twitter
    For Quick Alerts
    ALLOW NOTIFICATIONS  
    For Daily Alerts

    11ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಸಿಎಂ

    |

    2019ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದಾರೆ. ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಕಾರ್ಯಕ್ರಮ ನಡೆದಿದೆ.

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ನಟ ಅನಂತ್ ನಾಗ್ ಹಾಗೂ ರಾಹುಲ್ ರವೈಲ್ ಆಗಮಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಬಾರಿಯ ಚಲನಚಿತ್ರೋತ್ಸವ ನಡೆದಿದೆ. ನಟಿ ಹರ್ಷಿಕಾ ಪೂಣಚ್ಚ ಸಹ ಹಾಜರಿದ್ದರು.

    ಫೆಬ್ರವರಿ 21 ರಿಂದ ಫೆಬ್ರವರಿ 28ರ ವರೆಗೆ ಚಲನಚಿತ್ರೋತ್ಸವ ನಡೆಯಲಿದೆ. ಬಾಂಬ್, ಎ ಲವ್ ಸ್ಟೋರಿ ( ಇರಾನ್, ಪರ್ಷಿಯನ್ ಭಾಷೆಯ) ಚಿತ್ರವನ್ನ ಚಿತ್ರೋತ್ಸವದ ಮೊದಲನೆಯ ಚಿತ್ರವಾಗಿ ಇಂದು ಪ್ರದರ್ಶನ ಮಾಡಲಾಗುತ್ತಿದೆ. ಒಟ್ಟು ಸುಮಾರು 225 ಚಿತ್ರಗಳು ಪ್ರದರ್ಶನವಾಗಲಿವೆ.

    cm kumaraswamy Inaugurated 11th bengaluru international film festival

    ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್ ನಾಗ್ ''ಬೆಂಗಳೂರಿನ ಯುವತಿ ಯುವಕರು ಈ‌ ಚಿತ್ರೋತ್ಸವದಲ್ಲಿ ಭಾಗವಹಿಸಿ ಸ್ಪೂರ್ತಿ ಪಡೆಯಲಿ. ನಿರ್ಮಾಪಕರಿಗೆ ಕಷ್ಟಗಳು ಇವೆ ಅಂತ ನಾಗತಿಹಳ್ಳಿ ಅವರು ಸಿಎಂ ಮುಂದೇ ಇಟ್ಟಿದ್ದಾರೆ. ಅವರು ಆ ಸಮಸ್ಯೆಗಳನ್ನ ಬಗೆಹರಿಸುತ್ತಾರೆ ಅನ್ನುವ ನಂಬಿಕೆ ನನಗಿದೆ. ಕುಮಾರಸ್ವಾಮಿ 20 ತಿಂಗಳು ಸಿಎಂ ಆಗಿದ್ದಾಗ ನನಗೆ ಅವರ ಜತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ ಈಗ ಸಿಕ್ಕಿದೆ.'' ಎಂದು ಸಂತಸ ವ್ಯಕ್ತ ಪಡಿಸಿದರು.

    English summary
    CM Kumaraswamy Bangalore Inaugurated 11h International Film Festival today (February 21st)
    Thursday, February 21, 2019, 20:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X