ಅವಿವಾ ಎದುರು ಮಂಡಿಯೂರಿ ಬೇಡಿಕೊಂಡ ದರ್ಶನ್: ಅಭಿಗೆ ಜೋಡೆತ್ತು ಸ್ವೀಟ್ ವಾರ್ನಿಂಗ್

ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ ಮದುವೆ, ಆರತಕ್ಷತೆ ಕಾರ್ಯಕ್ರಮದ ನಂತರ ಅದ್ಧೂರಿ ಸಂಗೀತ್ ಪಾರ್ಟಿ ನಡೆದಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಅವಿವಾ ಬಿದ್ದಪ್ಪ ತಂದೆ ಪ್ರಸಾದ್ ಬಿದ್ದಪ್ಪ ಆಪ್ತರಿಗಾಗಿ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ದರ್ಶನ್, ಯಶ್, ರಮ್ಯಾಕೃಷ್ಣ, ಮಾಲಾಶ್ರೀ, ಗುರುಕಿರಣ್, ಜಯಪ್ರದಾ, ಶಿವಣ್ಣ, ಪ್ರಭುದೇವಾ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು.

ಸೂಪರ್ ಹಿಟ್ ಸಾಂಗ್ಸ್‌ಗೆ ವೇದಿಕೆ ಮೇಲೆ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸುಮಲತಾ ಅಂಬರೀಶ್ ಜೊತೆ ಸೇರಿ ಕುಣಿದು ಎಂಜಾಯ್ ಮಾಡಿದ್ದಾರೆ. ಅಣ್ಣಾವ್ರ ಹಿಟ್ ಸಾಂಗ್ಸ್‌ಗೆ ಅಭಿಷೇಕ್, ತಾಯಿ ಸುಮಲತಾ ಜೊತೆ ಹೆಜ್ಜೆ ಹಾಕಿದ್ದಾರೆ. ಜೂನಿಯರ್, ಸೀನಿಯರ್ ಎಂದು ದರ್ಶನ್- ಅಭಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಮಾಲಾಶ್ರೀ, ರಮ್ಯಾಕೃಷ್ಣ ಎಲ್ಲರೂ ವೇದಿಕೆ ಮೇಲೆ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಖುಷಿಪಟ್ಟಿದ್ದಾರೆ.

Club Abhiva: Darshan, Yashs Advice to newly married couple Abhishek Ambareesh and Aviva

ಸೋಮವಾರ ಅಭಿ- ಅವಿವಾ ಮದುವೆ ಮಾಂಗಲ್ಯಧಾರಣೆ, ಬುಧವಾರ ಆತರಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರೂಟಕ್ಕೂ ಮುನ್ನ ಈ ಸಂಗೀತ್ ಪಾರ್ಟಿ ಆಯೋಜಿಸಲಾಗಿತ್ತು. ಕೆಲವೇ ಆಪ್ತರು ಈ ಕಲರ್‌ಫುಲ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ತಾರೆಯರು, ಆಪ್ತರು ಅಂಬಿ ಕುಟುಂಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕ್ಲಬ್ ಅಭಿವಾ ಹೆಸರಿನಲ್ಲಿ ಸಂಗೀತ್ ಪಾರ್ಟಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ನವ ಜೋಡಿಗೆ ದರ್ಶನ್ ಹಾಗೂ ಯಶ್ ಪ್ರೀತಿಯಿಂದ ಬುದ್ಧಿ ಮಾತು ಹೇಳಿದರು.

ಅವಿವಾ ಮಂಡಿವೂರಿದ ದರ್ಶನ್

ಇಬ್ಬರು ಅನ್ಯೋನ್ಯವಾಗಿ ಜೀವನ ಸಾಗಿಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು. ಅಂಬಿ ರೀತಿಯ ತಂದೆ ಸಿಗೋಕೆ ಯಾರಿಗೂ ಸಾಧ್ಯವಿಲ್ಲ. ಆ ಫ್ಯಾಮಿಲಿಗೆ ನೀನು ಹೋಗ್ತಿದ್ದಿಯಾ, ಎಲ್ಲಾ ಹೊಣೆ ನಿನ್ನದೇ, ನಮ್ಮ ಮನೆಯಲ್ಲಿ ಏನೇ ತೊಂದರೆಯಾದರೂ ಚೆನ್ನಾಗಿರಲ್ಲ. ಇನ್ನು ನನ್ನ ಕಳಕಳಿಯ ಮನವಿ. ಅಭಿ ಏನಾದರೂ ತಪ್ಪುಯ ಮಾಡಿದರೆ ನನಗೆ ಹೇಳು, ನಾನು ನೋಡಿಕೊಳ್ತೀನಿ. ಅಂಬರೀಶ್ ಎನ್ನುವ ಹೆಸರಿಗೆ ಯಾವತ್ತು ಧಕ್ಕೆ ತರಬೇಡ" ಎಂದು ಅವಿವಾ ಬಳಿ ಮಂಡಿಯೂರಿ ಕೇಳಿಕೊಂಡಿದ್ದಾರೆ.

