twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ನೀನು ಓದಿಲ್ಲ ಆದರೂ ಐಕಾನ್: ಸಿಎಂ ಬಸವರಾಜ್ ಬೊಮ್ಮಾಯಿ

    |

    ಗುಣಮಟ್ಟದ ಶಿಕ್ಷಣಕ್ಕೆ ಡಾ.ರಾಜ್ ಕುಮಾರ್ ಅಕಾಡೆಮಿ ಮತ್ತೊಂದು ಹೆಜ್ಜೆ ಇಟ್ಟಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಮಕ್ಕಳ ಶಿಕ್ಷಣ ದೊಡ್ಡ ಸಮಸ್ಯೆಯಾಗಿದೆ. ಸರಿಯಾದ ಶಿಕ್ಷಣ ಸಿಗದೆ ಮಕ್ಕಳು ಪರದಾಡುವಂತಾಗಿದೆ. ಇಂಥ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ನೆರವಿಗೆ ನಿಂತಿದೆ ಡಾ.ರಾಜ್ ಕುಮಾರ್ ಅಕಾಡೆಮಿ. ಶಿಕ್ಷಣ ಕ್ರಾಂತಿಗೆ ಮುಂದಾಗಿರುವ ಡಾ.ರಾಜ್ ಕುಮಾರ್ ಅಕಾಡೆಮಿ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಹೊಸ ಆಪ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿ ಇತ್ತೀಚಿಗಷ್ಟೆ ಲೋಕಾರ್ಪಣೆ ಮಾಡಿದ್ದಾರೆ.

    Recommended Video

    ಅಪ್ಪನ ಆಸೆ ಬೆನ್ನೆಲುಬಾಗಿ ನಿಂತ ಪುನೀತ್

    ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಹಾಜರಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಯುವ ರಾಜ್ ಕುಮಾರ್ ಸೇರಿದ್ದಂತೆ ಅನೇಕರು ಹಾಜರಿದ್ದರು. ಆಪ್ ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ.

    "ಪುನೀತ್ ರಾಜ್ ಕುಮಾರ್ ಓದಿಲ್ಲ ಎಂದರೂ ಜ್ಞಾನ ಇದೆ. ಫಾರ್ಮಲ್ ಶಿಕ್ಷಣ ಮುಖ್ಯವಲ್ಲ, ಜ್ಞಾನ ತುಂಬಾ ಮುಖ್ಯ. ಶಿಕ್ಷಣಕ್ಕಿಂತ ಜ್ಞಾನ ಮುಖ್ಯ. ನೀನು ಐಕಾನ್" ಎಂದು ಹೇಳಿದ್ದಾರೆ. ಇದೇ ವೇಳೆ ಪರಮಹಂಸ ಕಥೆಯನ್ನು ಹೇಳಿ ಆಪ್ ಮಹತ್ವ ಏನು ಎನ್ನುವುದನ್ನು ಸಿಎಂ ಬೊಮ್ಮಾಯಿ ವಿವರಿಸಿದರು. ಮುಂದೆ ಓದಿ..

    ಪರಮಹಂಸ ಕಥೆ ಹೇಳಿದ ಬೊಮ್ಮಾಯಿ

    ಪರಮಹಂಸ ಕಥೆ ಹೇಳಿದ ಬೊಮ್ಮಾಯಿ

    "ನೀನು ಏನು ಮಾಡುತ್ತಿದ್ದಿಯ ಅಂತ ನಿನಗೆ ಗೊತ್ತಿಲ್ಲ. ನೀನು ಕೂಡ ತಾತನ ಹಾಗೆ ಮುದ್ಧ ಇದಿಯ. ನೀನು ಏನು ಮಾಡಿಯ ಎಂದರೆ, ಆಪ್ ಅಂದರೆ ವಾಹನ, ಇದು ಎಲ್ ಬೇಕಾದರೂ ಹೋಗುತ್ತೆ, ರೀಚ್ ಆಗುತ್ತೆ. ಪರಮಹಂಸ ಅಂದರೆ ಸರಸ್ವತಿಯ ವಾಹನ. ನೀನು ಪರಮಹಂಸವನ್ನು ಕ್ರಿಯೆಟ್ ಮಾಡಿದ್ದೀಯಾ. ಪರಮಹಂಸದ ಬ್ಯೂಟಿ ಎಂದರೆ, ಎಲ್ಲಾ ಹಕ್ಕಿಗಳು ಹಾರುತ್ತವೆ. ಆದರೆ ಪರಮಂಹಸ ಅದರ ನೂರು ಪಟ್ಟು ಎತ್ತರ ಹಾರುತ್ತೆ. ಪರಮಹಂಸ ಅತೀ ಹೆಚ್ಚು ಭಾರ ಇರುವ ಹಕ್ಕಿ. ಅದರೂ ಅತೀ ಹೆಚ್ಚು ಹಾರುತ್ತದೆ. ಮತ್ತು ಅದು ಶ್ವೇತ ಬಣ್ಣದಲ್ಲಿ ಇರುತ್ತದೆ. ಇಂದು ನೀನು ಸರಸ್ವತಿ ವಾಹನ ಸೃಷ್ಟಿ ಮಾಡಿದ್ದೀಯ" ಎಂದಿದ್ದಾರೆ.

