twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳಿಗೆ 100% ಅವಕಾಶ ಕೊಡುವಂತೆ ಮನವಿ: ಸಿಎಂ ಹೇಳಿದ್ದೇನು?

    |

    50 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ಕೊಟ್ಟಿರುವುದರಿಂದ ಯಾವುದೇ ಹೊಸ ಸಿನಿಮಾ ಬಿಡುಗಡೆ ಮಾಡಿಲ್ಲ. ದಯವಿಟ್ಟು 100% ಆಸನ ಭರ್ತಿಗೆ ಅನುಮತಿ ಕೊಡಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

    ಫಿಲಂ ಚೇಂಬರ್ ಸದಸ್ಯರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ತಜ್ಞರ ವರದಿ ಮತ್ತು ಸಲಹಾ ಸಮಿತಿಯ ಸೂಚನೆ ಮೆರೆಗೆ ಆದಷ್ಟೂ ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

    ಗಾಯದ ಮೇಲೆ ಬರೆ ಎಳೆದಂತಾಯಿತು ಚಿತ್ರಮಂದಿರ ಮಾಲೀಕರ ಕಥೆಗಾಯದ ಮೇಲೆ ಬರೆ ಎಳೆದಂತಾಯಿತು ಚಿತ್ರಮಂದಿರ ಮಾಲೀಕರ ಕಥೆ

    ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ''ಸಿನಿಮಾ ಇಂಡಸ್ಟ್ರಿಯವರು 100 ಪರ್ಸೆಂಟ್‌ಗೆ ಅನುಮತಿ ಕೊಡಿ ಎಂದು ಮನವಿ ಮಾಡಿದರು. ಕೋವಿಡ್ 3ನೇ ಅಲೆ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ತಕ್ಷಣ ಏನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಗಡಿಪ್ರದೇಶಗಳಿಗೆ ಭೇಟಿ ಕೊಡ್ತಿದ್ದೇನೆ, ಅಲ್ಲಿಂದ ಬಂದ ನಂತರ ತಜ್ಞರ ಜೊತೆ ಚರ್ಚೆ ಮಾಡಿ ಆಮೇಲೆ ತೀರ್ಮಾನ ಮಾಡುತ್ತೇನೆ'' ಎಂದು ತಿಳಿಸಿದರು.

    CM Basavaraj Bommai Refused to Promise 100% Occupancy in film Theatres Immediately

    ಕೃಷ್ಣಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್, ಮಾಜಿ ಸಾರಾ ಗೋವಿಂದು, ಸದಸ್ಯರಾದ ಎನ್‌ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ, ಕೆ ಮಂಜು, ನಟಿ ತಾರಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಾರಾ ಗೋವಿಂದು, ''ಕಳೆದ ಎರಡು ವರ್ಷಗಳಿಂದ ಚಿತ್ರರಂಗದ ಸಮಸ್ಯೆ ಎದುರಿಸುತ್ತಿದೆ. ಈಗ 50 ಪರ್ಸೆಂಟ್ ಇರುವುದರಿಂದ ಯಾವುದೇ ಹೊಸ ಸಿನಿಮಾ ಬರ್ತಿಲ್ಲ. ದೊಡ್ಡ ಬಜೆಟ್ ಚಿತ್ರಗಳ ಥಿಯೇಟರ್‌ಗೆ ಬಂದರೆ ಹೊಸಬರ ಸಿನಿಮಾಗಳಿಗೂ ಸಹಾಯವಾಗುತ್ತದೆ. ಹಾಗಾಗಿ, 100 ಪರ್ಸೆಂಟ್ ಅವಕಾಶ ಕೊಡಿ'' ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

    ಕಳೆದ ಏಪ್ರಿಲ್ ತಿಂಗಳಲ್ಲಿ ಎರಡನೇ ಅಲೆಯ ಭೀತಿಯಿಂದ ಲಾಕ್‌ಡೌನ್ ಮಾಡಲಾಗಿತ್ತು. ಅಲ್ಲಿಂದ ಚಿತ್ರಮಂದಿರಗಳು ಮುಚ್ಚಲ್ಪಟ್ಟವು. ಜುಲೈ 19 ರಂದು ಚಿತ್ರಮಂದಿರಗಳು 50 ಪರ್ಸೆಂಟ್ ಅನುಮತಿಯೊಂದಿಗೆ ಕಾರ್ಯನಿರ್ವಹಿಸಲು ಸರ್ಕಾರ ಒಪ್ಪಿಗೆ ಕೊಟ್ಟಿದೆ. ಆದರೆ, ಕಲಿವೀರ ಎನ್ನುವ ಸಿನಿಮಾ ಬಿಟ್ಟರೆ ಬೇರೆ ಯಾವ ಚಿತ್ರವೂ ಈ ಅವಧಿಯಲ್ಲಿ ಬಿಡುಗಡೆಯಾಗಿಲ್ಲ. ಹಾಗಾಗಿ, 100 ಪರ್ಸೆಂಟ್‌ಗೆ ಅವಕಾಶ ಕೋರಿದ್ದಾರೆ.

    English summary
    CM basavaraj bommai refused to promise 100% occupancy in film theatres immediately. Said he will take a decision after his tour of border districts.
    Wednesday, August 11, 2021, 22:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X