twitter
    For Quick Alerts
    ALLOW NOTIFICATIONS  
    For Daily Alerts

    1 ಕೋಟಿ 20 ಲಕ್ಷ ರೂ ಖರ್ಚಿನಲ್ಲಿ ನಿರ್ಮಿಸಿದ ಲೀಲಾವತಿ ಆಸ್ಪತ್ರೆ ಲೋಕಾರ್ಪಣೆ

    |

    ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ಹಿರಿಯ ನಟಿ ಲೀಲಾವತಿ ಅವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಪುತ್ರ ವಿನೋದ್‌ ರಾಜ್‌ ಅವರೊಂದಿಗೆ ನೆಲೆಸಿರುವ ಅವರು ಕೃಷಿ, ಹೈನುಗಾರಿಕೆ ತೋಟಗಾರಿಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಜನರಿಗೆ ತಮ್ಮಿಂದಾದ ಸಹಾಯ ಹಸ್ತವನ್ನು ಚಾಚುತಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಜನರಿಗೆ ನೆರವಾಗಿದ್ದ ಲೀಲಾವತಿ ಹಾಗೂ ವಿನೋದ್‌ ರಾಜ್‌ ಸದ್ಯ ಸಮಾಜಕ್ಕೆ ಉತ್ತಮ ಉಡುಗೊರೆ ನೀಡಿದ್ದಾರೆ.

    ಹಿರಿಯ ನಟಿ ಲೀಲಾವತಿ ಅವರ ಬಹುದಿನ ಕನಸು ಇಂದು(ಸಪ್ಟೆಂಬರ್‌ 28) ನನಸಾಗಿದ್ದು, ನಟಿ ಸಂತೋಷ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನೆಲಮಂಗಲದ ಹತ್ತಿರದ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದ್ದಾರೆ. ಸೋಲದೇವನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಡಾ.ಎಂ ಲೀಲಾವತಿ ಆಸ್ಪತ್ರೆ ಇಂದು ಲೋಕಾರ್ಪಣೆಗೊಂಡಿದೆ.

    ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಲ್ಲಿದ್ದ ಹಿರಿಯ ನಟಿ ಲೀಲಾವತಿ, ಬಡ ಜನರಿಗೆ ಉಪಯೋಗವಾಗಲಿ ಎಂದು ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ತಾವು ಈ ಖರೀದಿಸಿಟ್ಟಿದ್ದ ಚೈನೈನಲ್ಲಿದ್ದ ಜಮೀನನ್ನು ಮಾರಿ ಬಂದ ಹಣದಲ್ಲಿ ಹಿರಿಯ ನಟಿ ಈ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಈ ಆಸ್ಪತ್ರೆ ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಕರ್ನಾಟಕ ಸಚಿವ ಸಂಪುಟದ ಸಚಿವರಾಗಿದ್ದ ಉಮೇಶ್‌ ಕತ್ತಿ ಅವರ ನಿಧನದಿಂದ ಕಾರ್ಯಕ್ರಮ ಮುಂದೂಡಲಾಗಿತ್ತು.

    CM Basavaraj Bommai Inaugurated Senior Actress Leelavathis Hospital

    ಇಂದು (ಸಪ್ಟೆಂಬರ್‌ 28) ಆ ಅಮೃತ ಘಳಿಗೆಗೆ ಸಮಯ ಕೂಡಿ ಬಂದಿದ್ದು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಆಸ್ಪತ್ರೆ ಉದ್ಘಾಟಿಸಿದರು. ಬಳಿಕ ತಮ್ಮ ಈ ವಯಸ್ಸಿನಲ್ಲೂ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಲೀಲಾವತಿಯವರನ್ನು ಸಿಎಂ ಮನಸಾರೆ ಹೊಗಳಿದ್ದಾರೆ. ಲೀಲಾವತಿ ಅವರು ಚಿತ್ರರಂಗದ ಎವರ್‌ಗ್ರೀನ್ ಕಲಾವಿದೆ. ಹಲವು ಸವಾಲುಗಳನ್ನು ಎದುರಿಸಿ ಲೀಲಾವತಿ ಅವರಯ ಬದುಕು ನಡೆಸಿದ್ದಾರೆ. ಅವರು ನೂರು ಕಾಲ ಸುಖವಾಗಿ ಬಾಳಬೇಕು ಎಂದರು. ತಮ್ಮ ಕನಸು ನನಾಸದ ಖುಷಿಯಲ್ಲಿದ್ದ ನಟಿ ಲೀಲಾವತಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಬಳಿ ಸೋಲದೇವನಹಳ್ಳಿಯಲ್ಲಿ ಒಂದು ಪಶು ಆಸ್ಪತ್ರೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಹಿರಿಯ ನಟಿಯ ಮನವಿಗೆ ಸ್ಪಂದಿಸಿರುವ ಸಿಎಂ ಈ ಬಗ್ಗೆ ಕೂಡಲೇ ಕ್ರಮವಹಿಸುವ ಭರವಸೆ ನೀಡಿದ್ದಾರೆ.

    ತಾಯಿಯ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗುತ್ತಿರುವ ನಟ ವಿನೋದ್‌ ರಾಜ್‌ ಆಸ್ಪತ್ರೆ ಲೋಕಾರ್ಪಣೆಗೊಂಡಿರುವುದಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ನಮ್ಮ ತಾಯಿ 1 ಕೋಟಿ 20 ಲಕ್ಷ ರೂ ಖರ್ಚು ಮಾಡಿ ಈ ಆಸ್ಪತ್ರೆ ಕಟ್ಟಿದ್ದಾರೆ. ಸೋಲದೇವನಹಳ್ಳಿಯ ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಂದಿನಿಂದಲೇ ಆಸ್ಪತ್ರೆ ಜನರ ಸೇವೆಗೆ ಮುಕ್ತವಾಗಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಕನ್ನಡ ಚಿತ್ರದಲ್ಲಿ ತಮ್ಮದೇ ಹೆಗ್ಗುರುತು ಮೂಡಿಸಿರುವ ನಟಿ ಲೀಲಾವತಿ ಅವರಿಗೆ ಈ ಹಿಂದೆ ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಡಾ. ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಿತ್ತು. ನಟನೆ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಲೀಲಾವತಿ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ನಟಿಯಾಗಿ ಅಷ್ಟೇ ಅಲ್ಲದೆ ತಮ್ಮ ಸರಳ ಸಜ್ಜನಿಕೆಯಿಂದಲೂ ಲೀಲಾವತಿ ಕನ್ನಡಗರ ಮನ ತಲುಪಿದ್ದಾರೆ. ಬಡವರಿಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಿಸಿರುವ ಹಿರಿಯ ನಟಿ ಲೀಲಾವತಿ ಅವರ ಕಾರ್ಯಕ್ಕೆ ಕನ್ನಡಿಗರು ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    English summary
    Sandalwood Senior Actress Leelavathi Built a hospital in her own expenses.
    Wednesday, September 28, 2022, 19:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X