    ಅಪ್ಪು ಡೋಂಟ್ ವರಿ, ನೀನು ಐಕಾನ್

    ಅಪ್ಪು ಡೋಂಟ್ ವರಿ, ನೀನು ಐಕಾನ್

    "ಅದು ಮಾನಸಸರೋವರದ ಎತ್ತರಕ್ಕೆ ಹೋಗಲಿ ಎಂದು ಕೇಳಿಕೊಳ್ಳುತ್ತೇನೆ. ಅಪ್ಪು ನೀನು ಇದಕ್ಕೆ ಬ್ರಾಂಡ್ ಅಂಬಾಸಿಡರ್. ಅಪ್ಪು ಡೋಂಟ್ ವರಿ, ನೀನು ಕಲಿಯದಿದ್ದರೂ, ಫಾರ್ಮಲ್ ಶಿಕ್ಷಣ ಮುಖ್ಯವಲ್ಲ. ಜ್ಞಾನ ತುಂಬಾ ಮುಖ್ಯ. ಶಿಕ್ಷಣಕ್ಕಿಂತ ಜ್ಞಾನ ಮುಖ್ಯ. ನೀನು ಐಕಾನ್. ಈಗ ಓದು ಎಂದರೆ ಸಾಕು" ಎಂದು ಹೇಳಿದ್ದಾರೆ.

    ಡಾ.ರಾಜ್ ಕುಮಾರ್ ಸಾಧನೆ ಬಗ್ಗೆ ಬೊಮ್ಮಾಯಿ ಮಾತು

    ಡಾ.ರಾಜ್ ಕುಮಾರ್ ಸಾಧನೆ ಬಗ್ಗೆ ಬೊಮ್ಮಾಯಿ ಮಾತು

    "ಇದೇ ಸಮಯದಲ್ಲಿ ಡಾ.ರಾಜ್ ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ. ಡಾ.ರಾಜ್ ಎಂದರೆ ಸಾಧಕ. ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕುತ್ತಾನೆ. ಶ್ರೀಮಂತ ಬದುಕನ್ನು ಬದುಕಬೇಕು ಎಂದರೇ ಸಾವಿನ ಬಳಿಕವೂ ಬದಕಬೇಕು ಹಾಗೆ ಬದುಕಬೇಕು. ಅಂತ ಸಾಧನೆ ಮಾಡಿದ ಕರ್ನಾಟಕದ ಏಕಮಯ ಸ್ಟಾರ್, ಸ್ಟಾರ್ ಎಂದರೆ ಸಿನಿಮಾ ಸ್ಟಾರ್ ಅಲ್ಲ, ಆಕಾಶದಲ್ಲಿ ಇರುವ ನಕ್ಷತ್ರ ರಾಜ್" ಎಂದು ಹೇಳಿದ್ದಾರೆ.

    ಡಾ.ರಾಜ್ ಕುಮಾರ್ ಗುಣವನ್ನು ನಾವು ಕಲಿಯಬೇಕು

    ಡಾ.ರಾಜ್ ಕುಮಾರ್ ಗುಣವನ್ನು ನಾವು ಕಲಿಯಬೇಕು

    "ಅದರಲ್ಲೂ ನಾವು ಅಧಿಕಾರದಲ್ಲಿದ್ದವರು ರಾಜ್ ಕುಮಾರ್ ಗುಣಗಳನ್ನು ಕಲಿಯಬೇಕು. ರಾಜ್ ಕುಮಾರ್ ಅಷ್ಟು ಹಂಬಲ್ ಆಗಿರೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರಾಜ್ ಕುಮಾರ್ ಒಬ್ಬ ವಿದ್ಯಾರ್ಥಿ. ಪ್ರತಿ ಕ್ಷಣದಲ್ಲೂ ಕಲಿಯುವ ಹಂಬಲ ಇತ್ತು. ಅವರಲ್ಲಿ ಮುಗ್ಧತೆ ಎಂದೂ ಕಡಿಮೆ ಆಗಿರಲಿಲ್ಲ" ಎಂದು ಹೇಳಿದರು.

    ಜ್ಞಾನದ ಕ್ಷೇತ್ರಕ್ಕೆ‌ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸೇರ್ಪಡೆ

    ಜ್ಞಾನದ ಕ್ಷೇತ್ರಕ್ಕೆ‌ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸೇರ್ಪಡೆ

    "ಅವರ ರಿಯಲ್‌ ಕ್ಯಾರೆಕ್ಟರ್ ಬಹಳ ದೊಡ್ಡದು. ಅದನ್ನ ಅರ್ಥ ಮಾಡಿಕೊಳ್ಳೊದು ಕಷ್ಟ. ನೀವು ಮಕ್ಕಳಿಗೆ ಜ್ಞಾನ. ಈಗಿನ ಪ್ರಪಂಚದಲ್ಲಿ ಜ್ಞಾನ ಇದ್ದೋರಿಗೆ ಮಾತ್ರ‌ ಎಲ್ಲವೂ ಸಿಗುತ್ತೆ. ಜ್ಞಾನಕ್ಕೆ ದೊಡ್ಡ ಬೆಲೆ ಇದೆ. ಜ್ಞಾನದ ಕ್ಷೇತ್ರಕ್ಕೆ‌ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸೇರಿದೆ. ಇದು ದೊಡ್ಡ ಸಾಧನೆ" ಎಂದರು.

    English summary
    CM Basavaraj Bommai speaks about Power star Puneeth Rajkumar.
    Tuesday, August 17, 2021, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X