ಅಭಿಗೆ ಯಶ್ ಸ್ವೀಟ್ ವಾರ್ನಿಂಗ್

ಅವಿವಾ ಜೊತೆ ಅವಿವಾ ಮಾತನಾಡಿದ ನಂತರ ಯಶ್ ಮೈಕ್ ತೆಗೆದುಕೊಂಡರು. ಅಭಿ, ಅವಿವಾ ಇಬ್ಬರನ್ನು ಬಳಿಗೆ ಕರೆದು "ದರ್ಶನ್ ಸರ್, ನಮ್ಮ ಹುಡುಗಿಗೆ ಹೇಳಿದರು, ಆದರೆ ಮೊದಲು ನಿನಗೆ ಹೇಳಬೇಕು. ಹೇಯ್, ನಮ್ಮ ಮನೆಗೆ ಒಂದು ಹುಡುಗಿ ಬಂದಿದೆ. ಲಕ್ಷ್ಮಿ ಬಂದಿದೆ. ನೋಡಮ್ಮ ನೀನು ಏನೇ ಮಾಡಿದರು, ನಿನ್ನ ತಪ್ಪಿರಲ್ಲ, ಇವನದ್ದೇ ತಪ್ಪು. ಅದು ನಮ್ಮ ಗ್ಯಾರೆಂಟಿ. ಮೊದಲು ನಿನಗೆ ಹೇಳಬೇಕು" ಎಂದು ಅಭಿಗೆ ಯಶ್ ಹೇಳಿದ್ದಾರೆ.

Club Abhiva: Darshan, Yashs Advice to newly married couple Abhishek Ambareesh and Aviva

ಮೈಕ್‌ಗಾಗಿ ಜೋಡೆತ್ತು ಕಿತ್ತಾಟ

ಅಭಿನ ಕರೆದು ಯಶ್ ಮಾತನಾಡುತ್ತಿದ್ದಂತೆ ಮತ್ತೆ ಮೈಕ್ ಕಿತ್ತುಕೊಂಡ ದರ್ಶನ್ "ಮನೆ ನಡೆಸೋದು ಹುಡುಗಿ. ಅಭಿನ ನಾವು ನೋಡಿಕೊಳ್ಳೋಣ ಬಿಡಿ ಎಂದರು. ನಂತರ ಯಶ್ ಮೈಕ್ ತೆಗೆದುಕೊಂಡು ಅಭಿಗೆ "ನೀನು ಎಲ್ಲೇ ಹೋದರು ಮನೆಗೆ ಬರಬೇಕು ಅಷ್ಟೇ ಸಲಹೆ" ಎಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ದರ್ಶನ್- ಯಶ್ ಡ್ಯಾನ್ಸ್

'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಸೂಪರ್ ಹಿಟ್ 'ಹೇ ಜಲೀಲ' ಹಾಡಿಗೆ ಯಶ್, ದರ್ಶನ್, ಸುಮಲತಾ ಅಂಬರೀಶ್ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ಸಹ ಸಖತ್ ವೈರಲ್ ಆಗ್ತಿದೆ. ದರ್ಶನ್ - ಯಶ್ ವೇದಿಕೆ ಮೇಲೆ ಹೆಜ್ಜೆ ಹಾಕಿ ಬಹಳ ದಿನಗಳಾಗಿತ್ತು. ಇನ್ನು ಇಬ್ಬರು ಇದೇ ಮೊದಲ ಬಾರಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಜೂನ್ 16ಕ್ಕೆ ಮಂಡ್ಯದಲ್ಲಿ ಅಂಬಿ ಕುಟುಂಬ ಅಭಿಮಾನಿಗಳಿಗಾಗಿ ಬೀಗರೂಟ ಆಯೋಜನೆ ಮಾಡ್ತಿದೆ.

More from Filmibeat

English summary
Club Abhiva: Darshan, Yash's Advice to newly married couple Abhishek Ambareesh and Aviva. Yash Sweet Sweet Warning To Abhishek Ambareesh. knwo more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X