್ಪಡಿಸಲಾಗಿದೆ. ಕುಟುಂಬಸ್ಥರು, ಅತ್ಯಾಪ್ತರು ಹಾಗೂ ಅಭಿಮಾನಿಗಳಿಗೆ ಭರ್ಜರಿ ನಾನ್ ವೆಜ್ ಊಟ ಹಾಕಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಸುಮಾರು 1 ಲಕ್ಷ ಮಂದಿಗೆ ಅಂದು ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

More from Filmibeat

English summary
Club Abhiva: Darshan Dance at Abhishek Ambareesh and Aviva Bidapa Marriage Party. Abhi And Darshan Dance for Super hit junior senior song from Bulbul. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X