Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ 'ಜೋಡೆತ್ತುಗಳ' ಕಾಲೆಳೆದ ಸಿಎಂ ಕುಮಾರಸ್ವಾಮಿ
Recommended Video

ಮಂಡ್ಯದಲ್ಲಿ ಮೂರನೇ ದಿನ ನಟ ದರ್ಶನ್ ಮತ್ತು ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಸ್ಟಾರ್ ನಟರ ಪ್ರಚಾರದಿಂದ ಮಂಡ್ಯ ಕಣದ ರಂಗು ಹೆಚ್ಚಾಗಿದ್ದು, ಎಲ್ಲಿ ನೋಡಿದ್ರೂ ಜನಸಾಗರ ಕಾಣ್ತಿದೆ. ಇದು ಸಹಜವಾಗಿ ಎದುರಾಳಿ ಅಭ್ಯರ್ಥಿಗೆ ಆತಂಕ ಸೃಷ್ಟಿಸಿರುತ್ತೆ.
ಈ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಪರ ಜೋಡೆತ್ತುಗಳು ಪ್ರಚಾರ ಮಾಡುತ್ತಿರುವುದರ ಬಗ್ಗೆ ಮುಖ್ಯಮಂತ್ರಿಗಳು ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ.
ದರ್ಶನ್
ಪ್ರಚಾರ
ಮಾಡುತ್ತಿರುವುದರ
ಬಗ್ಗೆ
ಪ್ರಶ್ನಿಸಿದ್ದಕ್ಕೆ
ನಿಖಿಲ್
ಹೇಳಿದ್ದು
ಹೀಗೆ
'ಯಾವಾಗಲೂ ಛತ್ರಿ ಹಿಡ್ಕೊಂಡು ಸಿನಿಮಾ ಶೂಟಿಂಗ್ ನಲ್ಲಿ ಇರೋರು, ಈಗ ಬಿಸಿಲಿನಲ್ಲಿ ರಸ್ತೆಗೆ ಬಂದದ್ದಾರೆ. ಸ್ವಲ್ಪ ರೈತರ ಬಗ್ಗೆ ತಿಳಿದುಕೊಳ್ಳಲಿ' ಬಿಡಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹಾಗಿದ್ರೆ, ದರ್ಶನ್ ಮತ್ತು ಯಶ್ ಪ್ರಚಾರದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಬೇರೆ ಏನು ಹೇಳಿದ್ರು? ಮುಂದೆ ಓದಿ......

ರೈತರ ಕಷ್ಟ ತಿಳಿದುಕೊಳ್ಳಲಿ
''ಸ್ವಲ್ಪ ಕಷ್ಟ ಪಡಲಿ. ದಿನನಿತ್ಯ ಛತ್ರಿ ಹಿಡ್ಕೊಂಡು ಸಿನಿಮಾ ಶೂಟಿಂಗ್ ನಲ್ಲಿ ಇರೋರು. ಈಗ ಛತ್ರಿ ಬಿಟ್ಟು ಬಿಸಿಲಿಗೆ ಬಂದಿದ್ದಾರೆ. ಹಳ್ಳಿ ಕಡೆ ಓಡಾಡಿ, ನಮ್ಮ ರೈತರ ಕಷ್ಟ ಏನು ಅಂತ ಸ್ವಲ್ಪ ತಿಳಿದುಕೊಳ್ಳಲಿ'' ಎಂದು ಸಿಎಂ ಕುಮಾರಸ್ವಾಮಿ ಚನ್ನರಾಯಪಟ್ಟಣದಲ್ಲಿ ಹೇಳಿದ್ದಾರೆ.
ದರ್ಶನ್
ಬಂದ್ರು
ಅಂತ
ವೋಟ್
ಬರಲ್ಲ:
'ದಾಸ'ನಿಗೆ
ಜಿಟಿ
ದೇವೇಗೌಡ
ಟಾಂಗ್

ಮೂರನೇ ಸ್ಟಾರ್ ನಟರ ಪ್ರಚಾರ
ಏಪ್ರಿಲ್ 1ರಂದು ನಟ ದರ್ಶನ್ ಶ್ರೀರಂಗಪಟ್ಟಣ ಸುತ್ತಾಮುತ್ತಾ ಸುಮಾರು 28 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದರು. ನಂತರ ಏಪ್ರಿಲ್ 2 ರಂದು ದರ್ಶನ್ ಮತ್ತು ಯಶ್ ಇಬ್ಬರು ಪ್ರತ್ಯೇಕವಾಗಿ ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಪ್ರಚಾರ ಮಾಡಿದ್ರು. ಈಗ ಮೂರನೇ ದಿನವೂ ಅಬ್ಬರದ ಪ್ರಚಾರ ಮುಂದುವರಿಸಿದ್ದು, ಕೆಆರ್ ಪೇಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಜಿಟಿ ದೇವೇಗೌಡ ವ್ಯಂಗ್ಯ
ದರ್ಶನ್ ಬಂದ್ರು ಅಂತ ವೋಟ್ ಬರಲ್ಲ. ಈ ಹಿಂದೆ ದರ್ಶನ್ ಪ್ರಚಾರ ಮಾಡಿದ ಏರಿಯಾಗಳಲ್ಲಿ ಮತ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರಿಗೂ ಪ್ರಚಾರ ಮಾಡಿದ್ದರು. ಆದ್ರೆ, ಅವರು ಸೋತಿದ್ದರು. ಈಗಲೂ ಅಷ್ಟೇ ದರ್ಶನ್ ಪ್ರಚಾರ ಮಾಡಿದ್ರೆ ಮತ ಸಿಕ್ಕಲ್ಲ'' ಎಂದು ಸಚಿವ ಜಿಟಿ ದೇವೇಗೌಡ ವ್ಯಂಗ್ಯವಾಗಿ ಮಾತನಾಡಿದ್ದರು.
'ಡಿ
ಬಾಸ್'
ಒಬ್ಬರೇ
ಯಾಕೆ
ಸಿಎಂಗೆ
ಟಾರ್ಗೆಟ್,
ಅದರ
ಹಿಂದಿರುವ
ಕಾರಣಗಳೇ
ಬೇರೆ.!

ಅಂಬಿ ಮನೆ ಮಕ್ಕಳು ನಾವು
''ಇನ್ನು ರಾಜಕಾರಣಿಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಜೋಡೆತ್ತುಗಳು, ನಾವು ಪ್ರಚಾರ ಮಾಡ್ತಿರೋದು ಅಂಬರೀಶ್ ಮನೆ ಮಕ್ಕಳಾಗಿ. ನಾವು ಯಾವುದಕ್ಕೂ ಬೇಜಾರು ಮಾಡಿಕೊಳ್ಳಲ್ಲ, ಕೋಪ ಮಾಡಿಕೊಳ್ಳಲ್ಲ, ನೊಂದುಕೊಳ್ಳಲ್ಲ'' ಎಂದು ದರ್ಶನ್ ಈ ಮೊದಲೇ ಎಲ್ಲದಕ್ಕೂ ಉತ್ತರಿಸಿದ್ದಾರೆ.